ETV Bharat / international

ಕಾಬೂಲ್‌ ಬಿಡುವ ಮುನ್ನ ಶಸ್ತ್ರಸಜ್ಜಿತ ವಾಹನಗಳು, ಯುದ್ಧ ವಿಮಾನಗಳ ನಿಷ್ಕ್ರಿಯಗೊಳಿಸಿದ ಅಮೆರಿಕ ಸೇನೆ

ಅಫ್ಘಾನಿಸ್ತಾನಕ್ಕೆ ವಿದಾಯ ಹೇಳುವ ಮುನ್ನ ತಾಲಿಬಾನಿಗಳಿಗೆ ತಮ್ಮ ಶಸ್ತ್ರಾಸ್ತ್ರಗಳು ಸಿಗದಂತೆ ಮಾಡಿರುವ ಯುಎಸ್‌ ಭದ್ರತಾ ಪಡೆಗಳು ಕಾಬೂಲ್‌ ವಿಮಾನ ನಿಲ್ದಾಣದಲ್ಲಿದ್ದ 73 ವಿಮಾನಗಳು, ಶಸ್ತ್ರಸಜ್ಜಿತ ವಾಹನಗಳು, ಹೈಟೆಕ್ ರಾಕೆಟ್ ರಕ್ಷಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿವೆ.

US Military Disabled Scores Of Aircraft, Armored Vehicles Before Leaving Kabul Airport
ಕಾಬೂಲ್‌ ಬಿಡುವ ಮುನ್ನ ಶಸ್ತ್ರಸಜ್ಜಿತ ವಾಹನಗಳು, ವಿಮಾನಗಳ ನಿಷ್ಕ್ರಿಯಗೊಳಿಸಿದ ಯುಎಸ್‌ ಸೇನೆ
author img

By

Published : Aug 31, 2021, 8:28 AM IST

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕ ಅಫ್ಘಾನ್‌ನಿಂದ ಸಂಪೂರ್ಣವಾಗಿ ತಮ್ಮವರನ್ನು ಸ್ಥಳಾಂತರ ಮಾಡಿಸಿದ ನಂತರ ನಿನ್ನೆ ಸೇನೆಯನ್ನು ವಾಪಸ್‌ ಕರೆಸಿಕೊಂಡಿದೆ. ಆದರೆ ಯುಎಸ್‌ ಭದ್ರತಾ ಪಡೆಗಳು ಕಾಬೂನ್‌ ಅನ್ನು ತೊರೆಯುವ ಮುನ್ನ ತಾಲಿಬಾನ್‌ಗಳಿಗೆ ಶಾಕ್‌ ನೀಡಿ ಹೋಗಿದ್ದಾರೆ.

ಇಲ್ಲಿಂದ ಹೊರಡುವ ಮುನ್ನ ಕಾಬೂಲ್ ವಿಮಾನ ನಿಲ್ದಾಣದಲ್ಲಿದ್ದ ಯುಎಸ್‌ಗೆ ಸೇರಿದ ಹಲವಾರು ವಿಮಾನಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಹಾಗೂ ಹೈಟೆಕ್ ರಾಕೆಟ್ ರಕ್ಷಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಮೆರಿಕ ಜನರಲ್ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಕೆನ್ನೆತ್ ಮೆಕೆಂಜಿ, ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ 73 ವಿಮಾನಗಳನ್ನು ನಿಷ್ಪ್ರಯೋಜಕಗೊಳಿಸಲಾಗಿದೆ. ಜನರನ್ನು ಸ್ಥಳಾಂತರಿಸುವ 2 ವಾರಗಳಿಗೂ ಮೊದಲೇ ತಾಲಿಬಾನಿಗಳಿಗೆ ಯಾವುದೇ ಅಸ್ತ್ರಗಳು ಸಿಗದಂತೆ ಮಾಡಿದ್ದೇವೆ ಎಂದು ಹೇಳಿದರು.

ಇಲ್ಲಿರುವ ಆ ವಿಮಾನವು ಇನ್ನು ಮುಂದೆ ಹಾರುವುದಿಲ್ಲ. ಅವುಗಳನ್ನು ಎಂದಿಗೂ ಯಾರಿಂದಲೂ ನಿರ್ವಹಿಸಲು ಸಾಧ್ಯವಾಗದು. ಇವುಗಳ ಹಾರಾಟವನ್ನು ಆರಂಭಿಸಲು ತಾಲಿಬಾನಿಗಳಲ್ಲಿ ಹೆಚ್ಚಿನವರು ಸಮರ್ಥರಿಲ್ಲ. ಆದರೆ ಖಂಡಿತವಾಗಿಯೂ ಇಲ್ಲಿನ ವಿಮಾನಗಳು ಮತ್ತೆ ಹಾರಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: Afghanistan crisis: ತಾಲಿಬಾನ್ ಗುಡುಗಿಗೆ ಗಡುವಿಗೂ ಮುನ್ನವೇ ಜಾಗ ಖಾಲಿ ಮಾಡಿದ ಅಮೆರಿಕ; ವಿಮಾನ ಹತ್ತಿದ ಕೊನೆಯ ಸೈನಿಕ

ಆಗಸ್ಟ್ 14 ರಂದು ಏರ್‌ಲಿಫ್ಟ್ ಆರಂಭವಾದಾಗ ಕಾಬೂಲ್ ವಿಮಾನ ನಿಲ್ದಾಣ ನಿರ್ವಹಿಸಲು ಸುಮಾರು 6,000 ಸೈನಿಕರ ಬಲ ಬಳಸಲಾಗಿತ್ತು. 1 ಮಿಲಿಯನ್‌ ಡಾಲರ್‌ ವೆಚ್ಚದ ಸುಮಾರು 70 ಎಂಆರ್‌ಎಪಿ ಶಸ್ತ್ರಸಜ್ಜಿತ ಯುದ್ಧತಂತ್ರದ ವಾಹನಗಳು ಹಾಗೂ 27 ಹಮ್ವೀ ಯುದ್ಧ ವಾಹನಗಳನ್ನು ಸೇನೆ ಇಲ್ಲಿಂದ ಹೊರಡುವ ಮೊದಲು ನಿಷ್ಕ್ರಿಯಗೊಳಿಸಿದೆ.

ವಿಮಾನ ನಿಲ್ದಾಣವನ್ನು ರಾಕೆಟ್ ದಾಳಿಯಿಂದ ರಕ್ಷಿಸಲು ಬಳಸಲಾಗುತ್ತಿದ್ದ ಸಿ-ರ್‍ಯಾಲಿ ಸಿಸ್ಟಮ್‌, ಕೌಂಟರ್ ರಾಕೆಟ್, ಫಿರಂಗಿ ಕೂಡ ಯುಎಸ್ ಇಲ್ಲೇ ಬಿಟ್ಟು ಹೋಗಿದೆ. ಸಿ-ರ್‍ಯಾಲಿ ಸಿಸ್ಟಮ್‌ ರಾಕೆಟ್‌ ಬ್ಯಾರೇಜ್‌ಗಳ ಮೂಲಕ ಐಸಿಸ್‌ ದಾಳಿಯನ್ನು ತಡೆಯಲು ಸಹಾಯ ಮಾಡಿತ್ತು. ಕೊನೆಯ ಯುಎಸ್ ವಿಮಾನವು ಹೊರಡುವ ಮೊದಲು ನಾವು ಆ ವ್ಯವಸ್ಥೆಗಳನ್ನು ಕೊನೆಯ ಕ್ಷಣದವರೆಗೂ ಕಾರ್ಯನಿರ್ವಹಿಸಲು ಆಯ್ಕೆ ಮಾಡಿದ್ದೇವೆ ಎಂದು ಮೆಕೆಂಜಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.