ETV Bharat / international

ವಿಯೆಟ್ನಾಂನಲ್ಲಿ ಮೊಲೇವ್ ಹಾವಳಿ: ಈವರೆಗೆ 19 ಸಾವು, 64 ಮಂದಿ ನಾಪತ್ತೆ - ಮಧ್ಯ ವಿಯೆಟ್ನಾಂನಲ್ಲಿ ಮೊಲೇವ್ ಹಾವಳಿ

ಮೊಲೇವ್ ಚಂಡಮಾರುತ ವಿಯೆಟ್ನಾಂನಲ್ಲಿ ಸಾಕಷ್ಟು ಹಾನಿ ಉಂಟುಮಾಡಿದ್ದು, ಈವರೆಗೆ ಭೂಕುಸಿತದಿಂದಾಗಿ 19 ಮಂದಿ ಮೃತಪಟ್ಟು 64 ಮಂದಿ ಕಾಣೆಯಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

typhoon Molave
ಮೊಲೇವ್ ಟೈಫೂನ್
author img

By

Published : Oct 29, 2020, 1:04 PM IST

Updated : Oct 29, 2020, 1:48 PM IST

ಹಾನೋಯ್ (ವಿಯೆಟ್ನಾಂ): ಮೊಲೇವ್ ಚಂಡಮಾರುತದಿಂದ ಉಂಟಾದ ಭೂಕುಸಿತದಿಂದಾಗಿ ಮಧ್ಯ ವಿಯೆಟ್ನಾಂನಲ್ಲಿ ಈವರೆಗೆ 19 ಮಂದಿ ಮೃತಪಟ್ಟಿದ್ದು, 64 ಮಂದಿ ಕಾಣೆಯಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಮೊಲೇವ್ ಟೈಫೂನ್ ಅಬ್ಬರಕ್ಕೆ ನಲುಗಿದ ವಿಯೆಟ್ನಾಂ

ಗುರುವಾರ ಬೆಳಗ್ಗೆ ದಕ್ಷಿಣ ಕೇಂದ್ರ ಖ್ವಾಂಗ್ ನಾಮ್ ಪ್ರಾಂತ್ಯದ ಟ್ರಾ ವ್ಯಾನ್ ಗ್ರಾಮದಲ್ಲಿ ಭೂಕುಸಿತದಿಂದ ಮನೆಗಳ ಮೇಲೆ ಬಿದ್ದಿದ್ದು, 8 ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಮೊಲೇವ್ ಚೆಂಡಮಾರುತದಿಂದ ಈಗಾಗಲೇ ಸಾಕಷ್ಟು ಹಾನಿ ಸಂಭವಿಸಿದ್ದು, ಸಂತ್ರಸ್ತರನ್ನು ರಕ್ಷಿಸಿ ಸ್ಥಳಾಂತರ ಮಾಡಲಾಗಿದೆ ಎಂದು ವಿಯೆಟ್ನಾಂ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಎರಡು ಮೀನುಗಾರಿಕಾ ಬೋಟ್​​​ನಲ್ಲಿದ್ದ 26 ಮಂದಿ ಬುಧವಾರ ಕಾಣೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಈಗ ಸದ್ಯಕ್ಕೆ ಚಂಡಮಾರುತ 150 ಕಿಲೋಮೀಟರ್​ ವೇಗದಲ್ಲಿ ಬೀಸುತ್ತಿದ್ದು, ಹಾನಿ ಹೆಚ್ಚಾಗುವಂತೆ ಮಾಡುತ್ತಿದೆ.

ಸುಮಾರು 20 ವರ್ಷಗಳಲ್ಲಿ ಇದು ಭೀಕರ ಚಂಡಮಾರುತವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದು, ಚಂಡಮಾರುತದ ಭೀಕರತೆಯಿಂದಾಗಿ ಸಂಭವಿಸಿದ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿಯ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.

Last Updated : Oct 29, 2020, 1:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.