ETV Bharat / international

ಪಾಕ್​ ರಾಯಭಾರಿ ಭೇಟಿ ಮಾಡಿದ Taliban​.. ಈ ವಿಚಾರಗಳ ಕುರಿತಂತೆ ಚರ್ಚೆ - ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್

ತಾಲಿಬಾನ್ ನಿಯೋಗವು ಕತಾರ್​ನಲ್ಲಿರುವ ಪಾಕ್ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದೆ.

Taliban
Taliban
author img

By

Published : Sep 4, 2021, 10:55 AM IST

ದೋಹಾ (ಕತಾರ್): ಶೇರ್ ಮುಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜಾಯ್ ನೇತೃತ್ವದ ತಾಲಿಬಾನ್ ನಿಯೋಗವು ಶುಕ್ರವಾರ ಕತಾರ್‌ನಲ್ಲಿ ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಿದೆ. ಈ ವೇಳೆ ಆಫ್ಘನ್​ನ ಪ್ರಸ್ತುತ ಬೆಳವಣಿಗೆಗಳನ್ನು ಕುರಿತು ಚರ್ಚಿಸಲಾಗಿದೆ.

ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್, ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು, ತೋರ್ಖಾನ್​ ಸ್ಪಿನ್ ಬೋಲ್ಡಾಕ್​ನ ಜನರ ಸಂಚಾರ ಕುರಿತಂತೆ ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ.

ತಾಲಿಬಾನ್​​​ ನಿಯೋಗವು, ಕತಾರ್​ನಲ್ಲಿರುವ ಪಾಕ್​ ರಾಯಭಾರಿ ಕಚೇರಿಗೆ ಭೇಟಿ ನೀಡಿ, ಆಫ್ಘನ್​ನ ಪರಿಸ್ಥಿತಿ, ಮಾನವೀಯ ನೆರವು, ದ್ವಿಪಕ್ಷೀಯ ಸಂಬಂಧಗಳು, ಪರಸ್ಪರ ಹಿತಾಸಕ್ತಿ, ಗೌರವ, ಆಫ್ಘನ್​ ಪುನರ್​ನಿರ್ಮಾಣ ಮತ್ತು ಅಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ ಎಂದು ಶಾಹೀನ್ ಟ್ವೀಟ್ ಮಾಡಿದ್ದಾರೆ.

ಕಾಬೂಲ್​ನಲ್ಲಿ ತೀವ್ರ ಹಿಂಸಾಚಾರದಿಂದಾಗಿ ಉಂಟಾದ ನಿರಾಶ್ರಿತರ ಬಿಕ್ಕಟ್ಟಿನ ಬಳಿಕ ಈ ಸಭೆ ನಡೆಯುತ್ತಿದೆ. ಈ ವಾರದ ಆರಂಭದಲ್ಲಿ ಪಾಕಿಸ್ತಾನವು ಆಫ್ಘನ್​ನೊಂದಿಗೆ ಹಂಚಿಕೊಂಡಿರುವ ಚಮನ್​ ಗಡಿಯನ್ನು ಮುಚ್ಚಿತು. ನಾವು ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುವ ದೃಷ್ಟಿಯಿಂದ ಬೇಲಿ ಹಾಕಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶೇಖ್ ರಶೀದ್ ಹೇಳಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳ ವಿರುದ್ಧ ಪ್ರತಿರೋಧ ಮುಂದುವರಿಯುತ್ತಲೇ ಇರುತ್ತದೆ: ಸ್ವಯಂಘೋಷಿತ ಅಧ್ಯಕ್ಷ ಸಲೇಹ

ಪಾಕಿಸ್ತಾನದಲ್ಲಿ ಅಮೆರಿಕನ್ನರು ಉಳಿದಿಲ್ಲ. ಬಂದವರು ಕೂಡಲೇ ಹಿಂದಿರುಗಿದ್ದಾರೆ ಎಂದು ಸಚಿವ ಶೇಖ್ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.