ಕಂದಹಾರ್: ಅಫ್ಘಾನಿಸ್ತಾದಲ್ಲಿ ಉಗ್ರರ ವಿರುದ್ಧ ಸಮರ ಸಾರಿರುವ ಅಮೆರಿಕ ಸೇನೆ ತಾಲಿಬಾನ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿರುವುದನ್ನು ಸ್ಪಷ್ಟಪಡಿಸಿದೆ. ಕಂದಹಾರ್‌ನ ದಕ್ಷಿಣ ಪ್ರಾಂತ್ಯದ ಸೇನಾ ಚೆಕ್‌ಪಾಯಿಂಟ್‌ನಲ್ಲಿ ಇದೇ ವಾರ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಸ್ಪಷ್ಟಪಡಿಸಿದೆ.
ವೈಮಾನಿಕ ದಾಳಿಯನ್ನು ವಿರೋಧಿಸಿರುವ ಉಗ್ರ ಸಂಘಟನೆ, ಅಮೆರಿಕ ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಡಿಸೆಂಬರ್ 10 ರಂದು ಕಂದಹಾರ್‌ನ ಝಾರಿ ಜಿಲ್ಲೆಯ ಎಎನ್‌ಡಿಎಸ್‌ಫ್ ಚೆಕ್‌ಪಾಯಿಂಟ್‌ನಲ್ಲಿ ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರ ಮೇಲೆ ಅಫ್ಘಾನ್‌ನ ಅಮೆರಿಕ ಸೇನೆ(USFOR-A) ದಾಳಿ ಮಾಡಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಯುಎಸ್ ಫಾರ್-ಎ ವಕ್ತಾರ ಸೋನಿ, ಈ ಏರ್‌ಸ್ಟ್ರೈಕ್‌ನಲ್ಲಿ ಯುಎಸ್-ತಾಲಿಬಾನ್ ಒಪ್ಪಂದದ ಉಲ್ಲಂಘಟನೆಯಾಗಿಲ್ಲ ಎಂದು ನಿನ್ನೆಯಷ್ಟೇ ಟ್ವೀಟ್ ಮಾಡಿದ್ದರು.
ವೈಮಾನಿಕ ದಾಳಿಯಲ್ಲಿ ನಾಗರಿಕರು ಗಾಯಗೊಂಡಿದ್ದಾರೆ ಎಂಬ ತಾಲಿಬಾನ್ ಸಂಘಟನೆಯ ಆರೋಪವನ್ನು ಅಲ್ಲಿನ ಸೇನಾ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಕತಾರ್‌ನ ದೋಹಾದಲ್ಲಿ ಇದೇ ವರ್ಷದ ಫೆಬ್ರವರಿ 29 ರಂದು ಅಮೆರಿಕ ಮತ್ತು ತಾಲಿಬಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು.