ಸಿಯೋಲ್ : ಉತ್ತರ ಕೊರಿಯಾದ ತನ್ನ ರಾಯಭಾರಿ ಕಿಮ್ ಯೆಯಾನ್-ಚುಲ್ ರಾಜೀನಾಮೆಯನ್ನ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಸ್ವೀಕರಿಸಿದ್ದಾರೆ.
ಟ್ರಂಪ್ ಆಡಳಿತ ಮತ್ತು ಪ್ಯಾನ್ಯಾಂಗ್ ನಡುವಿನ ಮಾತುಕತೆಗಾಗಿ ಕಳೆದ ವರ್ಷ ಏಪ್ರಿಲ್ನಲ್ಲಿ ನೇಮಕಗೊಂಡಿದ್ದ ಕಿಮ್ ಯೆಯಾನ್-ಚುಲ್, ಉತ್ತರ ಕೊರಿಯಾ ಜೊತೆ ಒಂದೇ ಒಂದು ಸಭೆ ನಡೆಸದೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರತಿಸ್ಪರ್ಧಿಗಳ ನಡುವಿನ ಉದ್ವಿಗ್ನ ಶಮನ ಮಾಡುವ ಜವಾಬ್ದಾರಿಯಿಂದ ಹಿಂದೆ ಸರಿಯುವುದಾಗಿ ಅವರು ಹೇಳಿದ್ದಾರೆ.
ಟ್ರಂಪ್ ಆಡಳಿತದೊಂದಿಗೆ ಪರಮಾಣು ಮಾತುಕತೆ ವಿಫಲಗೊಂಡಿದ್ದಲ್ಲದೇ, ದಕ್ಷಿಣ ಕೊರಿಯಾದ ಪಟ್ಟಣದ ಮೇಲೆ ಒಪ್ಪಂದ ಉಲ್ಲಂಘಿಸಿ ಉತ್ತರ ಕೊರಿಯಾ ದಾಳಿ ಮಾಡಿದ ಬೆನ್ನಲ್ಲೇ ಕಿಮ್ ಯೆಯಾನ್-ಚುಲ್ ರಾಜೀನಾಮೆ ಸಲ್ಲಿಸಿದ್ದಾರೆ.
ದಕ್ಷಿಣ ಕೊರಿಯಾದ ಗಡಿ ಪಟ್ಟಣವಾದ ಕೈಸೊಂಗ್ನಲ್ಲಿ ಸ್ಫೋಟಕ ಬಳಸಿ ಕಟ್ಟಡಗಳ ಮೇಲೆ ಉತ್ತರ ಕೊರಿಯಾ ಮಂಗಳವಾರ ದಾಳಿ ನಡೆಸಿದೆ. ಎಲ್ಲ ಸರ್ಕಾರಿ ಮತ್ತು ಮಿಲಿಟರಿ ಸಂವಹನ ಮಾರ್ಗಗಳನ್ನು ಕಡಿತಗೊಳಿಸುವುದಾಗಿ ಮತ್ತು 2018ರ ಮಿಲಿಟರಿ ಒಪ್ಪಂದವನ್ನು ತ್ಯಜಿಸುವುದಾಗಿ ಹೇಳಿದೆ. ಉತ್ತರ ಕೊರಿಯಾದ ಈ ನಡೆ ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಾಷಿಂಗ್ಟನ್ ಮತ್ತು ಪ್ಯಾನ್ಯಾಂಗ್ ನಡುವಿನ ಪರಮಾಣು ಮಾತುಕತೆಗಳಲ್ಲಿ ಮಧ್ಯವರ್ತಿಯಾಗಿ ಮತ್ತು ಉತ್ತರ ಮುತ್ತು ದಕ್ಷಿಣ ಕೊರಿಯಾ ಮಧ್ಯೆ ಕ್ಷೀಣಿಸುತ್ತಿರುವ ಸಂಬಂಧವನ್ನು ಬಲ ಪಡಿಸಲು ಕಿಮ್ ಬದಲಾಗಿ ಮೂನ್ ಯಾರು ನೇಮಿಸುತ್ತಾರೆ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.