ETV Bharat / international

ನಿಷೇಧ ಶಿಕ್ಷೆ ವಿರುದ್ಧ ಕ್ರಿಕೆಟಿಗ ಉಮರ್ ಮೇಲ್ಮನವಿ: ಜೂನ್​ 11ರಂದು ಭವಿಷ್ಯ ನಿರ್ಧಾರ

ತನಗೆ ಮೂರು ವರ್ಷಗಳ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ನಿಷೇಧ ಹೇರಿರುವುದರ ವಿರುದ್ಧ ಉಮರ್​ ಅಕ್ಮಲ್​ ಸಲ್ಲಿಸಿರುವ ಮೇಲ್ಮನವಿಯನ್ನು ಜೂನ್​ 11 ರಂದು ಪಿಸಿಬಿ ಪರಿಶೀಲಿಸಲಿದೆ.

Umar Akmal's appeal against 3-year ban
3 ವರ್ಷಗಳ ನಿಷೇಧದ ವಿರುದ್ದ ಮೇಲ್ಮನವಿ ಸಲ್ಲಿಸಿದ ಉಮರ್
author img

By

Published : Jun 6, 2020, 2:25 PM IST

ಲಾಹೋರ್ : ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕ್‌ ಕ್ರಿಕೆಟಿಗ ಉಮರ್‌ ಅಕ್ಮಲ್‌ಗೆ ಮೂರು ವರ್ಷಗಳ ನಿಷೇಧ ಶಿಕ್ಷೆ ನೀಡಲಾಗಿತ್ತು. ಈ ಶಿಕ್ಷೆಯ ವಿರುದ್ಧ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಅಕ್ಮಲ್ ಸಲ್ಲಿಸಿದ್ದ ಮನವಿಯನ್ನು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಫಕೀರ್ ಮೊಹಮ್ಮದ್ ಖೋಖರ್ ಅವರು ಸ್ವತಂತ್ರ ತೀರ್ಪುಗಾರರಾಗಿ ಜೂನ್​ 11 ರಂದು ಮತ್ತೊಮ್ಮೆ ಆಲಿಸಲಿದ್ದಾರೆ.

ವಿಚಾರಣೆಯ ನೋಟಿಸ್‌ ಅನ್ನು ಉಮರ್ ಅಕ್ಮಲ್ ಮತ್ತು ಪಿಸಿಬಿಗೆ ನೀಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Umar Akmal's appeal against 3-year ban
ಪಾಕ್ ಕ್ರಿಕೆಟ್‌ ಮಂಡಳಿ

ಏಪ್ರಿಲ್ 27 ರಂದು ಶಿಸ್ತು ಸಮಿತಿಯ ಅಧ್ಯಕ್ಷ, ನ್ಯಾಯಮೂರ್ತಿ (ನಿವೃತ್ತ) ಫಜಲ್-ಎ-ಮಿರಾನ್ ಚೌಹಾನ್, ಉಮರ್ ಅಕ್ಮಲ್ ಅವರನ್ನು ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯ 2.4.4 ನೇ ವಿಧಿ ಉಲ್ಲಂಘಿಸಿದ ಆರೋಪದಲ್ಲಿ ಮೂರು ವರ್ಷಗಳ ಕಾಲ ಕ್ರಿಕೆಟ್​ನಿಂದ ಅಮಾನತುಗೊಳಿಸಿದ್ದರು. ಇದೀಗ ಮರು ವಿಚಾರಣೆ ತೀರ್ಪು ಪ್ರಕಟವಾಗುವವರೆಗೂ ಪಿಸಿಬಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮೇ 19 ರಂದು, ಅಕ್ಮಲ್ ತಮಗೆ ವಿಧಿಸಿರುವ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.