ETV Bharat / international

ಅಫ್ಘನ್​ನಿಂದ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆಗಸ್ಟ್ 31ರೊಳಗೆ ಮುಗಿಯಲಿದೆ : ಬ್ರಿಟನ್

author img

By

Published : Aug 25, 2021, 5:26 PM IST

ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಸುಮಾರು 6,000 ಯೋಧರಿದ್ದಾರೆ. ಈ ಸೇನೆಯ ಜತೆಗೆ ಇತರೆ ರಾಷ್ಟ್ರಗಳ ಯೋಧರು, ತಾಲಿಬಾನ್​ನಿಂದ ತಪ್ಪಿಸಿಕೊಳ್ಳಲು ಜನರಿಗೆ ಸಹಾಯ ಮಾಡುತ್ತಿವೆ..

Britain
Britain

ಲಂಡನ್ : ಅಫ್ಘಾನಿಸ್ತಾನದಿಂದ ಬ್ರಿಟನ್​ ಜನರನ್ನು ಸ್ಥಳಾಂತರಿಸುವ ವಿಮಾನಗಳ ಹಾರಾಟದ ಅಂತ್ಯದ ಬಗ್ಗೆ ನಿಖರವಾದ ಟೈಮ್​ಲೈನ್ ನೀಡಲು ಸಾಧ್ಯವಿಲ್ಲ ಎಂದು ಬ್ರಿಟನ್​ನ ವಿದೇಶಾಂಗ ಸಚಿವರು ಹೇಳಿದ್ದಾರೆ.

ಆದರೆ, ಆಗಸ್ಟ್​ 31ರೊಳಗೆ ಈ ಮಿಷನ್​ ಮುಕ್ತಾಯವಾಗಲಿದೆ. ಅಷ್ಟರೊಳಗೆ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಸ್ಪಷ್ಟವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ತಿಳಿಸಿದ್ದಾರೆ.

ಸ್ಥಳಾಂತರ ಕಾರ್ಯಾಚರಣೆಯನ್ನು ವಿಸ್ತರಿಸುವಂತೆ ಬ್ರಿಟನ್ ಮತ್ತು ಇತರ ಮಿತ್ರರಾಷ್ಟ್ರಗಳು ಅಮೆರಿಕದ ಮೇಲೆ ಒತ್ತಡ ಹೇರಿದ್ದವು. ಆದರೆ, ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಸುಮಾರು 6,000 ಯೋಧರಿದ್ದಾರೆ. ಈ ಸೇನೆಯ ಜತೆಗೆ ಇತರೆ ರಾಷ್ಟ್ರಗಳ ಯೋಧರು, ತಾಲಿಬಾನ್​ನಿಂದ ತಪ್ಪಿಸಿಕೊಳ್ಳಲು ಜನರಿಗೆ ಸಹಾಯ ಮಾಡುತ್ತಿವೆ.

ಬ್ರಿಟಿಷ್​ ಮಿಲಿಟರಿ ತನ್ನ ಸೇನೆ ಹಾಗೂ ಉಪಕರಣಗಳನ್ನು ಹಿಂತೆದುಕೊಳ್ಳಲು ಸಮಯ ಬೇಕಾಗುತ್ತದೆ. ಆದರೆ, ಉಳಿದಿರುವ ಸಮಯದಲ್ಲಿ ಹೆಚ್ಚಿನ ಜನರನ್ನು ಸ್ಥಳಾಂತರಿಸುವ ಕೆಲಸ ಮಾಡುತ್ತೇವೆ ಎಂದು ರಾಬ್ ಹೇಳಿದ್ದಾರೆ.

ಇದನ್ನೂ ಓದಿ : ಅಫ್ಘನ್ ಪ್ರಜೆಗಳು ಇ-ವೀಸಾದಡಿಯಲ್ಲಿ ಭಾರತಕ್ಕೆ ಪ್ರಯಾಣಿಸಬೇಕು : ಕೇಂದ್ರ ಗೃಹ ಇಲಾಖೆ

ಆಗಸ್ಟ್ 15ರಂದು ತಾಲಿಬಾನ್​​, ಅಫ್ಘನ್ ​ಅನ್ನು ವಶಪಡಿಸಿಕೊಂಡ ಬಳಿಕ ಬ್ರಿಟನ್​ ಪಡೆಗಳು ಕಾಬೂಲ್​ನಿಂದ ಅಂದಾಜು 9 ಸಾವಿರ ಜನರನ್ನು ಸ್ಥಳಾಂತರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.