ETV Bharat / international

ಮಾಸ್ಕ್​​ ವಿತರಿಸಲು ಬಂತೂ ಸ್ವಯಂಚಾಲಿತ ಯಂತ್ರ: ಎಲ್ಲಿ ಗೊತ್ತಾ ?

ತೈಪೆ ನಗರದಲ್ಲಿ ಫೇಸ್​​ ಮಾಸ್ಕ್​​ ಮಾರಾಟ ಮಾಡಲು ಸ್ವಯಂಚಾಲಿತ ಯಂತ್ರವನ್ನು ಬಳಸಲಾಗುತ್ತಿದೆ. ಇದರಿಂದ ಔಷಧ ವಿತರಕರು ಮಾಸ್ಕ್​​​ ನೀಡಲು ಮೀಸಲಿಡುತ್ತಿದ್ದ ಸಮಯ ಉಳಿದಂತಾಗಿದೆ. ಮುಖವಾಡ ವಿತರಣಾ ಯಂತ್ರಗಳಿಂದ ಕಾರ್ಯದಕ್ಷತೆಯನ್ನು ಹೆಚ್ಚಿಸಬಹುದಾಗಿದೆ ಹಾಗೂ ಸೋಂಕು ಹರಡುವಿಕೆ ಪ್ರಮಾಣವನ್ನು ಕಡಿಮೆಗೊಳಿಸಬಹುದಾಗಿದೆ.

ಫೇಸ್​​ ಮಾಸ್ಕ್​​ ಮಾರಾಟ ಮಾಡಲು ಸ್ವಯಂಚಾಲಿತ ಯಂತ್ರಫೇಸ್​​ ಮಾಸ್ಕ್​​ ಮಾರಾಟ ಮಾಡಲು ಸ್ವಯಂಚಾಲಿತ ಯಂತ್ರ
ಫೇಸ್​​ ಮಾಸ್ಕ್​​ ಮಾರಾಟ ಮಾಡಲು ಸ್ವಯಂಚಾಲಿತ ಯಂತ್ರ
author img

By

Published : Apr 21, 2020, 9:43 PM IST

ತೈಪೆ: ನಗರದ ಕ್ಸಿನಿ ಜಿಲ್ಲಾ ಆರೋಗ್ಯ ಕೇಂದ್ರದ ಹೊರಗೆ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದ್ರೆ ಅವರು ವೈದ್ಯರಿಗಾಗಲಿ, ನರ್ಸ್​ ಅಥವಾ ಪ್ಯಾರಮಸಿಸ್ಟ್​​ಗಾಗಿ ನಿಂತಿಲ್ಲ. ಬದಲಿಗೆ ಅವರು ವೆಂಡಿಂಗ್​ ಮಷಿನ್​​ ಬಳಸಲು ಕಾಯುತ್ತಿದ್ದಾರೆ.

ಹೌದು, ತೈಪೆ ನಗರದಲ್ಲಿ ಫೇಸ್​​ ಮಾಸ್ಕ್​​ ಮಾರಾಟ ಮಾಡಲು ಸ್ವಯಂಚಾಲಿತ ಯಂತ್ರ ಬಳಸಲಾಗುತ್ತಿದೆ. ಇದರಿಂದ ಔಷಧ ವಿತರಕರು ಮಾಸ್ಕ್​​​ ನೀಡಲು ಮೀಸಲಿಡುತ್ತಿದ್ದ ಸಮಯ ಉಳಿದಂತಾಗಿದೆ. COVID-19 ಸಾಂಕ್ರಾಮಿಕದ ನಡುವೆಯೂ ಹೆಸರು ಆಧಾರಿತ ಮುಖವಾಡಗಳನ್ನು ಮಷಿನ್​ ಮೂಲಕ ಖರೀದಿಸಬಹುದಾಗಿದೆ.

"ಹೆಸರು ಆಧಾರಿತ ಮಾಸ್ಕ್ ವಿತರಣಾ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಮತ್ತು ಯಾರು ಖರೀದಿಸಬಹುದು ಎಂಬುದನ್ನು ನಿರ್ಧರಿಸಲು ನಮಗೆ ಸಹಾಯ ಮಾಡಲು ಕೆಲವು ಸ್ಥಳಗಳಲ್ಲಿ ಉಪಕರಣಗಳನ್ನು ಇರಿಸಬೇಕು ಎಂದು ತೈಪೆಯ ಸರ್ಕಾರದ ಮಾಹಿತಿ ತಂತ್ರಜ್ಞಾನ ವಿಭಾಗದ ಆಯುಕ್ತ ಲು ಹ್ಸಿನ್-ಕೆ ಹೇಳುತ್ತಾರೆ.

"ಖರೀದಿದಾರರು ಪ್ರಮಾಣೀಕರಿಸಿದಾಗ, ಖರೀದಿಸಲು ಅನುಮತಿಸಿದಾಗ ಮತ್ತು ಹಣವನ್ನು ಪಾವತಿಸಿದಾಗ ಮುಖವಾಡಗಳನ್ನು ಪಡೆದುಕೊಳ್ಳಬೇಕು. ಸ್ವಯಂಚಾಲಿತ ಮುಖವಾಡ ವಿತರಣಾ ಯಂತ್ರಗಳಿಂದ ಕಾರ್ಯದಕ್ಷತೆಯನ್ನು ಹೆಚ್ಚಿಸಬಹುದಾಗಿದೆ ಹಾಗೂ ಸೋಂಕು ಹರಡುವಿಕೆ ಪ್ರಮಾಣವನ್ನು ಕಡಿಮೆಗೊಳಿಸಬಹುದಾಗಿದೆ.

ತಂತ್ರಜ್ಞಾನ ಇಲಾಖೆಯೂ ಈ ಮುಖವಾಡ ಮಾರಾಟ ಯಂತ್ರಗಳನ್ನು ಸ್ಥಾಪಿಸಿದೆ. ಈ ಯಂತ್ರಗಳನ್ನು ಜಾರಿಗೆ ತರಲು ಖಾಸಗಿ ವಲಯದ ಕಂಪನಿಗಳೊಂದಿಗೆ ಮೂರು ವಾರಗಳ ಕಾಲ ಕೆಲಸ ನಿರ್ವಹಿಸಲಾಗಿದೆ. ಏಪ್ರಿಲ್ 11ರ ಶನಿವಾರ ಅವುಗಳನ್ನು ಪ್ರಾರಂಭಿಸಲಾಯಿತು.

ಖಾಸಗಿ ಕಂಪನಿಗಳಲ್ಲಿ ಒಂದಾದ ಯಾಲ್ವೆಂಡ್ ಕಂ ಲಿಮಿಟೆಡ್‌ನಲ್ಲಿ ಮುಖ್ಯ ಮಾಹಿತಿ ಅಧಿಕಾರಿಯಾಗಿರುವ ನೀಲ್ ಲೀ ಈ ಯೋಜನೆಯಲ್ಲಿ ಭಾಗಿಯಾಗಿದ್ದಾರೆ. ಯಂತ್ರಗಳು ಕೇವಲ ಎರಡು ದಿನಗಳಲ್ಲಿ 2,500 ಮುಖವಾಡಗಳನ್ನು ಮಾರಾಟ ಮಾಡಿವೆ ಎಂದು ಅವರು ಹೇಳುತ್ತಾರೆ.

"ಪ್ರತಿ ಯಂತ್ರವು ಒಂದು ನಿಮಿಷದಲ್ಲಿ ಇಬ್ಬರು ಜನರಿಗೆ ಸೇವೆ ಸಲ್ಲಿಸದೆ. ಆದ್ದರಿಂದ, ಪ್ರತಿ ಯಂತ್ರವು ದಿನಕ್ಕೆ 1,100 ಗ್ರಾಹಕರಿಗೆ ಸೇವೆ ಸಲ್ಲಿಸಬಲ್ಲದು. ತೈಪೆ ಸರ್ಕಾರವು ಒಟ್ಟು 1,200 ಜನರಿಗೆ (ಪ್ರತಿ ಯಂತ್ರದಲ್ಲಿ) ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ. ಸಾಂಕ್ರಾಮಿಕ ರೋಗ ನಿಧಾನವಾದ ನಂತರವೂ ಯಂತ್ರಗಳ ಬೇಡಿಕೆ ಹೆಚ್ಚು ಮುಂದುವರಿಯುತ್ತದೆ ಎಂದು ಲೀ ನಿರೀಕ್ಷಿಸುತ್ತಾರೆ.

ಮಾಸ್ಕ್​​ ಮಾರಾಟ ಯಂತ್ರದಿಂದ ತುಂಬಾ ಸಹಾಯವಾಗಿದೆ. ನಾವು ಚಿಕಿತ್ಸಾಲಯಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ನಿಮ್ಮ ಸರದಿ ಬಂದಾಗ ಕಾರ್ಡ್​ ತೋರಿಸಿದ್ರೆ ಸಾಕು, ನಮಗೆ ಮಾಸ್ಕ್​ ದೊರೆಯುತ್ತದೆ ಎಂದು ತೈಪೆ ನಗರದ ಗೃಹಿಣಿಯಾದ ಚೆಂಗ್ ಹೇಳುತ್ತಾರೆ.

ರಾಷ್ಟ್ರೀಯ ಆರೋಗ್ಯ ವಿಮಾ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ತೈವಾನೀಸ್ ನಿವಾಸಿಗಳು, ಈ ಮಾರಾಟ ಯಂತ್ರದಿಂದ ಪ್ರತಿ 14 ದಿನಗಳಿಗೊಮ್ಮೆ ಒಂಬತ್ತು ಮುಖವಾಡಗಳನ್ನು ಖರೀದಿಸಲು ಅನುಮತಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.