ಲಂಡನ್: ಜಾಗತಿಕ ಸಾಂಕ್ರಾಮಿಕ ರೋಗ ಕೊವಿಡ್-19ಗೆ ಪ್ರಪಂಚದಾದ್ಯಂತ ಬಲಿಯಾದವರ ಸಂಖ್ಯೆ 6,036 ಹಾಗೂ ಸೋಂಕಿತರ ಸಂಖ್ಯೆ 1,59,844ಕ್ಕೆ ಏರಿಕೆಯಾಗಿದೆ.
ಕೊವಿಡ್-19ಗೆ ಇರಾನ್ನಲ್ಲಿ ಇಂದು ಒಂದೇ ದಿನಕ್ಕೆ 113 ಮಂದಿ ಸಾವನ್ನಪ್ಪಿದ್ದು, ಈವರೆಗೆ ಒಟ್ಟು 724 ಜನರು ಮೃತಪಟ್ಟಿದ್ದಾರೆ. ಪರಿಸ್ಥಿತಿ ತಿಳಿಯಾಗುವವರೆಗೂ ಮನೆ ಬಿಟ್ಟು ಹೊರಗಡೆ ಬರದಂತೆ ಜನರಿಗೆ ಸೂಚಿಸಲಾಗಿದೆ ಎಂದು ಇರಾನ್ ಆರೋಗ್ಯ ಇಲಾಖೆ ವಕ್ತಾರರು ಮಾಹಿತಿ ನೀಡಿದ್ದಾರೆ.
ಇಟಲಿಯಲ್ಲಿ 24 ಗಂಟೆಗಳಲ್ಲಿ 175 ಸಾವುಗಳು, 3,497 ಹೊಸ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಮೃತರ ಸಂಖ್ಯೆ 1441 ಹಾಗೂ ಸೋಂಕಿತರ ಸಂಖ್ಯೆ 21,157ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸ್ಪೇನ್ನಲ್ಲಿ ಈವರೆಗೆ ಒಟ್ಟು 105 ಮಂದಿ ಬಲಿಯಾಗಿದ್ದಾರೆ.