ETV Bharat / international

ಫೆಲಿಸಿಟಿ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ: ಸಿಬ್ಬಂದಿ ಇಲ್ಲದೇ ತೇಲುತ್ತಿರುವ ಹಡಗು - ಫೆಲಿಸಿಟಿ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ

ಮಧ್ಯ ಅಟ್ಲಾಂಟಿಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಫೆಲಿಸಿಟಿ ವಾಹನ ಸಾಗಾಟದ ಹಡಗು ತೇಲುತ್ತಿರುವುದಾಗಿ ಪೋರ್ಚುಗೀಸ್ ನೌಕಾಪಡೆ ತಿಳಿಸಿದೆ. ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ರಕ್ಷಿಸಿದ ಬಳಿಕ ಬೆಂಕಿ ಕಾಣಿಸಿಕೊಂಡ ಫೆಲಿಸಿಟಿ ಏಸ್ ಹಡಗು ಪೋರ್ಚುಗಲ್‌ನ ಅಜೋರ್ಸ್ ದ್ವೀಪಗಳ ಬಳಿ ತೇಲುತ್ತಿರುವ ಬಗ್ಗೆ ವರದಿಯಾಗಿದೆ.

burning-cargo-ship-is-adrift-in-mid-atlantic-without-crew
ಫೆಲಿಸಿಟಿ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ: ಸಿಬ್ಬಂದಿ ಇಲ್ಲದೆ ತೇಲುತ್ತಿರುವ ಹಡಗು
author img

By

Published : Feb 19, 2022, 12:01 PM IST

ಲಿಸ್ಬನ್ (ಪೋರ್ಚುಗಲ್): ಬೆಂಕಿಯ ಕಾರಣದಿಂದ ಬೃಹತ್ ಹಡಗಿನ 22 ಸಿಬ್ಬಂದಿಯನ್ನು ಪೋರ್ಚುಗೀಸ್​​​​ನ ನೌಕಾದಳ ರಕ್ಷಿಸಿದ ಘಟನೆ ನಡೆದಿದೆ. ಮಧ್ಯ ಅಟ್ಲಾಂಟಿಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಫೆಲಿಸಿಟಿ ಏಸ್ ಹಡಗು ತೇಲುತ್ತಿರುವುದಾಗಿ ಪೋರ್ಚುಗೀಸ್ ನೌಕಾಪಡೆ ತಿಳಿಸಿದೆ. ಸಿಬ್ಬಂದಿಯನ್ನು ರಕ್ಷಿಸಿದ ಬಳಿಕ ಫೆಲಿಸಿಟಿ ಏಸ್ ಹಡಗು ಪೋರ್ಚುಗಲ್‌ನ ಅಜೋರ್ಸ್ ದ್ವೀಪಗಳ ಬಳಿ ತೇಲುತ್ತಿರುವ ಬಗ್ಗೆ ವರದಿಯಾಗಿದೆ.

ಈ ಪ್ರದೇಶದಲ್ಲಿ ಇತರ ಹಡಗುಗಳ ಸಾಗಣೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೋರ್ಚುಗೀಸ್ ನೌಕಾಪಡೆಯ ವಕ್ತಾರ ಸಿಎಮ್‌ಡಿಆರ್ ಜೋಸ್ ಸೌಸಾ ಲೂಯಿಸ್ ಹೇಳಿದ್ದಾರೆ. ಫೆಲಿಸಿಟಿ ಏಸ್ ಹಡಗು 17,000 ಮೆಟ್ರಿಕ್ ಟನ್ (18,700 ಟನ್) ಗಿಂತ ಹೆಚ್ಚಿನ ಸರಕುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ಈ ಹಡಗುಗಳು ಬಹು ಡೆಕ್‌ಗಳಲ್ಲಿ ಸಾವಿರಾರು ವಾಹನಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿವೆ. ಈ ಹಡಗಿನಲ್ಲಿ ಸುಮಾರು ನಾಲ್ಕು ಸಾವಿರ ಕಾರುಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಫೆಲಿಸಿಟಿ ಏಸ್ ಹಡಗು ಜರ್ಮನ್ ವಾಹನ ತಯಾರಕರು ಉತ್ಪಾದಿಸಿದ ವಾಹನಗಳನ್ನು ಯುಸ್​​​ಗೆ ಸಾಗಿಸುತ್ತಿರುವುದಾಗಿ ವೋಕ್ಸ್‌ವ್ಯಾಗನ್ ಗ್ರೂಪ್ ಹೇಳಿದೆ. ಪೋರ್ಚುಗೀಸ್ ನೌಕಾಪಡೆಯ ಹಡಗಿನಲ್ಲಿ ದುಬಾರಿ ವಾಹನ ಸಾಗಣೆ ನಡೆಸಲಾಗಿದ್ದು, ಜರ್ಮನಿಯ ಎಂಡೆನ್‌ನಿಂದ ಅಮೆರಿಕದ ರೋಡ್ ಐಲೆಂಡ್‌ನ ಡೇವಿಸ್‌ವಿಲ್ಲೆ ಬಂದರಿಗೆ ಹಡಗು ಪ್ರಯಾಣಿಸುತ್ತಿತ್ತು ಎಂದು ತಿಳಿದು ಬಂದಿದೆ.

ಕೆಲವು ಮಾಧ್ಯಮಗಳ ವರದಿ ಪ್ರಕಾರ ಬೆಂಕಿ ಇನ್ನೂ ಉರಿಯುತ್ತಿದೆ ಮತ್ತು ದಟ್ಟವಾದ ಹೊಗೆ ಆವರಿಸಿದ ಛಾಯಾಚಿತ್ರವು ದೊರಕಿದೆ ಎಂದು ನೌಕಾಪಡೆ ತಿಳಿಸಿದೆ. ಹಡಗಿನಲ್ಲಿದ್ದ ಸಿಬ್ಬಂದಿಗಳನ್ನು ಬುಧವಾರ ಹೆಲಿಕಾಪ್ಟರ್‌ನಲ್ಲಿ ದ್ವೀಪಸಮೂಹದ ಫೈಯಲ್ ದ್ವೀಪಕ್ಕೆ ಕರೆದೊಯ್ಯಲಾಗಿದ್ದು, ಅವರೆಲ್ಲ ಅಲ್ಲಿನ ಹೋಟೆಲ್‌ನಲ್ಲಿ ತಂಗಿದ್ದಾರೆ. ಎಲ್ಲ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ನೌಕಾಪಡೆ ಮೂಲಗಳು ಸ್ಪಷ್ಟಪಡಿಸಿವೆ.

ಓದಿ : ಸ್ಯಾಂಡಲ್​ವುಡ್ ಹಿರಿಯ ನಟ ರಾಜೇಶ್ ಇನ್ನಿಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.