ETV Bharat / international

ಬಸ್​ ಚಲಾಯಿಸುತ್ತಿದ್ದಂತೆ ನಿದ್ರೆಗೆ ಜಾರಿದ ಚಾಲಕ.. ಮುಂದಾಗಿದ್ದು ಮಾತ್ರ ಘೋರ ದುರಂತ! - Croatian capital of Zagreb

ಬಸ್​ ಚಲಾಯಿಸುತ್ತಿದ್ದ ಸಮಯದಲ್ಲಿ ಚಾಲಕ ನಿದ್ರೆಗೆ ಜಾರಿ ಭೀಕರ ಅಪಘಾತ ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದಾರೆ.

ಘೋರ ದುರಂತ
ಘೋರ ದುರಂತ
author img

By

Published : Jul 26, 2021, 8:53 AM IST

ಕ್ರೊಯೇಷಿಯಾ: ಬಸ್​ ಚಲಾಯಿಸುತ್ತಿದ್ದ ವ್ಯಕ್ತಿ ನಿದ್ರೆಗೆ ಜಾರಿದ್ದಕ್ಕೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಝಾಗ್ರೆಬ್​​ ಮತ್ತು ಸರ್ಬಿಯನ್​​ ಗಡಿಯಲ್ಲಿ ನಡೆದಿದೆ. ಘಟನೆಯಲ್ಲಿ 10 ಜನರು ಮೃತಪಟ್ಟಿದ್ದು, ಕನಿಷ್ಠ 44 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್​ನಲ್ಲಿ ಮಕ್ಕಳು ಸೇರಿದಂತೆ 67 ಪ್ರಯಾಣಿಕರು ಇದ್ದು, ಅವರೆಲ್ಲರೂ ಜರ್ಮನಿಯ ಫ್ರಾಂಕ್​ಫರ್ಟ್​ನಿಂದ ಕೊಸಾವೊದ ರಾಜಧಾನಿ ಪ್ರಿಸ್ಟಿನಾಗೆ ಪ್ರವಾಸ ಕೈಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, 8 ಜನರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಸ್ಲಾವೊನ್ಸ್ಕಿ ಬ್ರಾಡ್ ಆಸ್ಪತ್ರೆಯ ಮುಖ್ಯಸ್ಥ ಜೋಸಿ​ ಸಮರ್ಡ್​ಜಿಕ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತುಮಕೂರು: ಟ್ರ್ಯಾಕ್ಟರ್​​ ಪಲ್ಟಿಯಾಗಿ ಮಗು ಸಾವು, ಐವರಿಗೆ ಗಾಯ

ಬಸ್​ ಚಾಲನೆ ಮಾಡುತ್ತಿದ್ದಂತೆ ಚಾಲಕ ನಿದ್ದೆಗೆ ಜಾರಿದ್ದಾನೆ. ಹಾಗಾಗಿ ಬಸ್​​​ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ. ಘಟನೆಗೆ ಕ್ರೊಯೇಷಿಯಾದ ಪ್ರಧಾನಿ ಆಂಡ್ರೆಜ್ ಪ್ಲೆನ್ಕೊವಿಕ್ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಇಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನಾಗಿ ಅಲ್ಲಿನ ಪ್ರಧಾನಿ ಘೋಷಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.