ETV Bharat / international

ಪ್ಯಾರಿಸ್​ನಲ್ಲಿ ಭಾರತ ಹೊಂದಿದ 20 ಆಸ್ತಿ ಮುಟ್ಟುಗೋಲಿಗೆ ಕೈರ್ನ್​ಗೆ ಅನುಮತಿ ಕೊಟ್ಟ ಫ್ರಾನ್ಸ್​ ಕೋರ್ಟ್​.. - ಭಾರತದ 20 ಆಸ್ತಿ ಮುಟ್ಟುಗೋಲು ಸುದ್ದಿ

ಭಾರತ ಸರ್ಕಾರವು ಪ್ಯಾರಿಸ್‌ನಲ್ಲಿ ಹೊಂದಿದ್ದ ಕಟ್ಟಡಗಳ ಮೌಲ್ಯವು ಸುಮಾರು ₹175 ಕೋಟಿ ಎಂದು ಅಂದಾಜಿಸಲಾಗಿದೆ. ಭಾರತದ ರಾಯಭಾರ ಕಚೇರಿಯ ಸಿಬ್ಬಂದಿಯ ವಾಸ್ತವ್ಯಕ್ಕೆ ಈ ಕಟ್ಟಡಗಳನ್ನು ಬಳಸಲಾಗುತ್ತಿತ್ತು. ಕೈರ್ನ್‌ ಸಂಸ್ಥೆಯು ಭಾರತದ ಸಿಬ್ಬಂದಿಯನ್ನು ಕಟ್ಟಡಗಳಿಂದ ಹೊರಗೆ ಹಾಕುವ ಸಾಧ್ಯತೆ ಇಲ್ಲ..

French court allows Cairn to seize 20 Indian govt properties,  French court allows Cairn to seize 20 Indian govt properties in Paris, Paris news, Indian govt properties, Indian govt properties seize, Indian govt properties seize news, ಭಾರತದ 20 ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ, ಕೈರ್ನ್​ಗೆ ಫ್ರಾನ್ಸ್​ ಕೋರ್ಟ್​ ಭಾರತದ 20 ಆಸ್ತಿ ಮುಟ್ಟುಗೋಲು ಅನುಮತಿ, ಪ್ಯಾರಿಸ್​ನಲ್ಲಿ ಕೈರ್ನ್​ಗೆ ಫ್ರಾನ್ಸ್​ ಕೋರ್ಟ್​ ಭಾರತದ 20 ಆಸ್ತಿ ಮುಟ್ಟುಗೋಲು ಅನುಮತಿ, ಭಾರತದ 20 ಆಸ್ತಿ ಮುಟ್ಟುಗೋಲು, ಭಾರತದ 20 ಆಸ್ತಿ ಮುಟ್ಟುಗೋಲು ಸುದ್ದಿ,
ಸಂಗ್ರಹ ಚಿತ್ರ
author img

By

Published : Jul 9, 2021, 7:40 AM IST

ಫ್ರಾನ್ಸ್ : ಪ್ಯಾರಿಸ್‌ನಲ್ಲಿ ಹೊಂದಿರುವ ಭಾರತ ಸರ್ಕಾರದ 20 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ರಿಟನ್‌ನ ಕೈರ್ನ್‌ ಎನರ್ಜಿ ಸಂಸ್ಥೆಗೆ ಫ್ರಾನ್ಸ್ ನ್ಯಾಯಾಲಯವು ಅನುಮತಿ ಕೊಟ್ಟಿದೆ. ಪ್ಯಾರಿಸ್‌ನಲ್ಲಿ ಭಾರತವು ಹೊಂದಿರುವ ಕಟ್ಟಡಗಳನ್ನು ವಶಕ್ಕೆ ಪಡೆಯಲು ಜೂನ್‌ 11ರಂದೇ ಫ್ರಾನ್ಸ್‌ನ ನ್ಯಾಯಾಲಯವು ಅನುಮತಿ ನೀಡಿತ್ತು. ಇತರ ಕಾನೂನು ಪ್ರಕ್ರಿಯೆಗಳು ಬುಧವಾರ ಸಂಜೆ ಪೂರ್ಣಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಕೈರ್ನ್‌ ಎನರ್ಜಿ ಸಂಸ್ಥೆಗೆ ಭಾರತವು ಸುಮಾರು ₹12,850 ಕೋಟಿಯಷ್ಟು ತೆರಿಗೆಯನ್ನು ಪೂರ್ವಾನ್ವಯವಾಗಿ ಹೇರಿತ್ತು. ಇದನ್ನು ಸಂಸ್ಥೆಯು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು. ಈ ನ್ಯಾಯಮಂಡಳಿಯು ಸಂಸ್ಥೆಯ ಪರವಾಗಿ ತೀರ್ಪು ನೀಡಿತ್ತು.

ಭಾರತ ಸರ್ಕಾರವು ಪ್ಯಾರಿಸ್‌ನಲ್ಲಿ ಹೊಂದಿದ್ದ ಕಟ್ಟಡಗಳ ಮೌಲ್ಯವು ಸುಮಾರು ₹175 ಕೋಟಿ ಎಂದು ಅಂದಾಜಿಸಲಾಗಿದೆ. ಭಾರತದ ರಾಯಭಾರ ಕಚೇರಿಯ ಸಿಬ್ಬಂದಿಯ ವಾಸ್ತವ್ಯಕ್ಕೆ ಈ ಕಟ್ಟಡಗಳನ್ನು ಬಳಸಲಾಗುತ್ತಿತ್ತು. ಕೈರ್ನ್‌ ಸಂಸ್ಥೆಯು ಭಾರತದ ಸಿಬ್ಬಂದಿಯನ್ನು ಕಟ್ಟಡಗಳಿಂದ ಹೊರಗೆ ಹಾಕುವ ಸಾಧ್ಯತೆ ಇಲ್ಲ.

ಆದರೆ, ಈ ಕಟ್ಟಡಗಳನ್ನು ಭಾರತವು ಮಾರಾಟ ಮಾಡಲು ಅವಕಾಶ ಇಲ್ಲವಾಗಿದೆ. ಕೈರ್ನ್‌ ಪರವಾಗಿ ತೀರ್ಪು ನೀಡಿದ್ದ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ಭಾರತದ ಒಬ್ಬ ನ್ಯಾಯಾಧೀಶರು ಇದ್ದರು. ಭಾರತ ಸರ್ಕಾರವು ಮುಟ್ಟುಗೋಲು ಹಾಕಿಕೊಂಡಿದ್ದ ಸಂಸ್ಥೆಯ ಷೇರುಗಳು ಮತ್ತು ಇತರ ಆಸ್ತಿಯನ್ನು ಹಿಂದಿರುಗಿಸಲು ನ್ಯಾಯಮಂಡಳಿಯು ಸೂಚಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.