ನವದೆಹಲಿ : ಉಕ್ರೇನ್‌ನ ಮೇಲೆ ರಷ್ಯಾದ ದಾಳಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿ ಸಿಲುಕಿರುವ ತನ್ನ ಪ್ರಜೆಗಳಿಗೆ ಎಲ್ಲಾ ಸಮಯದಲ್ಲೂ ಎಚ್ಚರಿಕೆ ವಹಿಸುವಂತೆ ಭಾರತ ಸರ್ಕಾರ ಶನಿವಾರ ಸಲಹೆ ನೀಡಿದೆ.
ಉಕ್ರೇನ್‌ನ ಹಲವಾರು ನಗರಗಳ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಗಳು ಮತ್ತು ಉಕ್ರೇನ್ ರಾಜಧಾನಿ ಕೀವ್ ಮೇಲಿನ ಆಕ್ರಮಣದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಸಲಹೆ ನೀಡಲಾಗಿದೆ.
ವಿದ್ಯಾರ್ಥಿಗಳು ಮತ್ತು ಇತರರು ಅಧಿಕಾರಿಗಳೊಂದಿಗೆ ಯಾವುದೇ ಮಾತುಕತೆ ನಡೆಸದೇ, ಉಕ್ರೇನ್ನಿಂದ ನಿರ್ಗಮಿಸಲು ಯಾವುದೇ ಗಡಿಗಳಿಗೆ ತೆರಳದಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸೂಚನೆ ನೀಡಲಾಗಿದೆ.
-
Advisory to all Indian Nationals/Students in Ukraine
— India in Ukraine (@IndiainUkraine) February 26, 2022 " class="align-text-top noRightClick twitterSection" data="
as on 26 February 2022.@MEAIndia @PIB_India @PIBHindi @DDNewslive @DDNewsHindi @DDNational @IndianDiplomacy pic.twitter.com/yN6PT2Yi8c
">Advisory to all Indian Nationals/Students in Ukraine
— India in Ukraine (@IndiainUkraine) February 26, 2022
as on 26 February 2022.@MEAIndia @PIB_India @PIBHindi @DDNewslive @DDNewsHindi @DDNational @IndianDiplomacy pic.twitter.com/yN6PT2Yi8cAdvisory to all Indian Nationals/Students in Ukraine
— India in Ukraine (@IndiainUkraine) February 26, 2022
as on 26 February 2022.@MEAIndia @PIB_India @PIBHindi @DDNewslive @DDNewsHindi @DDNational @IndianDiplomacy pic.twitter.com/yN6PT2Yi8c
ಉಕ್ರೇನ್‌ನ ಪೂರ್ವ ಭಾಗದಲ್ಲಿ ಇರುವವರು ತಾವು ಇರುವ ಸ್ಥಳಗಳಲ್ಲೇ ಉಳಿಯಿರಿ ಅಥವಾ ಸಾಧ್ಯವಾದಷ್ಟು ಸುರಕ್ಷಿತವಾದ ಒಳಾಂಗಣಗಳಲ್ಲಿ ಉಳಿದುಕೊಳ್ಳಿ ಎಂದು ರಾಯಭಾರ ಕಚೇರಿ ಭಾರತೀಯರಿಗೆ ಸಲಹೆ ನೀಡಿದೆ.
ಉಕ್ರೇನ್ ಗಡಿಗಳಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ ಮತ್ತು ರಾಯಭಾರ ಕಚೇರಿಯು ನೆರೆಯ ದೇಶಗಳ ಸಹಾಯದೊಂದಿಗೆ ನಾಗರಿಕರನ್ನು ಸ್ಥಳಾಂತರ ಮಾಡಲು ಸತತವಾಗಿ ಕಾರ್ಯನಿರ್ವಹಿಸುತ್ತಿದೆ.
ಪೂರ್ವ ಸೂಚನೆ ಇಲ್ಲದೇ ಭಾರತೀಯ ಗಡಿಭಾಗಗಳಿಗೆ ತೆರಳಿದರೆ, ಅವರನ್ನು ಕರೆತರುವುದು ಕಷ್ಟವಾಗಲಿದೆ ಎಂದು ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಇಷ್ಟು ಮಾತ್ರವಲ್ಲದೇ ಹಂಗೇರಿ, ರೊಮೇನಿಯಾ ಮತ್ತು ಪೋಲೆಂಡ್‌ಗೆ ಭಾರತೀಯರನ್ನು ಸಾಗಿಸಲು ಅನುಕೂಲವಾಗುವಂತೆ ಪಶ್ಚಿಮ ಉಕ್ರೇನ್‌ನ ಎಲ್ವಿವ್ ಮತ್ತು ಚೆರ್ನಿವ್ಟ್ಸಿ ನಗರಗಳಲ್ಲಿ ಶಿಬಿರಗಳನ್ನು ಸ್ಥಾಪಿಸುವಲ್ಲಿ ಭಾರತದ ರಾಯಭಾರ ಕಚೇರಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ನೆರವಿಗೆ ಸಹಾಯವಾಣಿ