ETV Bharat / international

ಇಂದು ಅಫ್ಘಾನಿಸ್ತಾನದ 102ನೇ ಸ್ವಾತಂತ್ರ್ಯ ದಿನ: ಧ್ವಜ ಹಿಡಿದು ಬಂದವರ ಗುಂಡಿಕ್ಕಿ ಕೊಂದ ತಾಲಿಬಾನ್​​ - ತಾಲಿಬಾನ್​​

102ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ರಾಷ್ಟ್ರ ಧ್ವಜ ಹಿಡಿದು ರಸ್ತೆಗಿಳಿದ ಜನರನ್ನು ತಾಲಿಬಾನ್​ ಉಗ್ರರು ಗುಂಡಿಟ್ಟು ಕೊಂದಿರುವುದಾಗಿ ಮೂಲಗಳು ತಿಳಿಸಿವೆ.

Several killed in Taliban firing in Afghanistan
ತಾಲಿಬಾನ್​​
author img

By

Published : Aug 19, 2021, 4:54 PM IST

Updated : Aug 19, 2021, 5:13 PM IST

ಕಾಬೂಲ್​ (ಅಫ್ಘಾನಿಸ್ತಾನ): ತಾಲಿಬಾನ್​ ಉಗ್ರರ ಪಾಲಾಗದೇ ಇದ್ದಿದ್ದರೆ ಇಂದು ಅಫ್ಘಾನಿಸ್ತಾನ ತನ್ನ 102ನೇ ಸ್ವಾತಂತ್ರ್ಯ ದಿನವನ್ನ ಸಂಭ್ರಮದಿಂದ ಆಚರಿಸುತ್ತಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಹದಗೆಟ್ಟಿದೆ.ಇಡೀ ದೇಶವನ್ನೇ ತಾಲಿಬಾನ್​ ವಶಪಡಿಸಿಕೊಂಡಿದೆ. ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪಲಾಯನ ಮಾಡುತ್ತಿದ್ದಾರೆ. ಇದರ ನಡುವೆಯೂ ಧ್ವಜ ಹಿಡಿದು ಬಂದ ಜನರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.

  • Afghans braving Taliban violence to mark Independence Day in #Afghanistan

    Reports of Taliban firing into crowds, beating people who are marching and waving national flags

    In many places, Taliban have replaced Afghanistan's black, red, and green flags with their own white flags. pic.twitter.com/aMISVmK1K1

    — Frud Bezhan فرود بيژن (@FrudBezhan) August 19, 2021 " class="align-text-top noRightClick twitterSection" data=" ">

ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದ ರಾಜಧಾನಿ ಅಸದಾಬಾದ್​ನಲ್ಲಿ ನೂರಾರು ಜನರು 102ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ರಾಷ್ಟ್ರ ಧ್ವಜ ಹಿಡಿದು ರ‍್ಯಾಲಿ ಮಾಡುತ್ತಿದ್ದರು. ಅಲ್ಲದೇ ನಂಗರ್‌ಹಾರ್ ಪ್ರಾಂತ್ಯದ ರಾಜಧಾನಿಯಾದ ಜಲಾಲಾಬಾದ್‌ನಲ್ಲಿ ತಾಲಿಬಾನ್​ ವಿರುದ್ಧ ಕೆಲವರು ಪ್ರತಿಭಟನೆ ಮಾಡುತ್ತಿದ್ದರು. ಆದರೆ, ಕ್ರೂರಿ ಉಗ್ರರು ಇವರ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಈ ವೇಳೆ ಹಲವರು ಮೃತಪಟ್ಟಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • Here it goes again :(

    Several people killed Thursday in the Afghan city of #Asadabad when #Taliban fighters fired on people waving the national flag at an Independence Day rally, a witness said, a day after three people were killed in a similar protest https://t.co/AWl5bxIuDh

    — Randa HABIB (@RandaHabib) August 19, 2021 " class="align-text-top noRightClick twitterSection" data=" ">

ಇದನ್ನೂ ಓದಿ: ತಾಲಿಬಾನರ ಮೈ ಮೇಲೆ ಅಮೆರಿಕಾ ಸೇನೆಯ ಸಮವಸ್ತ್ರ..​ಕೈಯಲ್ಲಿ ಶಸ್ತ್ರಾಸ್ತ್ರ: ವಿಶ್ವದ ದೊಡ್ಡಣ್ಣನಿಗೆ ಮುಜುಗರ

ಪ್ರಜೆಗಳಿಗೆ ಸ್ವತಂತ್ರ ದಿನ ಆಚರಿಸಲು ಬಿಡದ ತಾಲಿಬಾನ್ ಉಗ್ರರು ಮಾತ್ರ 'ವಿಶ್ವದ ಅಹ೦ಕಾರದ ಶಕ್ತಿ' (ಅಮೆರಿಕ) ಎಂದು ಘೋಷಿಸಿಕೊಂಡು ಸ್ವಾತಂತ್ರ್ಯ ದಿನ ಆಚರಿಸಿದ್ದಾರೆ. ತಾಲಿಬಾನ್​ - ಅಮೆರಿಕ​ ಒಪ್ಪಂದದಂತೆ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸಂಪೂರ್ಣ ಸೇನೆಯನ್ನು ವಾಪಸ್​ ಕರೆಯಿಸಿಕೊಂಡಿತ್ತು. ಇದರ ಬೆನ್ನಲ್ಲೇ ತಾಲಿಬಾನ್​ ಅಟ್ಟಹಾಸ ಮೆರೆದು ಅಫ್ಘಾನಿಸ್ತಾನವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

Last Updated : Aug 19, 2021, 5:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.