ಕಾಬೂಲ್(ಅಫ್ಘಾನಿಸ್ತಾನ) : ಇಡೀ ದೇಶವನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಳ್ತಿದ್ದಂತೆಯೇ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದಿದ್ದಾರೆ. ಈ ಮಧ್ಯೆಯೂ ಅಲ್ಲಿನ ಮಾಜಿ ಉಪಾಧ್ಯಕ್ಷ ಸಲೇಹ್, ಯಾವುದೇ ಕಾರಣಕ್ಕೂ ನಾನು ತಾಲಿಬಾನ್ಗೆ ಶರಣಾಗಲ್ಲ. ನಾನೇ ದೇಶದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಈ ಸಂಬಂಧ ಅವರು ಟ್ವೀಟ್ ಮಾಡಿದ್ದಾರೆ.
ತಾವು ಅಫ್ಘಾನಿಸ್ತಾನದಲ್ಲೇ ಇದ್ದು, ದೇಶದ ಹಂಗಾಮಿ ಅಧ್ಯಕ್ಷನಾಗಿದ್ದೇನೆ ಎಂದು ಘೋಷಿಸಿಕೊಂಡಿರುವ ಅವರು, ನಾನು ವಿಶ್ವದ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಅಫ್ಘಾನಿಸ್ತಾನದ ರಕ್ಷಣೆಗೆ ಬದ್ಧವಾಗಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ.
-
Clarity: As per d constitution of Afg, in absence, escape, resignation or death of the President the FVP becomes the caretaker President. I am currently inside my country & am the legitimate care taker President. Am reaching out to all leaders to secure their support & consensus.
— Amrullah Saleh (@AmrullahSaleh2) August 17, 2021 " class="align-text-top noRightClick twitterSection" data="
">Clarity: As per d constitution of Afg, in absence, escape, resignation or death of the President the FVP becomes the caretaker President. I am currently inside my country & am the legitimate care taker President. Am reaching out to all leaders to secure their support & consensus.
— Amrullah Saleh (@AmrullahSaleh2) August 17, 2021Clarity: As per d constitution of Afg, in absence, escape, resignation or death of the President the FVP becomes the caretaker President. I am currently inside my country & am the legitimate care taker President. Am reaching out to all leaders to secure their support & consensus.
— Amrullah Saleh (@AmrullahSaleh2) August 17, 2021
ದೇಶದಲ್ಲಿ ತಾಲಿಬಾನ್ ಅಟ್ಟಹಾಸದ ಬಗ್ಗೆ ಮಾತನಾಡಿರುವ ಅವರು, ಕಾಬೂಲ್ ಸೇರಿ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿರುವ ತಾಲಿಬಾನ್, ಈವರೆಗೆ ಕಾಬೂಲ್ನ ಈಶಾನ್ಯದಲ್ಲಿರುವ ಪಂಜ್‌ಶಿರ್ ವ್ಯಾಲಿಯನ್ನು ಪ್ರವೇಶಿಸಿಲ್ಲ. ಪ್ರವೇಶಿಸಲು ನಾವು ಬಿಡುವುದೂ ಇಲ್ಲ ಎಂದಿದ್ದಾರೆ.
ಪ್ರಾಕೃತಿಕ ರಕ್ಷಣೆಗೆ ಹೆಸರುವಾಸಿಯಾಗಿದ್ದ ಪಂಜ್‌ಶಿರ್ ಕಣಿವೆಯು 1990ರ ಅಂತರ್ಯುದ್ಧದ ಸಮಯದಲ್ಲಿ ತಾಲಿಬಾನ್ ವಶವಾಗಲಿಲ್ಲ ಅಥವಾ ಒಂದು ದಶಕದ ಹಿಂದೆ ಸೋವಿಯತ್ ವಶಪಡಿಸಿಕೊಂಡಿಲ್ಲ. ನಾವು ತಾಲಿಬಾನ್‌ಗಳನ್ನು ಪಂಜ್‌ಶಿರ್ ಪ್ರವೇಶಿಸಲು ಬಿಡುವುದಿಲ್ಲ. ನಮ್ಮೆಲ್ಲಾ ಶಕ್ತಿ ಮೀರಿ ತಾಲಿಬಾನಿಗಳ ಪಂಜ್‌ಶಿರ್ ಪ್ರವೇಶವನ್ನು ನಿರ್ಬಂಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಒಂದು ಕಾಲದಲ್ಲಿ ಬೇಹುಗಾರಿಕೆ ಮುಖ್ಯಸ್ಥರಾಗಿದ್ದ ಸಲೇಹ್, ಬಳಿಕ ಉಪಾಧ್ಯಕ್ಷರಾಗಿ ತಾಲಿಬಾನ್ ವಿರುದ್ಧ ನಿರಂತರ ಹೋರಾಡುತ್ತಲೇ ಇದ್ದಾರೆ. 1990ರಲ್ಲಿ ಗೆರಿಲ್ಲಾ ಕಮಾಂಡರ್ ಮಸೂದ್ ಜತೆ ಹೋರಾಡಿದ ಸಲೇಹ್, 1996ರಲ್ಲಿ ತಾಲಿಬಾನ್ ಕಾಬೂಲ್ನನ್ನು ವಶಪಡಿಸಿಕೊಂಡಾಗ ಸರ್ಕಾರದಲ್ಲಿ ಸೇವೆ ಸಲ್ಲಿಸಿದರು. ಇದನ್ನೂ ಓದಿ: ನಮಗೆ ಭಾರತ ಸರ್ಕಾರ ಸಹಾಯ ಮಾಡಬೇಕು: ಆಫ್ಘನ್ ವಿದ್ಯಾರ್ಥಿಗಳ ಮನವಿ
ಪಾಕಿಸ್ತಾನದ ಸೇನೆಯು ತಾಲಿಬಾನ್ಗೆ ಬೆಂಬಲವನ್ನು ಮುಂದುವರಿಸಿದೆ ಎಂದು ಸಲೇಹ್ ಮಾಹಿತಿ ನೀಡಿದ್ದಾರೆ.