ಕಾಬೂಲ್(ಅಫ್ಘಾನಿಸ್ತಾನ) : ಇಲ್ಲಿನ ಉತ್ತರ ಕುಂಡುಜ್ ಪ್ರಾಂತ್ಯದ ಪ್ರಮುಖ ಜಿಲ್ಲೆಯೊಂದನ್ನು ತಾಲಿಬಾನ್ ಉಗ್ರರು ಸೋಮವಾರ ತಮ್ಮ ವಶಕ್ಕೆ ತೆಗೆದುಕೊಂಡು ಪ್ರಾಂತೀಯ ರಾಜಧಾನಿಯನ್ನು ಸುತ್ತುವರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಮಾಮ್ ಸಾಹಿಬ್ ಜಿಲ್ಲೆಯ ಸುತ್ತಲೂ ಭಾನುವಾರ ತಡವಾಗಿ ಹೋರಾಟ ಪ್ರಾರಂಭವಾಗಿದೆ. ಸೋಮವಾರ ಮಧ್ಯಾಹ್ನದ ಹೊತ್ತಿಗೆ ತಾಲಿಬಾನ್ ಉಗ್ರರು ಜಿಲ್ಲಾ ಕೇಂದ್ರವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ವಕ್ತಾರ ಇನಾಮುದ್ದೀನ್ ರಹಮಾನಿ ಹೇಳಿದ್ದಾರೆ.
ಪೊಲೀಸರು ಮತ್ತು ಅಫ್ಘಾನ್ ರಾಷ್ಟ್ರೀಯ ಸೇನಾ ಸೈನಿಕರು ಜಂಟಿಯಾಗಿ ಜಿಲ್ಲೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಸುದೀರ್ಘ ಯುದ್ಧದಲ್ಲಿ ಅಫ್ಘಾನ್ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಪಡೆಯಲ್ಲಿ ಎಷ್ಟು ಸಾವು-ನೋವುಗಳು ಸಂಭವಿಸಿವೆ ಅಥವಾ ಎಷ್ಟು ತಾಲಿಬಾನ್ ಜನರು ಕೊಲ್ಲಲ್ಪಟ್ಟರು ಅಥವಾ ಗಾಯಗೊಂಡರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ರಹಮಾನಿ ಹೇಳಿದರು.