ಲಂಡನ್: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಆರಂಭಿಕ ದಿನವನ್ನು ವೀಕ್ಷಿಸಿದರು.
ಈ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ಕೊಲಾಜ್ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, ‘1996ರಲ್ಲಿ ಆಟಗಾರನಾಗಿ ಇಲ್ಲಿಗೆ ಬಂದೆ. ಬಳಿಕ ಕ್ಯಾಪ್ಟನ್ ಆಗಿ ಬಂದೆ. ಭಾರತವು ಅಂದಿನಿಂದಲೂ ಉತ್ತಮ ಆಟ ಪ್ರದರ್ಶಿಸುತ್ತಿದೆ. ಈ ಕ್ರಿಕೆಟ್ ಒಂದು ಅದ್ಭುತವಾಗಿದೆ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಗಂಗೂಲಿ ಹಾಜರಿದ್ದರು.
ಇದನ್ನೂ ಓದಿ: ಲಾರ್ಡ್ಸ್ನಲ್ಲಿ ದಾಖಲೆಗಳ ಸುರಿಮಳೆಗೈದ ಕನ್ನಡಿಗ...129ರನ್ಗಳಿಸಿ ವಿಕೆಟ್ ಒಪ್ಪಿಸಿದ ರಾಹುಲ್!
ಫೋಟೋದಲ್ಲಿ ಜಯ್ ಶಾ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ಮುಖ್ಯ ಕಾರ್ಯನಿರ್ವಾಹಕ ಟಾಮ್ ಹ್ಯಾರಿಸನ್ ಜೊತೆಯಲ್ಲಿ ಕುಳಿತಿದ್ದು, ಗಂಗೂಲಿ ಇಂಗ್ಲೆಂಡ್ ದಂತಕಥೆ ಜೆಫ್ರಿ ಬಾಯ್ಕಾಟ್ ಜೊತೆ ಸಂಭಾಷಣೆ ನಡೆಸುತ್ತಿರುವುದು ಕಂಡು ಬಂದಿದೆ.