ಸಿಯೋಲ್(ಕೊರಿಯಾ): ದಕ್ಷಿಣ ಕೊರಿಯಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಏರಿಕೆ ಕಾಣುತ್ತಿದೆ. ಇಂದು 6,00,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೋವಿಡ್ ನಿರ್ಬಂಧಗಳನ್ನು ಸರಾಗಗೊಳಿಸಿದ್ದು ಒಮಿಕ್ರಾನ್ ಹೆಚ್ಚಳಕ್ಕೆ ಕಾರಣವಾಗಿದೆ.
ವಿದೇಶದಿಂದ ಬಂದವರ 62 ಪ್ರಕರಣಗಳು ಸೇರಿ ದೇಶದಲ್ಲಿ 6,21,328 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ದಾಖಲೆಯ ಮಟ್ಟದಲ್ಲಿ ಪ್ರಕರಣಗಳು ಸಂಖ್ಯೆ ಏರಿದ್ದು, ಈ ಮೂಲಕ ಒಟ್ಟು ಕೇಸ್ಗಳ ಸಂಖ್ಯೆ 82,50,592ಕ್ಕೆ ತಲುಪಿದೆ.
ದೇಶವು 6,21,328 ಹೊಸ ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ, ಇದರಲ್ಲಿ ವಿದೇಶದಿಂದ 62 ಪ್ರಕರಣಗಳು ಸೇರಿವೆ, ಒಟ್ಟು 82,50,592 ಕ್ಕೆ ಏರಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಏಜೆನ್ಸಿ (ಕೆಡಿಸಿಎ) ವರದಿ ಬಿಡುಗಡೆ ಮಾಡಿದೆ ಎಂದು ಅಂಕಿ - ಅಂಶಗಳನ್ನು ಉಲ್ಲೇಖಿಸಿ ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಖೇರ್ಸನ್ ವಿಮಾನ ನಿಲ್ದಾಣದ ಮೇಲೆ ಉಕ್ರೇನಿಯನ್ ಪಡೆಗಳ ದಾಳಿ: ಎರಡೂ ಪಡೆಗಳ ನಡುವೆ ಭೀಕರ ಕಾಳಗ
ಕೋವಿಡ್ನಿಂದ 429 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 11,481ಕ್ಕೆ ತಲುಪಿದೆ. ಸಾವಿನ ಪ್ರಮಾಣವು ಶೇಕಡ 0.14 ರಷ್ಟಿದೆ. 1,159 ಮಂದಿ ತಿವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ.