ETV Bharat / international

ಕೊರೊನಾ ಹಾವಳಿ: ಭಾರತದ ಪ್ರವಾಸ ರದ್ಧುಗೊಳಿಸಿದ ಇಂಗ್ಲೆಂಡ್ ಪ್ರಧಾನಿ!

ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಲಂಡನ್​ ಪ್ರಧಾನಿ ತಮ್ಮ ಭಾರತದ ಪ್ರವಾಸ ರದ್ದುಗೊಳಿಸಿ ಮಹತ್ವದ ಆದೇಶ ಹೊರಹಾಕಿದ್ದಾರೆ.

author img

By

Published : Apr 19, 2021, 3:39 PM IST

Boris Johnson
Boris Johnson

ಲಂಡನ್​: ಭಾರತದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿಯ ಎರಡನೇ ಅಲೆ ಜೋರಾಗಿದ್ದು, ಇದೇ ಕಾರಣಕ್ಕಾಗಿ ಲಂಡನ್​ ಪ್ರಧಾನಿ ಭಾರತದ ಪ್ರವಾಸ ರದ್ದುಗೊಳಿಸಿದ್ದಾರೆ.

ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತಕ್ಕೆ ವಿಶೇಷ ಅತಿಥಿಯಾಗಿ ಇಂಗ್ಲೆಂಡ್​ ಪ್ರಧಾನಿ ಬೋರಿಸ್​ ಜಾನ್ಸನ್​ ಆಗಮಿಸಬೇಕಾಗಿತ್ತು. ಆದರೆ, ಕೊರೊನಾ ಹಾವಳಿ ಹೆಚ್ಚಾದ ಕಾರಣ ಅವರು ತಮ್ಮ ಭಾರತ ಭೇಟಿ ರದ್ಧುಗೊಳಿಸಿದ್ದರು. ಇದಾದ ಬಳಿಕ ಅವರು ಏಪ್ರಿಲ್ ಅಂತ್ಯಕ್ಕೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅಲ್ಲಿನ ಪ್ರಧಾನಿ ಕಚೇರಿ ಮಾಹಿತಿ ನೀಡಿತ್ತು.

  • In view of the #COVID19 situation, it has been decided by mutual agreement that the Prime Minister of the United Kingdom will not visit India next week. The two sides will be holding a virtual meeting in the coming days to launch plans for a transformed India-UK relationship: MEA pic.twitter.com/RVpQD9JIwf

    — ANI (@ANI) April 19, 2021 " class="align-text-top noRightClick twitterSection" data=" ">

ಆದರೆ, ಸದ್ಯ ದೇಶದಲ್ಲಿ ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿರುವ ಕಾರಣ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ. ಆದರೆ ಉಭಯ ದೇಶದ ಪ್ರಧಾನಿಗಳು ವರ್ಚುಯಲ್​ ಸಭೆ ನಡೆಸಿ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಯುರೋಪಿಯನ್​ ಯೂನಿಯನ್​​ನಿಂದ ಇಂಗ್ಲೆಂಡ್​ ಹೊರ ಬಿದ್ದಾಗಿನ ಬಳಿಕ ಬೋರಿಸ್​ ಜಾನ್ಸನ್​​​ ಭಾರತದ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.