ಅಂಟಾರ್ಕ್ಟಿಕಾ: ಜಗತ್ತಿನಾದ್ಯಂತ ಕೊರೊನಾ ಅಟ್ಟಹಾಸದ ನಡುವೆ ಅಂಟಾರ್ಕ್ಟಿಕಾ ಕೊರೊನಾ ವೈರಸ್ ಮುಕ್ತ ವಿಶ್ವದ ಏಕೈಕ ಖಂಡವಾಗಿತ್ತು. ಆದರೆ ಈಗ ಅಲ್ಲಿಯೂ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ.
ಚಿಲಿಯ ಸಂಶೋಧನಾ ನೆಲೆಯೊಂದರಲ್ಲಿ 36 ಮಂದಿ ಕೊರೊನಾ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಚಿಲಿ ಸಶಸ್ತ್ರ ಪಡೆಯ 26 ಸದಸ್ಯರು ಮತ್ತು ಅಂಟಾರ್ಕ್ಟಿಕಾ ಪೆನಿನ್ಸುಲಾದ ಜನರಲ್ ಬರ್ನಾರ್ಡೊ ಒ'ಹಿಗ್ಗಿನ್ಸ್ ನೆಲೆಯಲ್ಲಿ ಬೀಡು ಬಿಟ್ಟಿರುವ 10 ನಾಗರಿಕ ಗುತ್ತಿಗೆದಾರರಲ್ಲಿ ಕೊರೊನಾ ವೈರಸ್ ಸೋಂಕು ಗೋಚರಿಸಿದೆ.
ಓದಿ: ಭಾರತೀಯ ಮೂಲದ ಮತ್ತಿಬ್ಬರಿಗೆ ಶ್ವೇತಭವನದಲ್ಲಿ ಮಣೆ ಹಾಕಿದ ಜೋ ಬೈಡನ್
ಸೋಂಕಿತರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದ್ದು, ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸೇನೆ ಹೇಳಿದೆ. ಕೆಲವರಲ್ಲಿ ರೋಗ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 36 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.