ಮಾಸ್ಕೋ: ಎರಡನೇ ಮಹಾಯುದ್ಧದ ಇತಿಹಾಸವನ್ನೇ ಯುಎಸ್ ಕಡೆಗಣನೆ ಮಾಡಿದೆ. ಜರ್ಮನಿಯಲ್ಲಿ ನಾಜಿಸಂ ಅನ್ನು ಸೋಲಿಸುವಲ್ಲಿ ಸೋವಿಯತ್ ಒಕ್ಕೂಟದ ಪಾತ್ರವನ್ನು ಸಹಾ ನಿಕೃಷ್ಟ ಮಾಡಿದೆ ಎಂದು ರಷ್ಯಾ ಆರೋಪಿಸಿದೆ.
ನಾಜಿಸಂನ ಸೋಲಿನ ಫಲಿತಾಂಶಗಳು ಮತ್ತು ವಿಶ್ವಯುದ್ಧಕ್ಕೆ ದೇಶದ ನಿರ್ಣಾಯಕ ಕೊಡುಗೆಯನ್ನು ಅಲ್ಲಗಳೆದಿರುವ ಪ್ರಯತ್ನಕ್ಕೆ ನಾವು ಕೋಪಗೊಂಡಿದ್ದೇವೆ, ಎಂದು ಸಚಿವಾಲಯ ತಿಳಿಸಿದೆ.
ಅಮೆರಿಕ ಮತ್ತು ಬ್ರಿಟನ್ ಮಾತ್ರ ಜರ್ಮನ್ನ ನಾಜಿಗಳ ವಿರುದ್ಧ ಗೆದ್ದವರು ಎಂದು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ಶ್ವೇತಭವನವು ಪೋಸ್ಟ್ ಮಾಡಿತ್ತು. ಇದನ್ನ ಅಲ್ಲಗಳೆದಿರುವ ರಷ್ಯಾ, ಆ ಪೋಸ್ಟ್ ನಿರ್ಲಕ್ಷಿಸಲು ಸಾಧ್ಯವಿಲ್ಲವೆಂದು ಸೋವಿಯತ್ ಒಕ್ಕೂಟದ ಸಚಿವಾಲಯ ಹೇಳಿದೆ.
ಮಾನವೀಯತೆಯ ಹೆಸರಿನಲ್ಲಿ ಕೆಂಪು ಸೇನೆ ಮತ್ತು ಸೋವಿಯತ್ ಜನರು ಅನುಭವಿಸಿದ ಸಾವಿನ ಸಂಖ್ಯೆ ಮತ್ತು ನೋವು ಹೆಚ್ಚು. ಆದರೆ ಯುಎಸ್ ಅಧಿಕಾರಿಗಳಿಗೆ ಈ ಯುದ್ಧದಲ್ಲಿ ಮರಣ ಹೊಂದಿದ ಸೇನಾನಿಗಳಿಗೆ ಗೌರವ ಸಲ್ಲಿಸುವ ಧೈರ್ಯ ಅಥವಾ ಮನಸ್ಸು ಇರಲಿಲ್ಲ, ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಏಪ್ರಿಲ್ 25 ರಂದು ರಷ್ಯಾ ಮತ್ತು ಯುಎಸ್ ಸೈನಿಕರ ಸಭೆಯ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆ ಅವರ ಭಿನ್ನ ವರ್ತನೆಯನ್ನು ಸ್ಪಷ್ಟವಾಗಿ ತೋರಿಸಿದೆ. ಮಾಸ್ಕೋ, ಯುಎಸ್ ಅಧಿಕಾರಿಗಳೊಂದಿಗೆ ಈ ವಿಷಯದ ಬಗ್ಗೆ ಗಂಭೀರ ಸಮಾಲೋಚನೆ ನಡೆಸಲು ಪ್ರಯತ್ನಿಸುತ್ತಿದೆ ಎಂದು ಸಚಿವಾಲಯದ ಹೇಳಿದೆ
ಆದಾಗ್ಯೂ, ಕೊರೊನಾ ಸಾಂಕ್ರಾಮಿಕ ಹೋರಾಟಕ್ಕೆ ಹೇರಿದ ನಿರ್ಬಂಧಗಳ ನಡುವೆಯೂ 1941 - 1945ರಲ್ಲಿ ನಡೆದ ಮಹಾ ಯುದ್ಧದಲ್ಲಿ ಸೋವಿಯತ್ ಒಕ್ಕೂಟದ ಜರ್ಮನಿಯ ನಾಜಿ ಪಕ್ಷದ ವಿರುದ್ಧದ ವಿಜಯದ 75 ನೇ ವಾರ್ಷಿಕೋತ್ಸವವನ್ನು ಶನಿವಾರ ಆಚರಿಸಿತು.