ETV Bharat / international

ರಷ್ಯಾ-ಉಕ್ರೇನ್​​ ಸಂಘರ್ಷದಲ್ಲಿ 102 ನಾಗರಿಕರು ಸಾವು ; 5 ಲಕ್ಷ ನಿರಾಶ್ರಿತರು ಉಕ್ರೇನ್​​ನಿಂದ ಪಲಾಯನ : ವಿಶ್ವಸಂಸ್ಥೆ - ಉಕ್ರೇನ್​ ವಿರುದ್ಧ ರಷ್ಯಾ ಯುದ್ಧ ಘೋಷಣೆ

ಉಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡಿರುವ ರಷ್ಯಾ ಈವರೆಗೆ ಬಹುತೇಕ ಎಲ್ಲ ನಗರಗಳ ಮೇಲೆ ದಾಳಿ ನಡೆಸಿದೆ. ಪರಿಣಾಮ 102 ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ..

UkraineRussiaCrisis
UkraineRussiaCrisis
author img

By

Published : Feb 28, 2022, 7:35 PM IST

ಜಿನೀವಾ : ಕಳೆದ ಕೆಲ ದಿನಗಳಿಂದ ಉಕ್ರೇನ್​ ವಿರುದ್ಧ ನಡೆಯುತ್ತಿರುವ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಲ್ಲಿ 102 ನಾಗರಿಕರು ಸಾವನ್ನಪ್ಪಿದ್ದಾರೆಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧ್ಯಕ್ಷ ಮಿಚೆಲ್ ​ಬ್ಯಾಚೆಲೆಟ್ ಮಾಹಿತಿ ನೀಡಿದ್ದು, ಇದರಲ್ಲಿ ಏಳು ಮಕ್ಕಳು ಸಹ ಸೇರಿಕೊಂಡಿವೆ ಎಂದು ತಿಳಿಸಿದ್ದಾರೆ.

ಉಕ್ರೇನ್​ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಮಾಡುತ್ತಿದ್ದಂತೆ ಕೀವ್​ ಸೇರಿದಂತೆ ಪ್ರಮುಖ ನಗರಗಳ ಮೇಲೆ ವೈಮಾನಿಕ ದಾಳಿ ನಡೆಯುತ್ತಿದ್ದು, ಪರಿಣಾಮ 5 ಲಕ್ಷ ಜನರು ನಿರಾಶ್ರಿತರಾಗಿ ಈಗಾಗಲೇ ಉಕ್ರೇನ್​​ನಿಂದ ನೆರೆಯ ರಾಷ್ಟ್ರಗಳಿಗೆ ಪಲಾಯನ ಮಾಡಿದ್ದಾರೆಂಬ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ 304 ಜನರು ಗಾಯಗೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ.

ರಷ್ಯಾ ಬಳಕೆ ಮಾಡಿರುವ ಸ್ಫೋಟಕ ಆಯುಧಗಳಿಂದ ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಪ್ರಮುಖವಾಗಿ ರಾಕೆಟ್​​, ಶೆಲ್​ ಹಾಗೂ ವೈಮಾನಿಕ ದಾಳಿಯಿಂದ ಪ್ರಾಣ ಬಿಟ್ಟಿದ್ದಾರೆಂದು ವರದಿ ನೀಡಿದ್ದಾರೆ.

ಇದನ್ನೂ ಓದಿರಿ: ಉಕ್ರೇನ್​​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ 'ಅವಕಾಶವಾದವಲ್ಲ' ಜವಾಬ್ದಾರಿ: ಕೇಂದ್ರದ ವಿರುದ್ಧ ವರುಣ್​ ಕಿಡಿ!

ಉಕ್ರೇನ್​ಗೆ ಭಾರತದಿಂದ ಔಷಧಿ ನೆರವು : ರಷ್ಯಾ ಮಿಲಿಟರಿ ದಾಳಿಯಿಂದಾಗಿ ಅನೇಕ ಸಾವು-ನೋವು ಸಂಭವಿಸಿದ್ದು, ಇದೀಗ ಸಂಕಷ್ಟಕ್ಕೊಳಗಾಗಿರುವ ಉಕ್ರೇನ್​ಗೆ ಭಾರತ ಔಷಧಿ ನೆರವು ನೀಡುವುದಾಗಿ ಘೋಷಣೆ ಮಾಡಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.