ಬ್ಯಾಂಕಾಕ್(ಥಾಯ್ಲೆಂಡ್): ಮೂರು ದಿನಗಳ ಕಾಲ ಥಾಯ್ಲೆಂಡ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಬ್ಯಾಂಕಾಕ್ನಲ್ಲಿ ಭಾರತೀಯ ಸಮುದಾಯ ಆಯೋಜಿಸಿರುವ ‘ಸಾವಸ್ಡೀ ಪಿಎಂ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
-
#WATCH Thailand: PM Modi at #SawasdeePMModi event in Bangkok says, "We (India & Thailand) are very close to each other not only on the basis of language but also the sentiments. You told me 'Sawasdee Modi', this has connection with the Sanskrit word 'Swasti' which means welfare" pic.twitter.com/ld5zmZusOC
— ANI (@ANI) November 2, 2019 " class="align-text-top noRightClick twitterSection" data="
">#WATCH Thailand: PM Modi at #SawasdeePMModi event in Bangkok says, "We (India & Thailand) are very close to each other not only on the basis of language but also the sentiments. You told me 'Sawasdee Modi', this has connection with the Sanskrit word 'Swasti' which means welfare" pic.twitter.com/ld5zmZusOC
— ANI (@ANI) November 2, 2019#WATCH Thailand: PM Modi at #SawasdeePMModi event in Bangkok says, "We (India & Thailand) are very close to each other not only on the basis of language but also the sentiments. You told me 'Sawasdee Modi', this has connection with the Sanskrit word 'Swasti' which means welfare" pic.twitter.com/ld5zmZusOC
— ANI (@ANI) November 2, 2019
ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಅವರು, ಈ ಸಮಾರಂಭದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲು ನಾನು ಥಾಯ್ಲೆಂಡ್ಗೆ ಬಂದಿದ್ದೇನೆ. ಆದರೆ ನಾನು ವಿದೇಶದಲ್ಲಿದ್ದೇನೆ ಎಂದು ನನಗೆ ಅನಿಸುವುದಿಲ್ಲ. ಇಲ್ಲಿನ ಪರಿಸರ, ನಿಮ್ಮ ಉಡುಗೆಯನ್ನ ನೋಡಿದರೆ ನಾನು ನನ್ನ ಮನೆ, ಭಾರತದಲ್ಲೇ ಇದ್ದೇನೆ ಎಂದು ಅನಿಸುತ್ತಿದೆ ಎಂದಿದ್ದಾರೆ.
ಭಾರತ, ಥಾಯ್ಲೆಂಡ್ ರಾಜಮನೆತನದ ಸಂಬಂಧ ಐತಿಹಾಸಿಕ ಸಂಬಂಧವನ್ನ ಸಂಕೇತಿಸುತ್ತದೆ. ರಾಜಕುಮಾರಿ ಮಹಾ ಚಕ್ರಿ ಸಿರಿಂಧೋರ್ನ್ ಸಂಸ್ಕೃತ ಭಾಷೆಯಲ್ಲಿ ಪರಿಣಿತಿ ಹೊಂದಿದ್ದಾರೆ. ಅಲ್ಲದೆ ನಮ್ಮ ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿದ್ದಾರೆ.
-
#WATCH Thailand: People attending #SawasdeePMModi event in Bangkok, give standing ovation to Prime Minister Narendra Modi as he speaks about abrogation of Article 370 in Jammu & Kashmir. pic.twitter.com/B4izex8EkI
— ANI (@ANI) November 2, 2019 " class="align-text-top noRightClick twitterSection" data="
">#WATCH Thailand: People attending #SawasdeePMModi event in Bangkok, give standing ovation to Prime Minister Narendra Modi as he speaks about abrogation of Article 370 in Jammu & Kashmir. pic.twitter.com/B4izex8EkI
— ANI (@ANI) November 2, 2019#WATCH Thailand: People attending #SawasdeePMModi event in Bangkok, give standing ovation to Prime Minister Narendra Modi as he speaks about abrogation of Article 370 in Jammu & Kashmir. pic.twitter.com/B4izex8EkI
— ANI (@ANI) November 2, 2019
ಭಾರತ ಮತ್ತು ಥಾಯ್ಲೆಂಡ್ ನಡುವಿನ ಉತ್ತಮ ಸಂಬಂಧಕ್ಕೆ ಯಾವುದೇ ನಿರ್ದಿಷ್ಟ ಸರ್ಕಾರ ಕಾರಣವಲ್ಲ. ಈ ಸಂಬಂಧಕ್ಕಾಗಿ ಯಾವುದೇ ಒಂದು ಸರ್ಕಾರಕ್ಕೆ ಮನ್ನಣೆ ನೀಡಲಾಗುವುದಿಲ್ಲ. ಹಿಂದೆ ಎರಡು ದೇಶಗಳ ನಡುವೆ ಹಂಚಿಕೊಂಡ ಪ್ರತಿಯೊಂದು ಕ್ಷಣವೂ ಈ ಸಂಬಂಧವನ್ನ ಬಲಪಡಿಸಿದೆ ಎಂದಿದ್ದಾರೆ.
ನಾವು ಕೇವಲ ಭಾಷೆಯ ಆಧಾರದ ಮೇಲೆ ಮಾತ್ರವಲ್ಲ ಭಾವನೆ ವಿಚಾರದಕಲ್ಲೂ ಪರಸ್ಪರ ಹತ್ತಿರವಾಗಿದ್ದೇವೆ. ನೀವು 'ಸಾವಸ್ಡೀ ಮೋದಿ' ಎಂದು ಹೇಳಿದ್ದೀರಿ, ‘ಸಾವಸ್ಡೀ’ ಎಂದರೆ ಸಂಸ್ಕೃತದಲ್ಲಿ 'ಸ್ವಸ್ತಿ' ಎನ್ನಲಾಗುತ್ತೆ. ಸ್ವಸ್ತಿ ಎಂದರೆ ‘ಕಲ್ಯಾಣ’ ಎಂಬ ಅರ್ಥ ಬರುತ್ತದೆ ಎಂದಿದ್ದಾರೆ.