ಲಂಡನ್ (ಯು.ಕೆ): ಎರಡು ದಶಕಗಳ ಸೇನಾ ಕಾರ್ಯಚರಣೆಯ ಬಳಿಕ ಅಫ್ಘನ್ ನೆಲದಿಂದ ಯುಕೆ ಸೇನೆಯು ತವರಿಗೆ ಮರಳಿತು. ಈ ಬಗ್ಗೆ ಪ್ರಧಾನಿ ಬೋರಿಸ್ ಜಾನ್ಸನ್ ಪ್ರತಿಕ್ರಿಯಿಸಿದ್ದು, ಎಲ್ಲಾ ನಾಗರಿಕರನ್ನು ಅಲ್ಲಿಂದ ಕರೆತರಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಅಫ್ಘನ್ ನೆಲದಿಂದ ಯುಕೆಯ ಕೊನೆಯ ಏರ್ಲಿಫ್ಟ್ ನಡೆದಿದ್ದು, ವಿಮಾನದಲ್ಲಿ ಸಾವಿರ ಮಂದಿ ಸ್ವದೇಶಕ್ಕೆ ಮರಳಿದ್ದಾರೆ. ಈ ವಿಮಾನದಲ್ಲಿ ಯುಕೆ ಹಾಗೂ ಅಫ್ಘನ್ ಪ್ರಜೆಗಳಿದ್ದಾರೆ ಎಂದು ಅಫ್ಘನ್ನಲ್ಲಿರುವ ಯುಕೆ ರಾಯಭಾರಿ ಲೌರಿ ಬ್ರಿಸ್ಟೋ ತಿಳಿಸಿದರು. ಈ ಕಾರ್ಯಾಚರಣೆ ಇಲ್ಲಿಗೆ ಕೊನೆಯಾಗುತ್ತಿದೆ ಎಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ತಾಯ್ನಾಡಿಗೆ ಮರಳುವ ಮುನ್ನ ಅವರು ಹೇಳಿದ್ದಾರೆ.
ಆದರೆ ಇಲ್ಲಿಂದ ಬೇರೆಡೆ ತೆರಳಲು ಸಿದ್ಧರಿರುವವರನ್ನು ನಾವೆಂದೂ ಮರೆಯುವುದಿಲ್ಲ. ಅವರಿಗೆ ಬೇಕಾದ ಸಹಾಯವನ್ನು ನಾವು ಮಾಡುತ್ತೇವೆ. ಅಫ್ಘನ್ನಲ್ಲಿರುವ ಧೈರ್ಯವಂತ ಹಾಗೂ ಶಾಂತಿಯುತ ಪ್ರಜೆಗಳನ್ನು ನಾವು ಮರೆಯುವುದಿಲ್ಲ. ಅವರು ಸುರಕ್ಷಿತ ಹಾಗೂ ಶಾಂತಿಯಿಂದ ಬದುಕಲು ಅರ್ಹರಾಗಿದ್ದಾರೆ. ಕಳೆದೊಂದು ವಾರದಿಂದ ಕಾಬೂಲ್ ವಿಮಾನ ನಿಲ್ದಾಣದಿಂದ ಸುಮಾರು 15 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ಇಸ್ರೇಲ್ ಸೈನಿಕರು, ಪ್ಯಾಲೆಸ್ತೀನ್ ಪ್ರತಿಭಟನಾಕಾರರ ನಡುವೆ ಮತ್ತೆ ಘರ್ಷಣೆ: 7 ಮಂದಿಗೆ ಗಾಯ