ಬೀಜಿಂಗ್: ಕೊರೊನಾ ವೈರಸ್ ಸೋಂಕು ತಗುಲಿ ಲೀವರ್ಗೆ ಹಾನಿಯಾಗಿದ್ದ ಚೀನಾ ವೈದ್ಯರಿಬ್ಬರ ಚರ್ಮ ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಚೀನಾ ಮಾಧ್ಯಮಗಳಲ್ಲಿ ವರದಿಯಾಗಿದೆ. ಜನವರಿಯಲ್ಲಿ ವುಹಾನ್ನ ಸೆಂಟ್ರಲ್ ಹಾಸ್ಪಿಟಲ್ನಲ್ಲಿ ರೋಗಿಗಳ ಚಿಕಿತ್ಸೆಯಲ್ಲಿ ನಿರತ ಡಾ. ಯಿ ಫಾನ್ ಹಾಗೂ ಡಾ. ಹು ವೆಲ್ಫೆಂಗ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಇವರಿಬ್ಬರ ಚರ್ಮ ಈಗ ಕಪ್ಪು ಬಣ್ಣಕ್ಕೆ ತಿರುಗಿದೆ.
ವುಹಾನ್ನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಬಗ್ಗೆ ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಡಾ. ಲಿ ವೆನ್ಲಿಯಾಂಗ್ ಎಂಬ ವೈದ್ಯರು ತಿಳಿಸಿದ್ದರು ಹಾಗೂ ತದನಂತರ ಕೆಲವೇ ದಿನಗಳಲ್ಲಿ ಇವರು ಸಂಶಯಾಸ್ಪದವಾಗಿ ಮೃತಪಟ್ಟಿದ್ದರು. ಈಗ ಕೊರೊನಾ ತಗುಲಿ ಚರ್ಮ ಕಪ್ಪಾಗಿರುವ ವೈದ್ಯರಿಬ್ಬರೂ ಮೃತ ಡಾ. ಲಿ ವೆನ್ಲಿಯಾಂಗ್ ಅವರ ಸಹೋದ್ಯೋಗಿಗಳು ಎಂಬುದು ಗಮನಾರ್ಹ.
ಕೊರೊನಾ ವೈರಸ್ನಿಂದ ಇಬ್ಬರೂ ವೈದ್ಯರ ಲೀವರ್ ಹಾಳಾಗಿದ್ದು, ಅದೇ ಕಾರಣದಿಂದ ಹಾರ್ಮೋನ್ಗಳ ವೈಪರೀತ್ಯ ಉಂಟಾಗಿ ಚರ್ಮ ಕಪ್ಪಾಗಿದೆ ಎಂದು ಇವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಚೀನಾದ ಸಿಸಿಟಿವಿ ಮಾಧ್ಯಮಕ್ಕೆ ತಿಳಿಸಿದ್ದಾರೆ.