ETV Bharat / international

ಉಕ್ರೇನ್​ನ ವಸತಿ ಪ್ರದೇಶಗಳ ಮೇಲೆ ರಷ್ಯಾ ಶೆಲ್​ ದಾಳಿ; ನಾಗರಿಕರ ಪರದಾಟ, ಜೀವಹಾನಿ - ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ

ಉಕ್ರೇನ್​ನ ಮಧ್ಯ, ಉತ್ತರ ಹಾಗೂ ದಕ್ಷಿಣ ಭಾಗಗಗಳ ವಸತಿ ಪ್ರದೇಶಗಳಲ್ಲಿ ಭಾನುವಾರ ರಾತ್ರಿ ರಷ್ಯಾ ಭೀಕರ ಶೆಲ್​ ದಾಳಿ ನಡೆಸಿದ್ದು, ಖಾರ್ಕಿವ್​ನ ವಸತಿ ಪ್ರದೇಶದಲ್ಲಿ ಟೆಲಿವಿಷನ್​ ಟವರ್​ ಹಾನಿಗೀಡಾಗಿದೆ. ಕೀವ್​ನ ಹೊರವಲಯದ ಇರ್ಪಿನ್​ ನಗರದಲ್ಲಿ ನಡೆದ​ ದಾಳಿಯಲ್ಲಿ 8 ನಾಗರಿಕರು ಸಾವನ್ನಪ್ಪಿದ್ದು, ಅವರಲ್ಲಿ ಒಂದು ಕುಟುಂಬವೂ ಸೇರಿದೆ. ಇದರಿಂದಾಗಿ ಆಕ್ರಮಣಕ್ಕೊಳಗಾಗಿರುವ ನಾಗರಿಕರನ್ನು ಕಾಪಾಡುವ ಎರಡನೇ ಪ್ರಯತ್ನವೂ ವಿಫಲವಾಗಿದೆ ಎಂದು ಉಕ್ರೇನ್​ ರಕ್ಷಣಾ ಸಚಿವಾಲಯ ತಿಳಿಸಿದೆ.

ukrain
ಉಕ್ರೇನ್​
author img

By

Published : Mar 7, 2022, 2:17 PM IST

ಉಕ್ರೇನ್​: ರಷ್ಯಾ ಒಂದು ಹೆಜ್ಜೆ ಮುಂದೆ ಹೋಗಿ ಉಕ್ರೇನ್​ನ ಮಧ್ಯ, ಉತ್ತರ ಹಾಗೂ ದಕ್ಷಿಣ ಭಾಗಗಗಳ ವಸತಿ ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಭೀಕರ ಶೆಲ್​ ದಾಳಿ ನಡೆಸಿದ್ದು, ಖಾರ್ಕಿವ್​ನ ವಸತಿ ಪ್ರದೇಶದಲ್ಲಿ ಟೆಲಿವಿಷನ್​ ಟವರ್​ ಹಾನಿಗೀಡಾಗಿದೆ. ಕೀವ್​ನ ಹೊರವಲಯದ ಇರ್ಪಿನ್​ ನಗರದಲ್ಲಿ ನಡೆದ​ ದಾಳಿಯಲ್ಲಿ 8 ನಾಗರಿಕರು ಸಾವನ್ನಪ್ಪಿದ್ದು, ಅವರಲ್ಲಿ ಒಂದು ಕುಟುಂಬವೂ ಸೇರಿದೆ.

ಇದರಿಂದಾಗಿ ಆಕ್ರಮಣಕ್ಕೊಳಗಾಗಿರುವ ನಾಗರಿಕರನ್ನು ಕಾಪಾಡುವ ಎರಡನೇ ಪ್ರಯತ್ನವೂ ವಿಫಲವಾಗಿದೆ ಎಂದು ಉಕ್ರೇನ್​ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾ ಹಾಗೂ ಉಕ್ರೇನ್​ ನಾಯಕರ ನಡುವಿನ ಮೂರನೇ ಸುತ್ತಿನ ಮಾತುಕತೆ ಇಂದು ನಡೆಯಲಿದ್ದು, ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಈ ಕೆಟ್ಟ ಜನರನ್ನು ಈ ದೇಶದಿಂದ ಹೊರ ಹಾಕಬೇಕಾದರೆ ಆಕ್ರಮಿತ ಪ್ರದೇಶಗಳಲ್ಲಿರುವ ಜನರು ಬೀದಿಗಿಳಿದು ಹೋರಾಡುವುದು ಅನಿವಾರ್ಯ ಎಂದು ಧೈರ್ಯ ತುಂಬಿದ್ದಾರೆ.

ಪಶ್ಚಿಮ ರಾಷ್ಟ್ರಗಳ ನಡೆ ಟೀಕಿಸಿದ ಉಕ್ರೇನ್​ ಅಧ್ಯಕ್ಷರು: ಅಮೆರಿಕ ಹಾಗೂ ನ್ಯಾಟೋ ದೇಶಗಳಿಂದ ಹೆಚ್ಚಿನ ಯುದ್ಧವಿಮಾನಗಳನ್ನು ಪೂರೈಸುವಂತೆ ಝೆಲೆನ್ಸ್ಕಿ ಮನಿವಿ ಮಾಡಿಕೊಂಡಿದ್ದರು. ಆದರೆ ಯುದ್ಧವಿಮಾನಗಳನ್ನು ಪೂರೈಸುವಲ್ಲಿ ಕೆಲವು ಸಂಕೀರ್ಣತೆ ಇರುವುದರಿಂದ ಪಶ್ಚಿಮದ ದೇಶಗಳು ರಷ್ಯಾದ ಮೇಲಿನ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಪಶ್ಚಿಮ ದೇಶಗಳ ಯಾವ ಒಬ್ಬ ನಾಯಕನೂ ರಷ್ಯಾದ ಇತ್ತೀಚಿನ ಆಕ್ರಮಣವನ್ನು ಪ್ರಶ್ನೆ ಮಾಡಿಲ್ಲ ಎಂದು ಅಧ್ಯಕ್ಷ ಝೆಲೆನ್ಸ್ಕಿ ಭಾನುವಾರ ಟೀಕಿಸಿದ್ದಾರೆ.

ನಿರಂತರ ಶೆಲ್​ ಹಾಗೂ ಮಿಸೈಲ್​ ದಾಳಿಯಿಂದ ಮನೆಗಳು ಧರೆಗುರುಳಿದ್ದು, ಜನರು ನೆಲದಲ್ಲೇ ಕುಳಿತುಕೊಳ್ಳುವಂತಾಗಿದೆ. ಯಾವುದೇ ಸಂವಹನಕ್ಕೂ ಅವಕಾಶವಿಲ್ಲದಂತಾಗಿದೆ. ನೀರು, ಗ್ಯಾಸ್​, ಬೆಳಕು ಇಲ್ಲದೇ ಕಾಲ ದೂಡುವ ಪರಿಸ್ಥಿಯನ್ನು ರಷ್ಯಾ ಉಕ್ರೇನ್​ನಲ್ಲಿ ನಿರ್ಮಿಸಿದೆ. ಮರಿಯೊಪೋಲ್​ ದಕ್ಷಿಣ ಬಂದರು ನಗರದಲ್ಲಿ ಬಹುತೇಕ ನೀರು, ಆಹಾರ, ಔಷಧಗಳ ಪೂರೈಕೆ ಸ್ಥಗಿತವಾಗಿದೆ.

ರಷ್ಯಾ 11 ಗಂಟೆಗಳ ಕದನ ವಿರಾಮ ಘೋಷಿಸಿ, ಗಾಯಾಳುಗಳನ್ನು ಹಾಗೂ ಅಲ್ಲಿನ ನಾಗರಿಕರನ್ನು ಸ್ಥಳಾಂತರಿಸಲು ಅವಕಾಶವನ್ನು ನೀಡಿತ್ತು. ಆದರೆ, ಸ್ವಲ್ಪ ಸಮಯದಲ್ಲೇ ಮಾನವಿಕ​ ಕಾರಿಡಾರ್​ಗಳನ್ನು ಮುಚ್ಚಿವೆ. ಅಲ್ಲಿ ಗ್ರೀನ್​ ಕಾರಿಡಾರ್​ಗಳು ಇರಲೂ ಸಾಧ್ಯವಿಲ್ಲ. ಯಾಕೆಂದರೆ ಕೇವಲ ರಷ್ಯಾದ ಕೆಟ್ಟ ತಲೆಗಳು ಮಾತ್ರ ಯಾವಾಗ ಯಾರ ಮೇಲೆ ಆಕ್ರಮಣ ಮಾಡಬೇಕು ಎಂಬುದನ್ನು ನಿರ್ಧರಿಸುತ್ತವೆ ಎಂದು ಆಂತರಿಕ ಸಚಿವಾಯಲದ ಸಲಹೆಗಾರ ಆ್ಯಂಟನ್​ ಗೆರಾಶ್ಚೆಂಕೋ ಟೆಲಿಗ್ರಾಮ್​ನಲ್ಲಿ ತಿಳಿಸಿದ್ದಾರೆ.

ಹೊಸ ತಂತ್ರ ಹೆಣೆದ ರಷ್ಯಾ ಪಡೆ: ಉಕ್ರೇನ್​ ಮೇಲಿನ ರಷ್ಯಾ ಆಕ್ರಮಣ 12ನೇ ದಿನವನ್ನು ತಲುಪಿದ್ದು, 1.5 ಮಿಲಿಯನ್​ ಜನರನ್ನು ದೇಶದಿಂದ ಪಲಾಯನ ಮಾಡಿದ್ದಾರೆ. ಯುಎಸ್​ನ ಹಿರಿಯ ರಕ್ಷಣಾ ಅಧಿಕಾರಿ ಹೇಳಿರುವಂತೆ ಉಕ್ರೇನ್​ ಸುತ್ತ ಸುತ್ತುವರೆದಿದ್ದ ರಷ್ಯಾದ ಸೇನಾ ಪಡೆಯ ಶೇ 95ರಷ್ಟು ಸೈನಿಕರು ಈಗ ಉಕ್ರೇನ್​​ಗೆ ನುಗ್ಗಿದ್ದಾರೆ. ಉಕ್ರೇನ್​ನ ಕೀವ್​, ಖಾರ್ಕಿವ್​, ಚೆರ್ನೀವ್​ ಆಕ್ರಮಿಸಲು ರಷ್ಯಾಪಡೆ ಹೊಸ ತಂತ್ರಗಳನ್ನು ರೂಪಿಸುತ್ತಲೇ ಇದೆ. ಆದರೆ, ಆ ಎಲ್ಲಾ ನಗರಗಳಲ್ಲೂ ಉಕ್ರೇನ್​ನ ಬೆಂಗಾವಲು ಪಡೆಗಳು ಬಹಳ ಎಚ್ಚರಿಕೆಯಿಂದ ರಷ್ಯಾ ದಾಳಿಯನ್ನು ಮೆಟ್ಟಿ ನಿಲ್ಲುವ ಪ್ರಯತ್ನ ಮಾಡುತ್ತಾ ಪ್ರತಿರೋಧ ತೋರುತ್ತಿದೆ.

ಯುದ್ಧದ ಭೀಕರ ದೃಶ್ಯ ಸೆರೆ: ಖಾರ್ಕಿವ್​ನ ವಸತಿ ಪ್ರದೇಶದಿಂದ ತಪ್ಪಿಸಿಕೊಂಡು ಓಡಲು ಜನರು ಬಳಸುತ್ತಿದ್ದ ಸೇತುವೆ ಬಳಿಯೇ ಶೆಲ್​ ಅಪ್ಪಳಿಸುತ್ತಿರುವುದು. ಹೋರಾಟಗಾರರ ಗುಂಪೊಂದು ಕುಟುಂಬಗಳಿಗೆ ಸಹಾಯ ಮಾಡುತ್ತಿರುವ ವಿಡಿಯೋ ಅಲ್ಲಿನ ಪರಿಸ್ಥಿತಿಯನ್ನು ಹೇಳುತ್ತಿದೆ.

ವಿಶ್ವವೇ ನಮ್ಮ ಪರ ಇದೆ- ಉಕ್ರೇನ್​ ಸಚಿವರ ಆಶಾವಾದ: ಹತ್ತಾರು ದೇಶಗಳಿಂದ ಸ್ವಯಂ ಸೇವಕ ಹೋರಾಟಗಾರರನ್ನು ಸೇರಿಸಿಕೊಂಡು ಅಂತಾರಾಷ್ಟ್ರೀಯ ಸೇನಾದಳವನ್ನು ನಿರ್ಮಿಸುವ ಯೋಜನೆಯನ್ನು ಉಕ್ರೇನ್​ ಹೊಂದಿದ್ದು, ಈಗಾಗಲೇ 20,000ಕ್ಕಿಂತಲೂ ಹೆಚ್ಚು ಸ್ವಯಂಸೇವಕರು ಸೇರಿಕೊಂಡಿದ್ದಾರೆ. ಕೇವಲ ಮಾತಿನಲ್ಲಿ ಮಾತ್ರವಲ್ಲ ಕಾರ್ಯದಲ್ಲೂ ಇಡೀ ವಿಶ್ವವೇ ಇಂದು ಉಕ್ರೇನ್​ ಪರವಾಗಿದೆ ಎಂದು ಉಕ್ರೇನ್​ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕೀವ ಹಗೆತನ ಬಿಟ್ಟು ಮಾತುಕತೆಗೆ ಬರಬೇಕು- ರಷ್ಯಾ ಕರೆ: ಪ್ರತಿಸಲದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಈ ಬಾರಿಯೂ ರಷ್ಯಾ ಆಕ್ರಮಣದ ಆಪಾದನೆಯನ್ನು ಉಕ್ರೇನ್​ ಮೇಲೆ ಹೇರಿದ್ದು, ಮಾಸ್ಕೋ ಮೇಲಿನ ಆಕ್ರಮಣ ನಿಲ್ಲಬೇಕಾದರೆ, ಕೀವ್​ ಎಲ್ಲಾ ರೀತಿಯ ಹಗೆತನವನ್ನು ಬಿಡಬೇಕು ಹಾಗೂ ​ರಷ್ಯಾದ ಬೇಡಿಕೆಗಳನ್ನು ಪೂರೈಸಬೇಕು ಎಂದು ಆಗ್ರಹಿಸಿದೆ.

ಅರ್ಧ ಗುರಿ ಈಡೇರಿಸಿಕೊಂಡ ಮಾಸ್ಕೋ: ಆದಷ್ಟು ಬೇಗ ಉಕ್ರೇನ್​ ಅನ್ನು ಆಕ್ರಮಿಸಿಕೊಳ್ಳುವ ಯೋಜನೆಯಲ್ಲಿರುವ ರಷ್ಯಾ ಈಗಾಗಲೇ ದಕ್ಷಿಣ ಉಕ್ರೇನ್​ನಲ್ಲಿ ತನ್ನ ಯೋಜನೆಯನ್ನು ಅರ್ಧದಷ್ಟು ಸಾಧಿಸಿಕೊಂಡಿದೆ. ಉಕ್ರೇನ್​ನ ಮಿಲಿಟರಿ, ಕೈಗಾರಿಕಾ ಸಂಕೀರ್ಣಗಳು ಸೇರಿ ಆಯಕಟ್ಟಿನ ಸ್ಥಳ ವಶಪಡಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದು, ಯೋಜನೆಯಂತೆ ಮುಂದುವರೆದಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.