ಜಿನಿವಾ: ಪುಲ್ವಾಮಾ ದಾಳಿ ನಂತರ ವಿಶ್ವದೆದರು ಪಾಕ್ ಮಾನ ಕಳೆದಿದ್ದ ಭಾರತ, ಮತ್ತೊಮ್ಮೆ ಪಾಕ್ ಅನ್ನು ಬೆತ್ತಲುಗೊಳಿಸಿದೆ.
ಜಿನಿವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕೌನ್ಸಿಲ್ (ಯುಎನ್ ಹೆಚ್ಆರ್ಸಿ) ಸಭೆಯಲ್ಲಿ ಪಾಕ್, ಭಾರತದ ಗಡಿಯೊಳಗೆ ನಡೆಸುತ್ತಿರುವ ವಿಕೃತಿಗಳನ್ನು ಜಗತ್ತಿನ ಎದುರು ಬಿಚ್ಚಿಟ್ಟಿದೆ.
ಯುಎನ್ ಹೆಚ್ಆರ್ಸಿಯ 40ನೇ ಅಧಿವೇಶನದಲ್ಲಿ ಮಾತನಾಡಿದ ಭಾರತದ ಶಾಶ್ವತ ಅಭಿಯಾನದ ಮೊದಲ ಕಾರ್ಯದರ್ಶಿ ಮಿನಿ ಕುಮಾಮ್, ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗನ್ನು ಪಾಕ್ ಆಕ್ರಮಿಸಿದ್ದು, ಅದರ ಸೇನೆಯ ಕಿರುಕುಳದಿಂದ ಜನರು ನರಳುತ್ತಿದ್ದಾರೆ ಎಂದು ಹೇಳಿದರು.
ಕಾಶ್ಮೀರದಲ್ಲಿನ ಅಲ್ಪಸಂಖ್ಯಾತರ ಮೇಲೆ ಹಾಗೂ ಬಲೂಚಿಸ್ತಾನ್, ಸಿಂಧ್ ಹಾಗೂ ಖೈಬರ್ ಪಖ್ತುಂಖ್ವ ಜನರ ಮೇಲೂ ಪಾಕ್ ದೌರ್ಜನ್ಯ ಎಸಗುತ್ತಿದೆ ಎಂದರು.
ವಿಶ್ವದ ವೇದಿಕೆಗಳಲ್ಲಿ ಭಾರತದ ವಿರುದ್ಧ ಸುಳ್ಳು ಪ್ರಚಾರಗಳನ್ನು ಮಾಡುತ್ತಿದೆ. ಅಂತರಾಷ್ಟ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಅಂಗ. ತನ್ನ ನೆಲದಲ್ಲಿ ಉಗ್ರ ನಿಗ್ರಹ ಕಾರ್ಯ ಮಾಡದೆ, ಅಂತರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆ ಎಂದೂ ಆರೋಪಿಸಿದರು. ಪಾಕ್, ಉಗ್ರರಿಗೆ ಆಶ್ರಯ ನೀಡುತ್ತಾ, ಭಾರತೀಯರ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಕುಟುಕಿದರು.