ETV Bharat / international

ಬಾಲಕನ ಕೊಂದ ತಾಲಿಬಾನಿಗಳು...ಕ್ರೂರತೆಗೆ ಮತ್ತೊಂದು ಸಾಕ್ಷ್ಯ!

author img

By

Published : Sep 28, 2021, 1:27 PM IST

ತಾಲಿಬಾನಿ ಆಡಳಿತದಲ್ಲಿ ಕ್ರೌರ್ಯ ತನ್ನ ಪರಮಾವಧಿಯನ್ನು ಮೀರುತ್ತಿದೆ. ತಂದೆ ತಾಲಿಬಾನ್ ವಿರೋಧಿ ಪಡೆಯಲ್ಲಿ ಸೇರ್ಪಡೆಯಾಗಿದ್ದಾನೆ ಎಂದು ಶಂಕಿಸಿ, ಅಪ್ರಾಪ್ತ ಮಗನನ್ನು ಕೊಲ್ಲಲಾಗಿದೆ.

Taliban execute child after his father suspected of being member of Afghan resistance movement
ಬಾಲಕನ ನೇಣಿಗೇರಿದ ತಾಲಿಬಾನಿಗಳು..ಕ್ರೂರತೆಗೆ ಮತ್ತೊಂದು ಸಾಕ್ಷ್ಯ!

ಕಾಬೂಲ್​​​ (ಅಫ್ಘಾನಿಸ್ತಾನ) : ತಾಲಿಬಾನಿಗಳ ಕ್ರೂರತೆಗೆ ಮತ್ತೊಂದು ಸಾಕ್ಷ್ಯ ದೊರಕಿದೆ. ತಂದೆ ತಾಲಿಬಾನ್ ವಿರೋಧಿ ಪಡೆಯಲ್ಲಿ ಸೇರ್ಪಡೆಯಾಗಿದ್ದಾನೆ ಎಂದು ಶಂಕಿಸಿದ ತಾಲಿಬಾನಿಗಳು ಆತನ ಮಗನನ್ನು ಕೊಂದು ಕ್ರೂರತೆ ಮೆರೆದಿದ್ದಾರೆ.

ತಖ್ಹಾರ್​ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಪಂಜ್​ಶೀರ್ ಮತ್ತು ಅಫ್ಘಾನಿಸ್ತಾನದ ಬಗ್ಗೆ ಸ್ವತಂತ್ರವಾಗಿ ವರದಿ ಮಾಡುವ ಪಂಜ್​ಶೀರ್ ಅಬ್ಸರ್ವರ್​ ಈ ತಾಲಿಬಾನಿಗಳ ಕ್ರೂರತೆ ಬಗ್ಗೆ ಟ್ವೀಟ್​ನಲ್ಲಿ ಬೆಳಕು ಚೆಲ್ಲಿದ್ದಾರೆ.

ಬಾಲಕನೊಬ್ಬನನ್ನು ತಖ್ಹಾರ್​ ಪ್ರಾಂತ್ಯದಲ್ಲಿ ಕೊಲ್ಲಲಾಗಿದೆ. ತಂದೆ ತಾಲಿಬಾನ್ ಪ್ರತಿರೋಧ ಪಡೆಯಲ್ಲಿ ಸೇರ್ಪಡೆಯಾಗಿದ್ದಾನೆ ಎಂದು ಆರೋಪಿಸಿ ತಾಲಿಬಾನಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪಂಜ್​ಶೀರ್ ಅಬ್ಸರ್ವರ್​ ಟ್ವೀಟ್​ನಲ್ಲಿ ಹೇಳಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಅಂತಾರಾಷ್ಟ್ರೀಯ ವಿಶ್ವಾಸ ಗಳಿಸುವ ಪ್ರಯತ್ನವನ್ನು ಮಾಡುತ್ತಿತ್ತು. ಆದರೆ, ಬಾಲಕನನ್ನು ಕೊಲ್ಲುವ ಮೂಲಕ ತನ್ನ ಕ್ರೂರ ಮನಸ್ಥಿತಿಯಿಂದ ಇನ್ನೂ ತಾಲಿಬಾನಿಗಳು ಹೊರ ಬಂದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದಿನಕ್ಕೊಂದು ರೂಲ್ಸ್.. ಇನ್ಮೇಲೆ ಅಫ್ಘಾನಿಸ್ತಾನದಲ್ಲಿ ಗಡ್ಡದ ಶೇವ್​, ಟ್ರಿಮ್​ ಮಾಡುವುದು ನಿಷಿದ್ಧ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.