ETV Bharat / international

ಒಮಿಕ್ರೋನ್‌ ತಡೆಗೆ ಡೆಲ್ಟಾ ಮಾದರಿಯಲ್ಲೇ ಗಡಿಗಳಲ್ಲಿ ಕಟ್ಟೆಚ್ಚರವಹಿಸಿ - ವಿಶ್ವ ಆರೋಗ್ಯ ಸಂಸ್ಥೆ - ಪಶ್ಚಿಮ ಪೆಸಿಫಿಕ್‌ನ ಡಬ್ಲ್ಯೂಹೆಚ್‌ಒನ ಪ್ರಾದೇಶಿಕ ನಿರ್ದೇಶಕ

ರೂಪಾಂತರಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಒಮಿಕ್ರೋನ್‌ ಅನ್ನು ಗಂಭೀರವಾದ ರೂಪಾಂತರಿ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ವೈರಸ್‌ನ ಇತರ ರೂಪಾಂತರಗಳಿಗಿಂತ ಇದು ಹೆಚ್ಚು ಹರಡಬಹುದೆಂದು ಸೂಚಿಸುತ್ತದೆ. ಇದಕ್ಕಾಗಿ ಹೆಚ್ಚಿನ ಪರೀಕ್ಷೆಗಳ ಅಗತ್ಯವಿದೆ ಎಂದು ಡಾ. ತಕೇಶಿ ಕಸಾಯಿ ಸಲಹೆ ನೀಡಿದ್ದಾರೆ..

WHO says measures against delta work for omicron variant too
ಒಮಿಕ್ರೋನ್‌ ತಡೆಗೆ ಡೆಲ್ಟಾ ಮಾದರಿಯಲ್ಲೇ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಿ - ವಿಶ್ವ ಆರೋಗ್ಯ ಸಂಸ್ಥೆ
author img

By

Published : Dec 3, 2021, 12:26 PM IST

ಮನಿಲಾ(ಫಿಲಿಪೈನ್ಸ್‌) : ಇಡೀ ಜಗತ್ತಿನ ಮತ್ತೊಂದು ತಲ್ಲಣಕ್ಕೆ ಕಾರಣವಾಗಿರುವ ಕೋವಿಡ್‌ನ ರೂಪಾಂತರಿ ಒಮಿಕ್ರೋನ್‌ ನಿಧಾನವಾಗಿ ಹಲವು ದೇಶಗಳಲ್ಲಿ ಹರಡುತ್ತಿದೆ. ಈಗಾಗಲೇ ಬಹುತೇಕ ದೇಶಗಳು ಹೊಸ ವೈರಸ್‌ ತಡೆಗೆ ಮಹತ್ತರ ನಿರ್ಧಾರಗಳನ್ನು ಕೈಗೊಂಡಿವೆ.

ವಿಶ್ವ ಆರೋಗ್ಯ ಸಂಸ್ಥೆಯೂ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ದೇಶಗಳ ಗಡಿ ಪ್ರದೇಶಗಳಲ್ಲಿ ಡೆಲ್ಟಾ ರೂಪಾಂತರಿ ವಿರುದ್ಧ ಕೈಗೊಂಡಿದ್ದ ಕ್ರಮಗಳನ್ನು ಒಮಿಕ್ರೋನ್‌ ವಿರುದ್ಧವೂ ಅನುಸರಿಸಬೇಕು ಎಂದು ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ಪೆಸಿಫಿಕ್‌ನಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು, ಬಹುತೇಕ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹಾಗೂ ಸಾವುಗಳು ಕಡಿಮೆಯಾಗಿರುವಾಗ ಕೆಲವು ಪ್ರಾದೇಶಿಕ ದೇಶಗಳಲ್ಲಿ ಕೊರೊನಾ ಹೊಸ ಪ್ರಕಣಗಳು ಉಲ್ಬಣಗೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಪೆಸಿಫಿಕ್‌ನ ಡಬ್ಲ್ಯೂಹೆಚ್‌ಒನ ಪ್ರಾದೇಶಿಕ ನಿರ್ದೇಶಕ ಡಾ. ತಕೇಶಿ ಕಸಾಯಿ, ಗಡಿಗಳಲ್ಲಿ ಸೂಕ್ತವಾದ ಕ್ರಮಗಳನ್ನು ಕೈಗೊಂಡರೆ ವೈರಸ್ ಹರಡುವಿಕೆಯನ್ನು ತಡೆಯಬಹುದು. ಆದರೆ, ಪ್ರತಿಯೊಂದು ದೇಶ ಹಾಗೂ ಸಮುದಾಯವೂ ಹೊಸದಾಗಿ ಉಲ್ಬಣವಾಗುವ ಸೋಂಕಿನ ವಿರುದ್ಧ ಹೋರಾಟಕ್ಕೆ ಸಿದ್ಧರಾಗಬೇಕು ಅಂತಲೂ ಹೇಳಿದ್ದಾರೆ.

ಕೆಲವು ಆರೋಗ್ಯ ಅಧಿಕಾರಿಗಳ ಮಾಹಿತಿ ಪ್ರಕಾರ, ಇದು ಹೆಚ್ಚು ಸಾಂಕ್ರಾಮಿಕವಾಗಿದೆಯೇ?, ಇದರಿಂದ ಜನರು ತೀವ್ರ ಅನಾರೋಗ್ಯಕ್ಕೆ ಒಳಪಡಿಸುತ್ತದೆಯೇ? ಅಥವಾ ಇದನ್ನು ಲಸಿಕೆಯಿಂದ ತಡೆಯಬಹುದೇ ಎಂಬುದು ಸೇರಿದಂತೆ ಹೊಸ ರೂಪಾಂತರಿ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ರೂಪಾಂತರಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಒಮಿಕ್ರೋನ್‌ ಅನ್ನು ಗಂಭೀರವಾದ ರೂಪಾಂತರಿ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ವೈರಸ್‌ನ ಇತರ ರೂಪಾಂತರಗಳಿಗಿಂತ ಇದು ಹೆಚ್ಚು ಹರಡಬಹುದೆಂದು ಸೂಚಿಸುತ್ತದೆ. ಇದಕ್ಕಾಗಿ ಹೆಚ್ಚಿನ ಪರೀಕ್ಷೆಗಳ ಅಗತ್ಯವಿದೆ ಎಂದು ಡಾ. ತಕೇಶಿ ಕಸಾಯಿ ಸಲಹೆ ನೀಡಿದ್ದಾರೆ.

ಈವರೆಗೆ ಪಶ್ಚಿಮ ಪೆಸಿಫಿಕ್‌ನ ನಾಲ್ಕು ದೇಶಗಳಾದ ಆಸ್ಟ್ರೇಲಿಯಾ, ಹಾಂಗ್‌ಕಾಂಗ್, ಜಪಾನ್, ದಕ್ಷಿಣ ಕೊರಿಯಾದಲ್ಲಿ ಒಮಿಕ್ರಾನ್‌ ಕಂಡು ಬಂದಿದೆ ಎಂದು ಡಬ್ಲ್ಯೂಹೆಚ್‌ಒನ ಪ್ರಾದೇಶಿಕ ತುರ್ತು ನಿರ್ದೇಶಕ ಡಾ. ಬಾಬತುಂಡೆ ಒಲೊವೊಕುರೆ ಹೇಳಿದ್ದಾರೆ. ನಿನ್ನೆಯಷ್ಟೇ ಭಾರತ, ಸಿಂಗಾಪುರ್‌ ಹಾಗೂ ಮಲೇಷ್ಯಾದಲ್ಲೂ ಮೊದಲ ಪ್ರಕರಣ ಪತ್ತೆಯಾಗಿವೆ.

ಇದನ್ನೂ ಓದಿ: ಅಮೆರಿಕಾದಲ್ಲಿ 3 ಒಮಿಕ್ರೋನ್ ಕೇಸ್ ಪತ್ತೆ: ಸಮುದಾಯಕ್ಕೆ ಹರಡಿರುವ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.