ಬ್ಯಾಂಕಾಕ್(ಥಾಯ್ಲೆಂಡ್) : ಮೂರು ದಿನಗಳ ಪ್ರವಾಸಕ್ಕೆಂದು ಥಾಯ್ಲೆಂಡ್ಗೆ ಬಂದಿಳಿರುವ ಪ್ರಧಾನಿ ನರೇಂದ್ರ ಮೋದಿ ಹೂಡಿಕೆದಾರರನ್ನು ಸೆಳೆಯುತ್ತಿದ್ದಾರೆ.
ಬ್ಯಾಂಕಾಕ್‌ನಲ್ಲಿ ವಿವಿಧ ವ್ಯವಹಾರ ನಾಯಕರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಇಂದು ಆಗುತ್ತಿರುವ ಕೆಲ ಧನಾತ್ಮಕ ಬದಲಾವಣೆಗಳನ್ನು ನಿಮ್ಮ ಮುಂದೆ ತರಲು ಇಚ್ಚಿಸುತ್ತೇನೆ. ಭಾರತದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಕಾಲ. ಇದನ್ನು ನಾನು ತುಂಬಾ ವಿಶ್ವಾಸದಿಂದ ಹೇಳುತ್ತೇನೆ ಎಂದರು. ಇದೇ ವೇಳೆ ಭಾರತ ಸರ್ಕಾರ ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.
-
PM in Bangkok: This is the best time to be in India. Many things are rising while others are falling. Ease of doing business, ease of living, FDI, forest cover, patents, productivity, infrastructure are rising. While taxes, tax rates, red tapism, corruption,cronyism are falling. pic.twitter.com/YAFYgDRxSj
— ANI (@ANI) November 3, 2019 " class="align-text-top noRightClick twitterSection" data="
">PM in Bangkok: This is the best time to be in India. Many things are rising while others are falling. Ease of doing business, ease of living, FDI, forest cover, patents, productivity, infrastructure are rising. While taxes, tax rates, red tapism, corruption,cronyism are falling. pic.twitter.com/YAFYgDRxSj
— ANI (@ANI) November 3, 2019PM in Bangkok: This is the best time to be in India. Many things are rising while others are falling. Ease of doing business, ease of living, FDI, forest cover, patents, productivity, infrastructure are rising. While taxes, tax rates, red tapism, corruption,cronyism are falling. pic.twitter.com/YAFYgDRxSj
— ANI (@ANI) November 3, 2019
ವಿಶ್ವಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ 'ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್' (ವ್ಯವಹಾರ ಮಾಡಲು ಆಕರ್ಷಕ ಪ್ರದೇಶ) ಶ್ರೇಯಾಂಕದಲ್ಲಿ ಭಾರತದ ಸ್ಥಾನ ಸುಧಾರಿಸಿರುವ ಬಗ್ಗೆ ಮಾತನಾಡಿದ ಮೋದಿ, "ಇತರರು ಕುಸಿಯುತ್ತಿರುವಾಗ ಭಾರತದಲ್ಲಿ ಅನೇಕ ವಿಷಯಗಳಲ್ಲಿ ಏರಿಕೆ ಕಾಣುತ್ತಿದೆ. ನಮ್ಮಲ್ಲಿ ವ್ಯಾಪಾರ ಮಾಡುವುದು ಸುಲಭ, ಜೀವನ ನಡೆಸುವುದು ಸುಲಭ. ಎಫ್‌ಡಿಐ, ಅರಣ್ಯ ವ್ಯಾಪ್ತಿ ಹೆಚ್ಚುತ್ತಿದೆ. ತೆರಿಗೆ, ತೆರಿಗೆ ದರ ಹಾಗೂ ಭ್ರಷ್ಟಾಚಾರ ಕುಸಿಯುತ್ತಿದ್ದಂತೆ, ದೇಶದ ಉತ್ಪಾದಕತೆ ಹೆಚ್ಚುತ್ತಿದೆ ಎಂದು ಹೇಳಿದರು.
-
PM in Bangkok: India is now pursuing a dream to become a USD 5 trillion economy. When my govt took over in 2014, India’s GDP was about USD 2 trillion. In 5 yrs, we increased it to nearly USD 3 trillion. This convinces me that dream of USD 5 trillion economy will soon be a reality pic.twitter.com/QMiNre0FWw
— ANI (@ANI) November 3, 2019 " class="align-text-top noRightClick twitterSection" data="
">PM in Bangkok: India is now pursuing a dream to become a USD 5 trillion economy. When my govt took over in 2014, India’s GDP was about USD 2 trillion. In 5 yrs, we increased it to nearly USD 3 trillion. This convinces me that dream of USD 5 trillion economy will soon be a reality pic.twitter.com/QMiNre0FWw
— ANI (@ANI) November 3, 2019PM in Bangkok: India is now pursuing a dream to become a USD 5 trillion economy. When my govt took over in 2014, India’s GDP was about USD 2 trillion. In 5 yrs, we increased it to nearly USD 3 trillion. This convinces me that dream of USD 5 trillion economy will soon be a reality pic.twitter.com/QMiNre0FWw
— ANI (@ANI) November 3, 2019
ಹೂಡಿಕೆ ಹಾಗೂ ಸುಲಭ ವ್ಯವಹಾರಕ್ಕಾಗಿ ಭಾರತಕ್ಕೆ ಬನ್ನಿ. ಹೊಸತನವನ್ನು ಪ್ರಾರಂಭಿಸಲು ನಮ್ಮ ದೇಶಕ್ಕೆ ಆಗಮಿಸಿ. ಕೆಲವು ಅತ್ಯುತ್ತಮ ಪ್ರವಾಸಿ ತಾಣಗಳು ಮತ್ತು ಜನರ ಆತ್ಮೀಯ ಆತಿಥ್ಯವನ್ನು ಅನುಭವಿಸಲು ಬನ್ನಿ. ಭಾರತವು ನಿಮ್ಮನ್ನು ಆಲಿಂಗಿಸಲು ಕಾಯುತ್ತಿದೆ ಎಂದು ಪ್ರಧಾನಿ ವ್ಯಾಪಾರ ಸಮುದಾಯದವರಲ್ಲಿ ಮನವಿ ಮಾಡಿದರು.