ETV Bharat / international

ಚೀನಾದಲ್ಲಿ ಮಹಾಮಾರಿ ಕೊರೊನಾ ಭೀತಿ... ಮಕ್ಕಳಿಗೆ ಜನ್ಮ ನೀಡಲು ಭಯಪಡ್ತಿದ್ದಾರೆ ಮಹಿಳೆಯರು! - ಗರ್ಭಿಣಿ ಮಹಿಳೆಯರು ಕೊರೊನಾ

ದೇಶ ವಿದೇಶಗಳಿಗೆ ಭೀತಿ ಹುಟ್ಟಿಸಿರುವ ಚೀನಾದ ಡೆಡ್ಲಿ ಕೊರೊನಾ ವೈರಸ್​​ ಇದೀಗ ಗರ್ಭಿಣಿಯರಲ್ಲೂ ಭೀತಿ ಹುಟ್ಟಿಸಿದ್ದು, ಚೀನಾದಲ್ಲಿ ಆಸ್ಪತ್ರೆಗೆ ತೆರಳಲು ಅವರು ಹಿಂದೇಟು ಹಾಕುತ್ತಿದ್ದಾರೆ.

Pregnant women scared to give birth
Pregnant women scared to give birth
author img

By

Published : Mar 7, 2020, 9:00 AM IST

ಬೀಜಿಂಗ್​​: ಮಹಾಮಾರಿ ಕೊರೊನಾ ವೈರಸ್​ಗೆ ಡ್ರ್ಯಾಗನ್​ ದೇಶ ಚೀನಾ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಈಗಾಗಲೇ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಅಲ್ಲಿನ ಗರ್ಭಿಣಿಯರು ಮಕ್ಕಳಿಗೆ ಜನ್ಮ ನೀಡಲು ಹಿಂದೇಟು ಹಾಕ್ತಿದ್ದಾರೆ.

ಕೊರೊನಾ ವೈರಸ್​ ಹರಡುವ ದೃಷ್ಟಿಯಿಂದ ಆಸ್ಪತ್ರೆಯೊಳಗೆ ಹೋಗಲು ಬೇರೆ ಯಾರಿಗೂ ಅವಕಾಶ ನೀಡದ ಕಾರಣ, ಅಲ್ಲಿ ದಾಖಲಾಗುತ್ತಿರುವ ಗರ್ಭಿಣಿಯರು ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಜನ್ಮ ನೀಡುವ ಗರ್ಭಿಣಿಯರನ್ನ ಭೇಟಿ ಮಾಡಲು ಅವರ ಕುಟುಂಬಸ್ಥರಿಗೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಅವರಿಗೆ ತೊಂದರೆಯಾಗುತ್ತಿದ್ದು, ಮಕ್ಕಳಿಗೆ ಜನ್ಮ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಕೆಲ ಗರ್ಭಿಣಿ ಮಹಿಳೆಯರು ಕೊರೊನಾ ವೈರಸ್​ ಹರಡುವ ಭೀತಿಯಿಂದ ಆಸ್ಪತ್ರೆಗೆ ತಪಾಸಣೆ ಮಾಡಿಸಿಕೊಳ್ಳಲು ಹೋಗುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಬಂದರೂ ಕೂಡ ಒಬ್ಬರೇ ಹೋಗುತ್ತಿದ್ದಾರೆ. ಚೀನಾದಲ್ಲಿ ಈಗಾಗಲೇ 80 ಸಾವಿರಕ್ಕೂ ಅಧಿಕ ಜನರು ವೈರಸ್​ನಿಂದ ತೊಂದರೆಗೊಳಗಾಗಿದ್ದು, ಈಗಾಗಲೇ 2,900 ಮಂದಿ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.