ETV Bharat / international

ನೆದರ್ಲ್ಯಾಂಡ್ಸ್​​ನಲ್ಲಿ ಬಿರುಗಾಳಿ: ಸುಮಾರು 167 ವಿಮಾನಗಳ ಹಾರಾಟ ರದ್ದು - ಡಚ್​ ವಿಮಾನಯಾನ ಸಂಸ್ಥೆ ಕೆಎಲ್​ಎಂ

ನೆದರ್ಲ್ಯಾಂಡ್ಸ್​ನಲ್ಲಿ ಭಾರಿ ಬಿರುಗಾಳಿಯ ಕಾರಣದಿಂದಾಗಿ ಸುಮಾರು ಹಲವು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಚ್​ ವಿಮಾನಯಾನ ಸಂಸ್ಥೆ ಕೆಎಲ್​ಎಂ ತಿಳಿಸಿದೆ.

About 170 flights cancelled in Netherlands over looming storm
ನೆದರ್ಲ್ಯಾಂಡ್ಸ್​​ನಲ್ಲಿ ಬಿರುಗಾಳಿ: ಸುಮಾರು 170 ವಿಮಾನಗಳ ಹಾರಾಟ ರದ್ದು
author img

By

Published : Feb 18, 2022, 9:27 AM IST

ಆ್ಯಮ್​ಸ್ಟರ್​ಡ್ಯಾಮ್(ನೆದರ್ಲ್ಯಾಂಡ್ಸ್)​​: ಬಿರುಗಾಳಿಯ ಕಾರಣದಿಂದಾಗಿ ದೇಶದಲ್ಲಿ ಸುಮಾರು 167 ವಿಮಾನಗಳ ಹಾರಾಟ ಮೊಟಕುಗೊಂಡಿದೆ.

ಬಿರುಗಾಳಿಯಿಂದಾಗಿ ವಾತಾವರಣ ಹದಗೆಟ್ಟಿದೆ. ಹೀಗಾಗಿ, ನೆದರ್ಲ್ಯಾಂಡ್ಸ್​ಗೆ ಬರುವ ಮತ್ತು ನೆದರ್ಲ್ಯಾಂಡ್ಸ್​​ನಿಂದ ತೆರಳುವ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಫೆಬ್ರವರಿ 17 ಮತ್ತು ಫೆಬ್ರವರಿ 18ರಂದು ವಿಮಾನ ಹಾರಾಟ ಇರುವುದಿಲ್ಲ ಎಂದು ಕೆಎಲ್​ಎಂ ಹೇಳಿಕೆ ಬಿಡುಗಡೆ ಮಾಡಿದೆ.

ಗಂಟೆಗೆ 139 ಕಿಲೋಮೀಟರ್​ ವೇಗದಲ್ಲಿ ಗಾಳಿ ಬೀಸುತ್ತಿದ್ದು, ದೇಶದ ಹಲವು ಭಾಗಗಳಲ್ಲಿ ಆತಂಕ ಸೃಷ್ಟಿಯಾಗಿದೆ. ನೆದರ್ಲ್ಯಾಂಡ್ಸ್​ನ ಹವಾಮಾನ ಇಲಾಖೆ ಯೂನೈಸ್ ಚಂಡಮಾರುತದ ಎಚ್ಚರಿಕೆ ನೀಡಿದ್ದು, ಶುಕ್ರವಾರ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಬ್ರೆಜಿಲ್​ನಲ್ಲಿ ಭೂಕುಸಿತ, ಪ್ರವಾಹ: 117 ಮಂದಿ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.