ETV Bharat / international

ಮುಂದಿನ 4 ತಿಂಗಳಲ್ಲಿ ಅಫ್ಘಾನಿಸ್ತಾನದಿಂದ 5 ಲಕ್ಷ ಮಂದಿ ವಲಸೆ ಸಾಧ್ಯತೆ: UNHCR

author img

By

Published : Aug 29, 2021, 11:18 AM IST

ಮುಂದಿನ 4 ತಿಂಗಳಲ್ಲಿ ಅಫ್ಘಾನ್‌ನಿಂದ ಸುಮಾರು 5 ಲಕ್ಷ ಜನರು ದೇಶವನ್ನು ತೊರೆಯುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ-ಕಮಿಷನರ್ ಕೆಲ್ಲಿ ಟಿ ಕ್ಲೆಮೆಂಟ್ಸ್ ತಿಳಿಸಿದ್ದಾರೆ.

UNHCR
ವಿಶ್ವಸಂಸ್ಥೆ

ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್​ನಿಂದಾಗಿ ಅಫ್ಘಾನಿಸ್ತಾನದಲ್ಲಿ ಸರ್ಕಾರ ಉರುಳಿ ಅರಾಜಕತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ 4 ತಿಂಗಳಲ್ಲಿ ಅಲ್ಲಿಂದ ಸುಮಾರು 5 ಲಕ್ಷ ಜನರು ದೇಶವನ್ನು ತೊರೆಯುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ-ಕಮಿಷನರ್ (United Nations High Commissioner for Refugees) ವರದಿಯಲ್ಲಿ ತಿಳಿಸಿದ್ದಾರೆ.

ಸದ್ಯಕ್ಕೆ ಅಫ್ಘಾನ್‌ ಜನರು ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುತ್ತಿಲ್ಲವಾದರೂ, ಅಲ್ಲಿನ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಮಂದಿ ಹೊರ ಹೋಗುವಂತೆ ಮಾಡಲಿದೆ ಎಂದು ಡೆಪ್ಯುಟಿ ಹೈ ಕಮಿಷನರ್ ಕೆಲ್ಲಿ ಟಿ ಕ್ಲೆಮೆಂಟ್ಸ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ನೆರೆಯ ರಾಷ್ಟ್ರಗಳು ತಮ್ಮ ಗಡಿಗಳನ್ನು ಅಫ್ಘಾನ್ ನಿರಾಶ್ರಿತರಿಗೆ ಮುಕ್ತವಾಗಿಡುವಂತೆ ಯುಎನ್‌ಎಚ್‌ಸಿಆರ್ ಕೇಳಿಕೊಂಡಿದೆ. ಈ ಮಧ್ಯೆ ವಿಶ್ವ ಆಹಾರ ಕಾರ್ಯಕ್ರಮವು (ಡಬ್ಲ್ಯುಎಫ್‌ಪಿ) ನಿರಾಶ್ರಿತ ಅಫ್ಘಾನ್ನರಿಗೆ ಆಹಾರ ಒದಗಿಸಲು ವಿಶ್ವಸಂಸ್ಥೆಯ ಬಳಿ ಮನವಿ ಮಾಡಿದೆ.

ಅಫ್ಘಾನ್ನರ ಪ್ರಕಾರ, ರಾಜಕೀಯ ಅನಿಶ್ಚಿತತೆ, ನಿರುದ್ಯೋಗ ಮತ್ತು ಭದ್ರತಾ ಸಮಸ್ಯೆಗಳು ದೇಶವನ್ನು ತೊರೆಯುವಂತೆ ಮಾಡಿದೆ. ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ದೇಶವನ್ನು ತೊರೆಯುವ ನಿರೀಕ್ಷೆಯಲ್ಲಿ ಕಾಯುತ್ತಿರುವ ಸಾವಿರಾರು ಕುಟುಂಬಗಳಲ್ಲಿ ಹಬೀಬುಲ್ಲಾ ಎಂಬುವರ ಕುಟುಂಬವೂ ಒಂದು. ನಾನು ವಿದೇಶಿಯರೊಂದಿಗೆ ನಾಲ್ಕು ವರ್ಷ ಕೆಲಸ ಮಾಡಿದ್ದೆ. ಆದರೆ ಈಗ ನಾನು ನಿರುದ್ಯೋಗಿಯಾಗಿದ್ದೇನೆ. ವಿದೇಶಿಗರೊಂದಿಗೆ ಕೆಲಸ ಮಾಡಿದ ಜನರ ಮನೆಗಳನ್ನು ತಾಲಿಬಾನ್​ಗಳು ಹುಡುಕುತ್ತಿದ್ದಾರೆ. ಬಳಿಕ ಅವರನ್ನು ಕೊಲ್ಲುತ್ತಿದ್ದಾರೆ ಎಂಬ ವದಂತಿಗಳನ್ನು ನಾನು ಕೇಳಿದ್ದೇನೆ. ಹೀಗಾಗಿ ನಾನು ದೇಶವನ್ನು ತೊರೆಯಬೇಕಾಗಿದೆ ಎಂದು ಹಬಿಬುಲ್ಲಾ ಹೇಳಿದರು.

ನಿರುದ್ಯೋಗ ಮತ್ತು ಭದ್ರತಾ ಸಮಸ್ಯೆಗಳು ನಮ್ಮ ಜೀವಗಳನ್ನು ಉಳಿಸಿಕೊಳ್ಳಲು ದೇಶವನ್ನು ತೊರೆಯುವಂತೆ ಮಾಡಿದೆ ಎಂದು ಹಬೀಬುಲ್ಲಾ ಅವರ ಪುತ್ರ ಎಜತುಲ್ಲಾ ವಿವರಿಸಿದರು.

ಇದನ್ನೂ ಓದಿ: ಪ್ಯಾರಾಲಿಂಪಿಕ್​ನಲ್ಲಿ ಇಬ್ಬರು ಅಫ್ಘನ್​ ಕ್ರೀಡಾಪಟುಗಳು ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.