ಹೈದರಾಬಾದ್: ಆಪತ್ಕಾಲದಲ್ಲಿ ಆಗುವವನೇ ನಿಜವಾದ ಗೆಳೆಯ ಎಂಬ ಗಾದೆ ಮಾತಿದೆ. ಇದು ಈ ಹಿಂದಿನಿಂದಲೂ ಚೀನಾ-ಪಾಕಿಸ್ತಾನಗಳ ನಡುವಿನ ಸಂಬಂಧದಲ್ಲಿ ಸಾಬೀತಾಗುತ್ತಿರುವ ಅಂಶ. ಉಭಯ ದೇಶಗಳು ಈ ಹಿಂದಿನಿಂದಲೂ ಜೊತೆ ಜೊತೆಯಾಗಿಯೇ ಸಾಗುತ್ತಾ ಬರುತ್ತಿವೆ. ಆದರೆ ಸದ್ಯದ ಸ್ಥಿತಿಯಲ್ಲಿ ಈ ಮಾತು ಎರಡು ನೆರೆಯ ದೇಶಗಳಿಗೆ ಹೊಂದಾಣಿಕೆ ಆಗ್ತಿಲ್ಲ. ಇದಕ್ಕೆ ಕಾರಣವಿದೆ.
ಕೋವಿಡ್-19 ಸಮಸ್ಯೆಯಿಂದ ಬಳಲುತ್ತಿರುವ ಪಾಕ್‌ಗೆ ಚೀನಾ ಮುಖಗವಸು ರಪ್ತು ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ, ಅದು ಒಳ ಉಡುಪುಗಳಿಂದ ಸಿದ್ಧಪಡಿಸಿದವು ಎಂಬ ಸತ್ಯಾಂಶ ಬಯಲಾಗಿದೆ.
ಪಾಕಿಸ್ತಾನ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಎನ್-95 ಮಾಸ್ಕ್ ಪೂರೈಸುವಂತೆ ಪಾಕಿಸ್ತಾನ ಚೀನಾಗೆ ಮನವಿ ಮಾಡಿತ್ತು. ಆದರೆ ಚೀನಾ ಈ ರೀತಿಯ ಮಾಸ್ಕ್ ರವಾನಿಸಿದೆ ಮಾಡಿದೆ ಎಂದು ತಿಳಿದು ಬಂದಿದೆ.