ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಎರಡು ಪ್ರಮುಖ ನಗರಗಳಾದ ಕಂದಹಾರ್ ಮತ್ತು ಹೆರಾತ್ ಅನ್ನೂ ವಶಪಡಿಸಿಕೊಂಡಿದೆ. ಇದರ ನಡುವೆ ಹೆರಾತ್ನ ಮಾಜಿ ಗವರ್ನರ್ ಹಾಗೂ ಅಫ್ಘನ್ನ ಹಿರಿಯ ಸೇನಾಧಿಕಾರಿಯಾಗಿರುವ ಇಸ್ಮಾಯಿಲ್ ಖಾನ್ ಅವರನ್ನು ತಾಲಿಬಾನ್ ಬಂಧಿಸಿದೆ ಎಂಬ ಊಹಾಪೋಹಗಳು ಹರಡಿವೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ಮೂರನೇ ಒಂದು ಭಾಗವೀಗ ತಾಲಿಬಾನ್ ವಶ: ಯುದ್ಧಪೀಡಿತ ದೇಶದ ಸಂಪೂರ್ಣ ಚಿತ್ರಣ ಇಲ್ಲಿದೆ..
ಒಂದು ವಾರದೊಳಗಾಗಿ ತಾಲಿಬಾನ್ ಉಗ್ರರು ದೇಶದ ಮೂರನೇ ಒಂದು ಭಾಗ ಅಂದರೆ 34ರ ಪೈಕಿ 12 ಪ್ರಾಂತೀಯ ರಾಜಧಾನಿಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ನಗರಗಳನ್ನು ಆಕ್ರಮಿಸಿಕೊಳ್ಳುವ ತಮ್ಮ ಪ್ರಕ್ರಿಯೆಯನ್ನು ಮುಂದುವರೆಸಿದ್ದು, ಅಫ್ಘನ್ ರಾಜಧಾನಿ ಕಾಬೂಲ್ ಕೂಡ ತಾಲಿಬಾನ್ ಪಾಲಾಗುವ ಸಾಧ್ಯತೆಯಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಅನೇಕ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ನಾಗರಿಕರನ್ನು ನಿರ್ದಯವಾಗಿ ತಾಲಿಬಾನ್ ಕೊಲ್ಲುತ್ತಿದೆ.
ಇದನ್ನೂ ಓದಿ: ತಾಲಿಬಾನ್ ಹಿಡಿತದ ಪ್ರದೇಶದಲ್ಲಿದ್ದ ಮೂವರು ಭಾರತೀಯ ಎಂಜಿನಿಯರ್ಗಳ ರಕ್ಷಣೆ
ಇದೀಗ ಕಾಬೂಲ್ ಆಡಳಿತದ ಕೆಲವು ಅಧಿಕಾರಿಗಳು ಹಾಗೂ ಹೆರಾತ್ನ ಮಾಜಿ ಗವರ್ನರ್ ಇಸ್ಮಾಯಿಲ್ ಖಾನ್ರನ್ನು ಬಂಧಿಸಿರುವುದಾಗಿ ಸುದ್ದಿಯಾಗುತ್ತಿದೆ. ಇಂದು ಅಥವಾ ನಾಳೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಪ್ರಸ್ತುತ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಸಂಕ್ಷಿಪ್ತವಾಗಿ ಮಾಧ್ಯಮಗಳಿಗೆ ಹೇಳುವ ನಿರೀಕ್ಷೆಯಿದೆ.