ಕಂದಹಾರ್(ಆಫ್ಘಾನಿಸ್ತಾನ): ಶುಕ್ರವಾರದ ಪ್ರಾರ್ಥನೆ ವೇಳೆ ದಕ್ಷಿಣ ಆಫ್ಘನ್ನ ಕಂದಹಾರ್ನಲ್ಲಿರುವ ಮಸೀದಿವೊಂದರಲ್ಲಿ ಬಾಂಬ್ ಸ್ಫೋಟಗೊಂಡಿದ್ದು, 32ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ 40ಕ್ಕೂ ಅಧಿಕ ಜನರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.
ಪ್ರಾರ್ಥನೆ ಸಲ್ಲಿಕೆ ಮಾಡ್ತಿದ್ದ ವೇಳೆ ಪ್ರಬಲ ಬಾಂಬ್ ಸ್ಫೋಟಗೊಂಡಿರುವ ಪರಿಣಾಮ ಇಷ್ಟೊಂದು ಜನರು ಸಾವನ್ನಪ್ಪಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೆ ಯಾವುದೇ ರೀತಿಯ ಉಗ್ರ ಸಂಘಟನೆಗಳು ಇದರ ಜವಾಬ್ದಾರಿ ಹೊತ್ತುಕೊಂಡಿಲ್ಲ. ಕಳೆದ ಒಂದೇ ವಾರದಲ್ಲಿ ಮಸೀದಿಯಲ್ಲಿ ಸ್ಫೋಟಗೊಂಡಿರುವ ಎರಡನೇ ಬಾಂಬ್ ಸ್ಫೋಟ ಪ್ರಕರಣ ಇದಾಗಿದೆ.
ಇದನ್ನೂ ಓದಿರಿ: ವೈದ್ಯರು-ದಾದಿಯರು ನಿಜವಾದ ಹೀರೋಗಳು, ಅವರ ಪರಿಶ್ರಮದಿಂದ ನಾವು ಸುರಕ್ಷಿತ : ಎಂ ಎಸ್ ಧೋನಿ
ಕಳೆದ ವಾರ ಮಸೀದಿಯಲ್ಲಿ ನಡೆದಿದ್ದ ಬಾಂಬ್ ಸ್ಫೋಟದಲ್ಲಿ 50ಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಾಯಗೊಂಡಿದ್ದರು. ಅಫ್ಘಾನಿಸ್ತಾನದಲ್ಲಿ ರಾಜಕೀಯ ಅರಾಜಕತೆ ಉಂಟಾಗಿದ್ದು, ಸಂಪೂರ್ಣವಾಗಿ ತಾಲಿಬಾನ್ ಆಡಳಿತ ಶುರುವಾಗಿದೆ. ಹೀಗಾಗಿ ಮೇಲಿಂದ ಮೇಲೆ ಬಾಂಬ್ ಸ್ಫೋಟದಂತಹ ಘಟನೆಗಳು ನಡೆಯುತ್ತಿವೆ.