ETV Bharat / international

ಮೆಡಿಟರೇನಿಯನ್ ಸಮುದ್ರದಲ್ಲಿ ದೋಣಿ ಮುಳುಗಿ 75 ವಲಸಿಗರು ಸಾವು - ವಲಸಿಗರು ಸಾವು

ಲಿಬಿಯಾ ದೇಶದಿಂದ ಇಟಲಿಗೆ ತೆರಳುತ್ತಿದ್ದ ಪ್ರಯಾಣಿಕರ ದೋಣಿ ಮೆಡಿಟರೇನಿಯನ್‌ ಸಮುದ್ರದಲ್ಲಿ ಮುಳುಗಿದ್ದು, 75 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ  ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Nov 21, 2021, 7:15 AM IST

Updated : Nov 21, 2021, 8:02 AM IST

ರೋಮ್(ಇಟಲಿ): ಲಿಬಿಯಾದ ಉತ್ತರದಲ್ಲಿರುವ ಮೆಡಿಟರೇನಿಯನ್ ಸಮುದ್ರದಲ್ಲಿ ದೋಣಿ ಮುಳುಗಿ 75 ಮಂದಿ ವಲಸಿಗರು (Migrants) ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (International Organization for Migration-IMO) ತಿಳಿಸಿದೆ.

ಈ ಕುರಿತು ಐಎಮ್‌ಒ ಶನಿವಾರ ಟ್ವೀಟ್‌ ಮೂಲಕ ತಿಳಿಸಿದೆ. ಮೀನುಗಾರರಿಂದ ರಕ್ಷಿಸಲ್ಪಟ್ಟ 15 ಮಂದಿ ಬದುಕುಳಿದವರು ಮತ್ತು ವಾಯುವ್ಯ ಲಿಬಿಯಾದ ಜುವಾರಾ ಬಂದರಿಗೆ ಬಂದವರು ಈ ಮಾಹಿತಿ ಒದಗಿಸಿದ್ದಾರೆ.

ಶನಿವಾರ, ಇಟಾಲಿಯನ್ ಕೋಸ್ಟ್‌ಗಾರ್ಡ್ ಮೆಡಿಟರೇನಿಯನ್ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಅಪ್ರಾಪ್ತರು ಸೇರಿದಂತೆ 420ಕ್ಕೂ ಹೆಚ್ಚು ವಲಸಿಗರನ್ನು ರಕ್ಷಿಸಿದ್ದರು. ಕೋಸ್ಟ್‌ಗಾರ್ಡ್ ಹೇಳಿಕೆಯ ಪ್ರಕಾರ, 70 ಜನರನ್ನು ಒಂದು ದೋಣಿಯಲ್ಲಿ ಇಟಾಲಿಯನ್ ದ್ವೀಪ ಲ್ಯಾಂಪುಡುಸಾಗೆ ಕರೆತರಲಾಗಿದೆ. ಸಮುದ್ರದಲ್ಲಿನ ಪ್ರತಿಕೂಲ ಹವಾಮಾನ ಮತ್ತು ಹಡಗಿನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುತ್ತಿದ್ದ ಕಾರಣ ಈ ದುರ್ಘಟನೆ ಘಟಿಸಿದೆ ಎನ್ನಲಾಗ್ತಿದೆ.

ಅಪಾಯಕಾರಿ ಪ್ರಯಾಣದಲ್ಲಿ ಅಪಾರ ಸಾವು-ನೋವು:

ಪ್ರತೀ ವರ್ಷ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದಿಂದ ಸಾವಿರಾರು ವಲಸಿಗರು ಮತ್ತು ನಿರಾಶ್ರಿತರು ಯುರೋಪ್‌ಗೆ ಅಪಾಯಕಾರಿ ಮೆಡಿಟರೇನಿಯನ್ ಸಮುದ್ರದ ಮೂಲಕ ಪ್ರಯಾಣಿಸುತ್ತಾರೆ. ಲಿಬಿಯಾ ಮತ್ತು ಟುನೀಶಿಯಾದಿಂದ ಇಟಲಿ ಮತ್ತು ಮಾಲ್ಟಾಕ್ಕೆ ಸೆಂಟ್ರಲ್ ಮೆಡಿಟರೇನಿಯನ್ ದಾಟುವಾಗ 2021ರಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 1,300ಕ್ಕೂ ಮಂದಿ ಸಾವನ್ನಪ್ಪಿದ್ದರು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (IOM) ತಿಳಿಸಿದೆ.

ಇದನ್ನೂ ಓದಿ: 1 ಗಂಟೆ 25 ನಿಮಿಷಗಳ ಕಾಲ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದ ಕಮಲಾ ಹ್ಯಾರಿಸ್​​

Last Updated : Nov 21, 2021, 8:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.