ETV Bharat / international

ಅಫ್ಘಾನಿಸ್ತಾನದಲ್ಲಿ ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚನೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕರೆ

ತಾಲಿಬಾನ್ ಅಥವಾ ಯಾವುದೇ ಇತರ ಗುಂಪು ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರನ್ನು ಬೆಂಬಲಿಸಬಾರದು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿದೆ. ಆದರೆ ಇದೇ ವೇಳೆ ಎಚ್ಚರಿಕೆಯ ಹಾದಿ ಹಿಡಿರುವ ಯುಎನ್‌ಎಸ್‌ಸಿ ಸುಸ್ಥಿರ ಆಡಳಿತ ಸ್ಥಾಪನೆಗೆ ಕರೆ ನೀಡಿದೆ.

UNSC calls for establishment of new, united, inclusive and representative govt in Afghanistan
ಅಫ್ಘಾನಿಸ್ತಾನದಲ್ಲಿ ಏಕೀಕೃತ, ಅಂತರ್ಗತ ಸರ್ಕಾರದ ಆಡಳಿತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕರೆ
author img

By

Published : Aug 17, 2021, 1:35 PM IST

ವಾಷಿಂಗ್ಟನ್‌: ತಾಲಿಬಾನ್‌ ಉಗ್ರ ಸಂಘಟನೆ ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಅಲ್ಲಿ ಯಾವುದೇ ಪ್ರಜಾಪ್ರಭುತ್ವದ ಸರ್ಕಾರ ಆಡಳಿತಕ್ಕೆ ಬರುವ ಸಾಧ್ಯತೆಗಳು ಇಲ್ಲ. ಹೀಗಾಗಿ ಅಫ್ಘಾನ್‌ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಎಲ್ಲರನ್ನೂ ಒಳಗೊಂಡ ನಾಗರಿಕ ಸರ್ಕಾರ ರಚಿಸಬೇಕು ಎಂದು ಕರೆ ನೀಡಿದೆ.

ಜನರಿಂದ ರಚಿತವಾದ ಸರ್ಕಾರದಲ್ಲಿ ತಾಲಿಬಾನ್‌ ಕೂಡ ಒಂದು ಭಾಗವಾಗಿರಲಿ ಎಂದು ಯುಎನ್‌ಎಸ್‌ಸಿ ಕರೆ ನೀಡಿದೆ. ಆದರೆ ಇದಕ್ಕೂ ಉಗ್ರ ಸಂಘಟನೆ ತಾಲಿಬಾನ್‌ ಒಪ್ಪುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ನಿನ್ನೆ ನಡೆದ ಸಭೆಯಲ್ಲಿ, ತಾಲಿಬಾನ್ ಅಥವಾ ಯಾವುದೇ ಇತರ ಅಫ್ಘಾನ್ ಗುಂಪು ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರನ್ನು ಬೆಂಬಲಿಸಬಾರದು ಎಂದು ಖಚಿತಪಡಿಸಿಕೊಳ್ಳುವ ಅಗತ್ಯತೆಯನ್ನು ದೃಢಪಡಿಸಿದೆ. ಸಂಪೂರ್ಣವಾಗಿ ಸಂಘಟನೆಗೆ ಅಧಿಕಾರ ನೀಡಬಾರದು ಎಂಬುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಲಿ ಪ್ರತಿಪಾದಿಸಿದೆ.

15 ರಾಷ್ಟ್ರಗಳ ಕೌನ್ಸಿಲ್ ಸಭೆಯಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ತುರ್ತು ಸಭೆ ಸೇರಿ ಚರ್ಚೆ ನಡೆಸಲಾಗಿದೆ. ಅಫ್ಘಾನ್‌ನಲ್ಲಿ ತಾಲಿಬಾನ್ ಹಿಡಿತ ಸಾಧಿಸಿದೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ. ಸಾವಿರಾರು ಜನರು ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ನಿರ್ಮಾಣವಾಗಿದ್ದು, ದೇಶದಲ್ಲಿ ಅನಿಶ್ಚಿತತೆ ಮತ್ತು ಹಲವಾರು ದುರಂತಗಳಿಗೆ ಆ ರಾಷ್ಟ್ರ ಸಾಕ್ಷಿಯಾಗಿದೆ.

ಇದನ್ನೂ ಓದಿ: ಅಫ್ಘನ್​ ಜನರ ಬೆಂಬಲಕ್ಕೆ​ ಬದ್ಧ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

ಅಫ್ಘಾನಿಸ್ತಾನ ಕುರಿತ ಕೌನ್ಸಿಲ್ ಸಭೆ ಕೇವಲ 10 ದಿನಗಳಲ್ಲಿ ಎರಡನೇ ಬಾರಿಗೆ ನಡೆದಿದೆ. ಇದು ಪ್ರಸ್ತುತ ಭಾರತದ ಅಧ್ಯಕ್ಷತೆಯಲ್ಲಿ ನಡೆದಿದೆ ವಿಶ್ವಸಂಸ್ಥೆಯ ಮಂಡಳಿ ಸಭೆಯಾಗಿದೆ. ಎಲ್ಲಾ ಹಗೆತನಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಅಂತರ್ಗತ ಮಾತುಕತೆಯ ಮೂಲಕ ಹೊಸ ಸರ್ಕಾರದಲ್ಲಿ ಸಂಪೂರ್ಣ ಸಮಾನತೆ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಯನ್ನು ಒಳಗೊಂಡಂತೆ ಒಗ್ಗಟ್ಟಿನ ಸರ್ಕಾರಕ್ಕೆ ಕೌನ್ಸಿಲ್ ಸದಸ್ಯರು ಕರೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.