ಕ್ಯಾನ್ಬೆರಾ : ಆಸ್ಟ್ರೇಲಿಯಾ ಸರ್ಕಾರದ ಹಿರಿಯ ಸದಸ್ಯರೊಬ್ಬರು 1980ರಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಲೇಬರ್ ಮತ್ತು ಗ್ರೀನ್ಸ್ ಪಕ್ಷಗಳ ಹಿರಿಯ ಸದಸ್ಯರಾದ ಪೆನ್ನಿ ವಾಂಗ್ ಹಾಗೂ ಸಾರಾ ಹ್ಯಾನ್ಸನ್-ಯಂಗ್ ಅವರಿಗೆ ಅನಾಮಧೇಯ ಪತ್ರವೊಂದು ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಫೆಡರಲ್ ಪೊಲೀಸರಿಗೆ ಸೂಚಿಸಲಾಗಿದೆ.
ಆಸ್ಟ್ರೇಲಿಯಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಎಬಿಸಿ) ಪ್ರಕಾರ, ಈ ಪತ್ರದಲ್ಲಿನ ಅಂಶವು ಸರ್ಕಾರದ ಹಿರಿಯ ಸದಸ್ಯರ ವಿರುದ್ಧ ಮಾಡಿರುವ ಗಂಭೀರ ಆರೋಪ ಎಂದು ಹ್ಯಾನ್ಸನ್-ಯಂಗ್ ಹೇಳಿದ್ದಾರೆ.
ಮಾಜಿ ಮಂತ್ರಿ ಶರ್ಮನ್ ಸ್ಟೋನ್, ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಹಿಳೆ ಸಾವನ್ನು ವ್ಯರ್ಥವಾಗಲು ನಾವು ಬಿಡಲ್ಲ, ಆಕೆಗೆ ನ್ಯಾಯ ಒದಗಿಸುತ್ತೇವೆ ಎಂದಿದ್ದಾರೆ.