ETV Bharat / international

ಹೆರಿಗೆ & ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ವೈಮಾನಿಕ ದಾಳಿ.. ಕಟ್ಟಡದ ಅವಶೇಷಗಳಡಿ ಮಕ್ಕಳು ಸಿಲುಕಿರುವ ಶಂಕೆ!

author img

By

Published : Mar 10, 2022, 6:47 AM IST

ರಷ್ಯಾ ವೈಮಾನಿಕ ದಾಳಿಗೆ ಉಕ್ರೇನ್ ತತ್ತರಿಸಿ ಹೋಗಿದ್ದು, ಇಂದೂ ಕೂಡ ಅಲ್ಲಿನ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ.

A maternity and children's hospital
A maternity and children's hospital

ಮರಿಯುಪೋಲ್​​(ಉಕ್ರೇನ್​​): ಉಕ್ರೇನ್​ ವಿರುದ್ಧ ರಷ್ಯಾ ಯುದ್ಧ ಮುಂದುವರೆಸಿದೆ. ಮರಿಯುಪೋಲ್​​ನಲ್ಲಿರುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿದ್ದು, ಕಟ್ಟಡದ ಅವಶೇಷಗಳಡಿ ಮಕ್ಕಳು ಸಿಲುಕಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಳೆದ 15 ದಿನಗಳಿಂದ ರಷ್ಯಾ ಮಿಲಿಟರಿ ಪಡೆ ಉಕ್ರೇನ್​ನ ವಿವಿಧ ನಗರಗಳ ಮೇಲೆ ಶೆಲ್​, ಬಾಂಬ್​ ದಾಳಿ ನಡೆಸುತ್ತಿದ್ದು, ಪರಿಣಾಮ ನಿನ್ನೆ ಪೂರ್ವ ಉಕ್ರೇನ್​ನ ಸೆವೆರೊಡೊನೆಸ್ಟ್ಕ್‌ನಲ್ಲಿ ರಷ್ಯಾ ದಾಳಿ ನಡೆಸಿದ್ದು, 10 ನಾಗರಿಕರು ಬಲಿಯಾಗಿದ್ದು, 17ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

A maternity and children's hospital
ಹೆರಿಗೆ & ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ವೈಮಾನಿಕ ದಾಳಿ

ರಷ್ಯಾ ಸೇನೆ ಉಕ್ರೇನ್‌ನಲ್ಲಿ ಯುದ್ಧ ಮುಂದುವರೆಸಿರುವ ಪರಿಣಾಮ ಝೈಟೊಮಿರ್, ಖಾರ್ಕಿವ್‌ನ ವಸತಿ ಪ್ರದೇಶಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ನಿನ್ನೆ ನಡೆದ ವಾಯುದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 7 ಜನ ಸಾವನ್ನಪ್ಪಿದ್ದಾರೆ. ಜೊತೆಗೆ ಅನೇಕರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಇದನ್ನು ಓದಿ:1999ರ ಭಾರತೀಯ ವಿಮಾನ ಅಪಹರಣ ಪ್ರಕರಣದ ಭಯೋತ್ಪಾದಕ ಅಪರಿಚಿತರಿಂದ ಹತ್ಯೆ

ಉಕ್ರೇನ್​​ - ರಷ್ಯಾ ನಡುವಿನ ಯುದ್ಧದ ಪರಿಣಾಮ ಇಲ್ಲಿಯವರೆಗೆ 474 ಜನರು ಸಾವನ್ನಪ್ಪಿದ್ದು, 861 ಜನರು ಗಾಯಗೊಂಡಿದ್ದಾರೆಂದು ವಿಶ್ವಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ಈವರೆಗೆ 12,000ಕ್ಕೂ ಹೆಚ್ಚು ರಷ್ಯಾ ಯೋಧರ ಹತ್ಯೆಯಾಗಿದೆ ಎಂದು ಉಕ್ರೇನ್ ವಿದೇಶಾಂಗ ಇಲಾಖೆ ಹೇಳಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.