ಕಾಬೂಲ್ : ಉರ್ದು ಭಾಷಿತ ತಾಲಿಬಾನ್‌ಗಳು ಕಾಬೂಲ್‌ನಲ್ಲಿರುವ ಭಾರತೀಯ ದೂತವಾಸದ ಎದುರಿನ ಅಫ್ಘಾನ್ ಆಂತರಿಕ ಸಚಿವಾಲಯದ ಹಳೆಯ ಕಟ್ಟಡವನ್ನು ಪ್ರಮುಖ ನೆಲೆಯನ್ನಾಗಿ ಮಾಡಿಕೊಂಡಿದ್ದಾರೆ. ತಾಲಿಬಾನ್‌ಗಳ ವೇಷಧರಿಸಿ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ(ಎನ್‌ಡಿಎಸ್) ಕಟ್ಟಡದಲ್ಲಿ ಸುಲಿಗೆ ಹಾಗೂ ಭಾರತೀಯರೊಂದಿಗೆ ಸಂಪರ್ಕ ಹೊಂದಿದವರನ್ನು ಹುಡುಕಿ ಕೊಲ್ಲುತ್ತಿದ್ದಾರೆ ಎಂದು ಅಫ್ಘಾನ್‌ನಲ್ಲಿನ ಉನ್ನತ ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ.
ಎನ್‌ಡಿಎಲ್ ಗುಪ್ತಚರ ದಳದ ಮುಖ್ಯ ಕಚೇರಿಯಾಗಿದ್ದು, ಈ ಕಟ್ಟಡದಲ್ಲಿ ಹತ್ತಾರು ಬ್ಲಾಕ್‌ಗಳು ಇವೆ. ಕಾಬೂಲ್‌ನಲ್ಲಿರುವ ಚೀನಾದ ರಾಯಭಾರಿ ಕಚೇರಿ ಮುಂಭಾಗದಲ್ಲೇ ಕಟ್ಟಡ ಇದೆ. ದಾಳಿ ಮಾಡಿ ಪರಿಶೀಲನೆ ನಡೆಸಿದವರು ಉರ್ದು ಭಾಷೆ ಮಾತನಾಡುವ ತಂಡವಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಭಾಷೆ ಉರ್ದು ಆಗಿರುವುದರಿಂದ ಇವರು ಪಾಕ್ ಮೂಲದವರೇ ಎಂಬ ಅನುಮಾನ ಶುರುವಾಗಿವೆ.
ಆಗಸ್ಟ್ 16ರಂದು ಅಫ್ಘಾನ್ ಅನ್ನು ಸಂಪೂರ್ಣ ತಾಲಿಬಾನ್‌ಗಳು ವಶಕ್ಕೆ ಪಡೆದ ಬಳಿಕ ಎನ್‌ಡಿಸ್ ಮುಖ್ಯ ಕಚೇರಿ ಹಾಗೂ ಡೇಟಾ ಅನಾಲಿಸಿಸ್ ಕೇಂದ್ರದ ಮೇಲೆ ದಾಳಿ ಮಾಡಿದ್ದ ಅಪರಿಚಿತ ಉರ್ದು ಭಾಷಿಕ ತಾಲಿಬಾನ್‌ಗಳು, ಕಚೇರಿಗೆ ನುಗ್ಗಿ ಧ್ವಂಸ ಮಾಡಿದ್ದಾರೆ. ಪಾಕ್‌ನ ಏಜೆಂಟ್ ಸಹಾಯದಿಂದ ಎನ್‌ಡಿಎಸ್ ಕಚೇರಿಯಲ್ಲಿನ ಮಾಹಿತಿ, ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ಗುಪ್ತಚರ ಮತ್ತು ಭದ್ರತಾ ಪಡೆಗಳ ಆಪ್ತ ಮೂಲಗಳು ತಿಳಿಸಿವೆ.
ಈ ತಂಡ ಹಕ್ಕಾನಿ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ ಒಂದು ಸಣ್ಣ ಗುಂಪಾಗಿದೆ. ಎನ್‌ಡಿಎಸ್ ಹಾಗೂ ಭಾರತದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ-ರಾ ಸಂಪರ್ಕದ ಕುರಿತ ಮಾಹಿತಿಗಾಗಿ ಹುಡುಕಾಟ ನಡೆಸಿದೆ ಎನ್ನಲಾಗಿದೆ.
ಆರಂಭದಲ್ಲಿ ಈ ತಂಡ ಅಮೆರಿಕದ ಕೆಲವು ಆಧುನಿಕ ಶಸ್ತ್ರಾಸ್ತ್ರಗಳನ್ನು ಹುಡುಕುತ್ತಿರಬಹುದು ಎಂದು ನಾವು ಭಾವಿಸಿದ್ದೆವು. ಆದರೆ, ಎನ್‌ಡಿಎಸ್ ಡೇಟಾ ಸೆಂಟರ್‌ನ ಕಪಾಟುಗಳನ್ನು ಮುರಿದು ಸಾವಿರಾರು ದಾಖಲೆಗಳು ಮತ್ತು ಸಿಡಿಗಳನ್ನು ವಿಮಾನಗಳ ಮೂಲಕ ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ಪರ ಬ್ಯಾಟಿಂಗ್ ಮಾಡಿದ ನೆರೆಹೊರೆಯ ರಾಷ್ಟ್ರಗಳು: ಸರ್ಕಾರ ರಚನೆಗೆ ನೀಡಿದ ಸಲಹೆಯೇನು ಗೊತ್ತಾ?