ಟಿಯಾಂಜಿನ್ (ಚೀನಾ): ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿ ಚೀನಾಗೆ ಆಗಮಿಸಿದ್ದು, ಚೀನಾದ ವಿದೇಶಾಂಗ ಸಚಿವಾಲಯದ ಇಬ್ಬರು ಉನ್ನತ ಅಧಿಕಾರಿಗಳೊಂದಿಗೆ ಉಭಯ ದೇಶಗಳ ನಡುವಿನ ಸಂಬಂಧದ ಕುರಿತು ಚರ್ಚಿಸಲಿದ್ದಾರೆ. ರಾಜ್ಯ ಉಪ ಕಾರ್ಯದರ್ಶಿ ವೆಂಡಿ ಶೆರ್ಮನ್ ಟಿಯಾಂಜಿನ್ ನಗರದ ರೆಸಾರ್ಟ್ ಹೋಟೆಲ್‌ನಲ್ಲಿ ಚೀನಾ ಸಂಬಂಧಗಳ ಉಸ್ತುವಾರಿ ವಹಿಸಿರುವ ಉಪ ವಿದೇಶಾಂಗ ಸಚಿವ ಕ್ಸಿ ಫೆಂಗ್ ಮತ್ತು ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ.
ಆರು ತಿಂಗಳ ಹಿಂದೆ ಅಧ್ಯಕ್ಷ ಜೋ ಬೈಡನ್ ಅಧಿಕಾರ ವಹಿಸಿಕೊಂಡ ನಂತರ ಚೀನಾಕ್ಕೆ ಭೇಟಿ ನೀಡಲಿರುವ ಅಮೆರಿಕದ ಮೊದಲ ಅಧಿಕಾರಿ ವೆಂಡಿ ಶೆರ್ಮನ್ ಆಗಿದ್ದಾರೆ.
ಈ ಹಿಂದೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರದ ಸಮಯದಲ್ಲಿ ಯುಎಸ್ ಹಾಗೂ ಚೀನಾ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು. ತಂತ್ರಜ್ಞಾನ, ಸೈಬರ್ ಸುರಕ್ಷತೆ, ಮಾನವ ಹಕ್ಕುಗಳು ಮತ್ತು ಇತರ ವಿಷಯಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಎರಡು ದೇಶಗಳ ನಡುವೆ ತೀವ್ರ ಭಿನ್ನಾಭಿಪ್ರಾಯವಿದೆ.