ETV Bharat / international

ರಫೇಲ್ ಹಗರಣ ಆರೋಪ: ತನಿಖೆಗೆ ಸಮಿತಿ ರಚಿಸಿದ ಫ್ರಾನ್ಸ್​! - ರಾಫೇಲ್

ರಫೇಲ್​​ ಜೆಟ್​ಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ತನಿಖೆ ನಡೆಸಲು ಫ್ರಾನ್ಸ್​ ಸಮಿತಿ ರಚಿಸಿದೆ.

Rafale
Rafale
author img

By

Published : Jul 3, 2021, 2:25 PM IST

ಪ್ಯಾರಿಸ್ (ಫ್ರಾನ್ಸ್): ರಫೇಲ್​ ಜೆಟ್​​ಗಳ ಮಾರಾಟದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆ ತನಿಖೆ ನಡೆಸಲು ನ್ಯಾಯಾಧೀಶರನ್ನು ನಿಯೋಜಿಸಲಾಗಿದೆ ಎಂದು ಫ್ರೆಂಚ್​ ರಾಷ್ಟ್ರೀಯ ಹಣಕಾಸು ಅಭಿಯೋಜಕರ ಕಚೇರಿ ತಿಳಿಸಿದೆ. ಎನ್​ಡಿಎ ನೇತೃತ್ವದ ಸರ್ಕಾರ ಫ್ರಾನ್ಸ್​ನೊಂದಿಗೆ 7.8 ಶತಕೋಟಿ ಯುರೋ ಮೌಲ್ಯದ ರಫೇಲ್​ ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಇದನ್ನು ಯುಪಿಎ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ಹೆಚ್​ಎಎಲ್​​​​​​ ಪ್ರಶ್ನಿಸಿ, ಭ್ರಷ್ಟಾಚಾರದ ಆರೋಪ ಮಾಡಿತ್ತು.

ಇದಕ್ಕೂ ಮುನ್ನ ವಿಮಾನ ತಯಾರಕರಿಂದ 1.1 ಮಿಲಿಯನ್ ಯೂರೋವನ್ನು ಮಧ್ಯವರ್ತಿಗೆ ಪಾವತಿಸಲಾಗಿದೆ ಎಂದು ಆರೋಪಿಸಿ ಫ್ರೆಂಚ್ ಮಾಧ್ಯಮವೊಂದು ವರದಿ ಮಾಡಿತ್ತು. ಫ್ರೆಂಚ್​ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಈ ಆರೋಪದ ತನಿಖೆ ನಡೆಸಿದ್ದು, ಆರೋಪ ಸಾಬೀತಾಗಿತ್ತು. ಹಣ ನೀಡಿರುವುದನ್ನ ಸಮರ್ಥಿಸಿಕೊಂಡಿರುವ ಡಸಾಲ್ಟ್​​, ಗಿಫ್ಟ್ ನೀಡಿದ್ದೇವೆ ಅಷ್ಟೇ ಎಂದಿದೆ.

ಫ್ರೆಂಚ್​ ಏರೋಸ್ಪೇಸ್​ ಡಸಾಲ್ಟ್​ ಏವಿಯೇಷನ್,​​ ಭಾರತದೊಂದಿಗೆ ರಫೇಲ್​ ಫೈಟರ್​ ಜೆಟ್​ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಒಪ್ಪಂದದ ಚೌಕಟ್ಟಿನಲ್ಲಿ ವ್ಯವಹರಿಸುತ್ತೇವೆ ಎಂದು ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ:Jio ಬಳಕೆದಾರರಿಗೆ ಬಂಪರ್​ ಆಫರ್​: ತುರ್ತು ಡೇಟಾ ಸಾಲ ಸೌಲಭ್ಯ ಪ್ರಾರಂಭ

2019 ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ವಿಪಕ್ಷಗಳು ರಫೇಲ್​ ಒಪ್ಪಂದದಲ್ಲಿ ಹಗರಣ ನಡೆದಿದ್ದು, ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದವು. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ಗೆ ಲಾಭ ತರಿಸಲು ಈ ಯೋಜನೆಗೆ ಕೈ ಹಾಕಿದೆ ಎಂದು ಕಾಂಗ್ರೆಸ್ ಪಟ್ಟು ಬಿಡದೆ ಆರೋಪಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.