ಲಂಡನ್: ಬ್ರಿಟಿಷ್ ಏರ್ವೇಸ್ ಸೋಮವಾರದಂದು ಜಾಗತಿಕ ಮುಷ್ಕರಕ್ಕೆ ಕರೆ ನೀಡಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಇದು ಶತಮಾನದ ಬಹುದೊಡ್ಡ ಜಾಗತಿಕ ಪ್ರತಿಭಟನೆ ಎಂದು ಹೇಳಲಾಗಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಬ್ರಿಟಿಷ್ ಏರ್ವೇಸ್ನ ಒಂದೂವರೆ ಸಾವಿರಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಇನ್ನೆರಡು ದಿನಗಳ ಕಾಲ ಬ್ರಿಟಿಷ್ ಏರ್ವೇಸ್ ವಿಮಾನ ಹಾರಾಟ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ನಿಚ್ಚಳವಾಗಿದೆ. ಪರಿಣಾಮ ಮೂರು ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಅಂದಾಜಿಸಲಾಗಿದೆ.
-
British Airways says it has cancelled nearly all flights due to pilot strike: Reuters pic.twitter.com/EqjX1B8sxt
— ANI (@ANI) September 9, 2019 " class="align-text-top noRightClick twitterSection" data="
">British Airways says it has cancelled nearly all flights due to pilot strike: Reuters pic.twitter.com/EqjX1B8sxt
— ANI (@ANI) September 9, 2019British Airways says it has cancelled nearly all flights due to pilot strike: Reuters pic.twitter.com/EqjX1B8sxt
— ANI (@ANI) September 9, 2019
ಬ್ರಿಟಿಷ್ ಏರ್ಲೈನ್ ಪೈಲಟ್ ಅಸೋಸಿಯೇಷನ್ ಹಾಗೂ ಬ್ರಿಟಿಷ್ ಏರ್ಲೈನ್ಸ್ ನಡುವೆ ಸಂಬಳ ವಿಚಾರದಲ್ಲಿ ಕೊಂಚ ಭಿನ್ನಾಭಿಪ್ರಾಯ ಉದ್ಭವಿಸಿದೆ. ಕಳೆದ ಒಂಭತ್ತು ತಿಂಗಳಿನಿಂದ ಸಮರ್ಪಕವಾಗಿ ಸಂಬಳ ನೀಡಿಲ್ಲ ಎಂದು ಪೈಲಟ್ಗಳು ಸದ್ಯ ಮುಷ್ಕರದ ಹಾದಿ ಹಿಡಿದಿದ್ದಾರೆ.
ಜುಲೈನಲ್ಲಿ ಬ್ರಿಟಿಷ್ ಏರ್ಲೈನ್ಸ್ ಮುಂದಿನ ಮೂರು ವರ್ಷಕ್ಕೆ ಶೇ.11.5ರಷ್ಟು ಸಂಬಳ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿತ್ತು. ಆದರೆ, ಬ್ರಿಟಿಷ್ ಏರ್ಲೈನ್ಸ್ ಇದಷ್ಟು ತಳ್ಳಿಹಾಕಿತ್ತು. ಸದ್ಯದ ಪ್ರತಿಭಟನೆ ಕಂಪನಿಗೆ ಬಹುದೊಡ್ಡ ಹೊಡೆತ ನೀಡಲಿದೆ ಎಂದು ಅಂದಾಜಿಸಲಾಗಿದೆ.