ETV Bharat / international

ಕಾಶ್ಮೀರದಲ್ಲಿ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ನಮಗಿದೆ: ತಾಲಿಬಾನ್ ಯೂ ಟರ್ನ್ - ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್

ಕಾಶ್ಮೀರ ವಿವಾದವು ಭಾರತ - ಪಾಕ್​ಗೆ ಸಂಬಂಧಿಸಿದ ವಿಚಾರ ಎಂದಿದ್ದ ತಾಲಿಬಾನ್​ ಇದೀಗ ಉಲ್ಟಾ ಹೊಡೆದಿದೆ. ಆಫ್ಘನ್​ನಲ್ಲಿ ಸರ್ಕಾರ ರಚಿಸಿದ ಕೆಲ ಸಮಯದಲ್ಲೇ, ಕಾಶ್ಮೀರದ ಮುಸ್ಲಿಮರಿಗಾಗಿ ದನಿ ಎತ್ತುವ ಹಕ್ಕು ನಮಗಿದೆ ಎಂದಿದೆ.

Taliban
Taliban
author img

By

Published : Sep 3, 2021, 11:37 AM IST

ಕಾಬೂಲ್(ಅಫ್ಘಾನಿಸ್ತಾನ): ಕಾಶ್ಮೀರ ಸೇರಿದಂತೆ ಎಲ್ಲೆಲ್ಲಿಯೂ ಮುಸ್ಲಿಮರಿಗಾಗಿ ದನಿ ಎತ್ತುವ ಹಕ್ಕು ನಮಗಿದೆ ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿದ್ದಾರೆ. ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸಲ್ಲ ಎಂದೂ ಸ್ಪಷ್ಟಪಡಿಸಿದೆ.

ಮುಸ್ಲಿಮರಿಗಾಗಿ ದನಿ ಎತ್ತುತ್ತೇವೆ

ಸುಹೇಲ್ ಶಾಹೀನ್ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ, ಮುಸ್ಲಿಮರಿರುವ ಕಾಶ್ಮೀರ ಹಾಗೂ ಜಗತ್ತಿನ ಇನ್ನಿತರ ಯಾವುದೇ ದೇಶಗಳ ಮುಸ್ಲಿಮರ ಪರವಾಗಿ ಧ್ವನಿ ಎತ್ತುವ ಹಕ್ಕು ನಮಗಿದೆ ಎಂದು ಹೇಳಿದ್ದಾರೆ. ಮುಸ್ಲಿಮರ ಹಕ್ಕುಗಳಿಗಾಗಿ ನಾವು ಧ್ವನಿ ಎತ್ತುತ್ತೇವೆ. ಅವರು ನಿಮ್ಮ ಜನರು, ನಿಮ್ಮ ಕಾನೂನುಗಳ ಅಡಿ ಅವರಿಗೆ ಸಮಾನ ಹಕ್ಕುಗಳು ಸಿಗಬೇಕು ಎಂದು ಶಾಹೀನ್ ಹೇಳಿದರು.

ಯೂಟರ್ನ್ ಹೊಡೆದ ತಾಲಿಬಾನ್

ಇತ್ತೀಚೆಗಷ್ಟೇ ತಾಲಿಬಾನ್​, ಕಾಶ್ಮೀರ ವಿವಾದವು ಇಂಡೋ-ಪಾಕ್​ಗೆ ಸಂಬಂಧಿಸಿದ ವಿಚಾರ. ನಾವು ಮಧ್ಯ ಪ್ರವೇಶಿಸಲ್ಲ ಎಂದಿದ್ದರು. ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ.

ತಾಲಿಬಾನ್ ಭೇಟಿಯಾದ ದೀಪಕ್ ಮಿತ್ತಲ್

ಅಫ್ಘಾನಿಸ್ತಾನದ ಭೂಮಿಯನ್ನು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗೆ ಬಳಸದಂತೆ ನೋಡಿಕೊಳ್ಳುವುದು ಭಾರತದ ಗುರಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.

ಕಳೆದ ಮಂಗಳವಾರ, ಕತಾರ್‌ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ತಾಲಿಬಾನ್​ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ ಜಾಯ್ ಭೇಟಿಯಾಗಿದ್ದರು. ಈ ವೇಳೆ ಅಫ್ಘಾನಿಸ್ತಾನದ ಮಣ್ಣನ್ನು ಭಾರತೀಯ ವಿರೋಧಿ ಚಟುವಟಿಕೆಗಳಿಗೆ ಮತ್ತು ಭಯೋತ್ಪಾದನೆಗೆ ಬಳಸಬಾರದೆಂದು ಮನವಿ ಮಾಡಿದ್ದರು.

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ, ಭದ್ರತೆ ಮತ್ತು ಆರಂಭಿಕ ವಾಪಸಾತಿ ಮತ್ತು ಆಫ್ಘನ್​ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಭಾರತಕ್ಕೆ ಪ್ರಯಾಣಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಇಸ್ಲಾಮಿಕ್ ಭಯೋತ್ಪಾದನೆಯ ಕೇಂದ್ರ ಆಫ್ಘನ್?

ಅಫ್ಘಾನಿಸ್ತಾನವು ಇಸ್ಲಾಮಿಕ್ ಭಯೋತ್ಪಾದನೆಯ ಕೇಂದ್ರ ಬಿಂದುವಾಗಬಹುದು. ಈ ಹಿಂದೆ ಐಸಿಸ್ ಮತ್ತು ಅಲ್ ಖೈದಾ ಕೂಡ ಒಂದು ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸಿ, ವಿಫಲವಾದವು.

ಕಣಿವೆ ರಾಜ್ಯದಲ್ಲಿ ಭದ್ರತೆ ಹೆಚ್ಚಳ

ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿ ಬಗ್ಗೆ ಹೆಚ್ಚುತ್ತಿರುವ ಆತಂಕಗಳ ನಡುವೆ, ಭಾರತವು ಈ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಆಫ್ಘನ್ ವಶಕ್ಕೆ ಪಡೆಯಲು ಪಾಕ್‌ ತಾಲಿಬಾನ್‌ಗೆ ನೆರವಿನ ಬಗ್ಗೆ ಪುರಾವೆ ಇಲ್ಲ - ಅಮೆರಿಕ

ಕಾಶ್ಮೀರದ ವಿಚಾರದಲ್ಲಿ ತಾಲಿಬಾನ್​ ಪಾಕ್​ಗೆ ಸಹಾಯ?

ತಾಲಿಬಾನ್​ನೊಂದಿಗೆ ಉತ್ತಮ ಸಂಬಂಧ ಹೊಂದಿರುವ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ISI ತಾಲಿಬಾನ್ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತದೆ. ಇತ್ತೀಚೆಗೆ, ಪಾಕಿಸ್ತಾನ ಸರ್ಕಾರದ ಮುಖಂಡರೊಬ್ಬರು, ಕಾಶ್ಮೀರವನ್ನು ಭಾರತದಿಂದ 'ಮುಕ್ತಗೊಳಿಸಲು' ತಾಲಿಬಾನ್ ನಮಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.