ಸ್ಕೋಪ್ಜೆ(ಉತ್ತರ ಮ್ಯಾಸಿಡೋನಿಯಾ): ಕೋವಿಡ್ ರೋಗಿಗಳಿಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ, ಕನಿಷ್ಠ 10 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಮ್ಯಾಸಿಡೋನಿಯಾದಲ್ಲಿ ನಡೆದಿದೆ.
ಉತ್ತರ ಮ್ಯಾಸಿಡೋನಿಯಾದ ಪೊಲೀಸರು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಮ್ಯಾಸಿಡೋನಿಯಾದ ಪಶ್ಚಿಮ ನಗರವಾದ ಟೆಟೊವೋದಲ್ಲಿ ಬುಧವಾರ ತಡರಾತ್ರಿ ಈ ಅವಘಡ ಸಂಭವಿಸಿದೆ. ಇತ್ತೀಚೆಗೆ ಸೋಂಕುಗಳು ಹೆಚ್ಚಾದ ನಂತರ ಈ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು.
ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ರೋಗಿಗಳು ಗಾಯಗೊಂಡಿದ್ದು, ಅವರನ್ನು ರಾಜಧಾನಿ ಸ್ಕೋಪ್ಜೆಯಿಂದ 45 ಕಿಲೋಮೀಟರ್ ದೂರದ ಆಸ್ಪತ್ರೆಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣಗಳು ತಿಳಿದುಬಂದಿಲ್ಲ ಎಂದು ಅಲ್ಲಿನ ಪ್ರಧಾನಮಂತ್ರಿ ಜೊರನ್ ಝೇವ್ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.