ETV Bharat / international

ಪೆಗಾಸಸ್ ವಿವಾದ: ಕಣ್ಗಾವಲು ಪಟ್ಟಿಯಲ್ಲಿತ್ತಂತೆ ಪಾಕ್​ ಪ್ರಧಾನಿ ಇಮ್ರಾನ್ ಖಾನ್​​ ನಂಬರ್​

ಪೆಗಾಸಸ್​​​ ಸ್ಪೈವೇರ್ ಭಾರತೀಯ ಪ್ರಮುಖರ ಕಣ್ಗಾವಲು ಮಾಡಲಾಗಿದೆ ಎಂಬ ಆರೋಪದ ಬೆನ್ನಲ್ಲೆ ಪಾಕ್ ಪ್ರಧಾನಿ ಇಮ್ರಾನ್​ ಖಾನ್ ಒಮ್ಮೆ ಬಳಸಿದ್ದ ಮೊಬೈಲ್ ನಂಬರ್ ಸಹ ಈ ಪಟ್ಟಿಯಲ್ಲಿತ್ತು ಎಂದು ವರದಿಯಾಗಿದೆ.

author img

By

Published : Jul 20, 2021, 8:53 AM IST

http://10.10.50.80:6060//finalout3/odisha-nle/thumbnail/20-July-2021/12512787_958_12512787_1626745853527.png

ಇಸ್ಲಾಮಾಬಾದ್​ (ಪಾಕಿಸ್ತಾನ): ಭಾರತದಲ್ಲಿ ಇಸ್ರೇಲಿ ಮೂಲದ ಪೆಗಾಸಸ್​ ಸ್ಪೈವೇರ್ ಸಾಫ್ಟ್​ವೇರ್ ಕುರಿತು ವಿವಾದ ಸೃಷ್ಟಿಯಾಗಿದೆ. ಜನಪ್ರತಿನಿಧಿಗಳು, ಪತ್ರಕರ್ತರು ಸೇರಿ ಖ್ಯಾತನಾಮರ ಮೇಲೆ ಕೇಂದ್ರ ಕದ್ದಾಲಿಕೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಆದರೆ, ಇದೀಗ ಪಾಕಿಸ್ತಾನ ಪಿಎಂ ಇಮ್ರಾನ್ ಖಾನ್ ಕೂಡ ಈ ಸ್ಪೈವೇರ್ ಕಣ್ಗಾವಲಿಗೆ ಒಳಗಾಗಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಫ್ರಾನ್ಸ್‌ನ ಫಾರ್‌ಬಿಡನ್ ಸ್ಟೋರೀಸ್‌ ಸಮೂಹ ನಡೆಸಿದ ತನಿಖಾ ವರದಿಯನ್ನು ಭಾರತ ಸೇರಿ ವಿಶ್ವದ 15 ಮಾಧ್ಯಮ ಸಂಸ್ಥೆಗಳ ಜತೆ ಹಂಚಿಕೊಂಡಿದೆ.

ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಭಾರತದ 1,000ಕ್ಕೂ ಹೆಚ್ಚು ದೂರವಾಣಿ ಸಂಖ್ಯೆಗಳು ಕಣ್ಗಾವಲು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರೆ, ನೂರಾರು ಜನರು ಪಾಕಿಸ್ತಾನದವರಾಗಿದ್ದರು, ಇದರಲ್ಲಿ ಒಂದು ಪ್ರಧಾನಿ ಇಮ್ರಾನ್ ಸಹ ಒಮ್ಮೆ ಬಳಸಿದ್ದರು. ಆದರೆ, ಪಿಎಂ ಇಮ್ರಾನ್ ಅವರ ಸಂಖ್ಯೆಯ ಕಣ್ಗಾವಲು ಪ್ರಯತ್ನ ಯಶಸ್ವಿಯಾಗಿದೆಯೇ ಎಂಬುದರ ಕುರಿತು ಪೋಸ್ಟ್ ಬಹಿರಂಗಪಡಿಸಿಲ್ಲ.

ಈ ನಡುವೆ ಭಾರತದಲ್ಲಿ ಬಳಸಲಾದ 300 ಮೊಬೈಲ್ ಫೋನ್ ಸಂಖ್ಯೆಗಳಲ್ಲಿ ಮಂತ್ರಿಗಳು, ಪ್ರತಿಪಕ್ಷ ನಾಯಕರು, ಪತ್ರಕರ್ತರು, ವಿಜ್ಞಾನಿಗಳು ಈ ಪಟ್ಟಿಯಲ್ಲಿದ್ದರು ಎಂದು ದಿ ವೈರ್ ವರದಿ ಮಾಡಿದೆ.

ಆದರೆ, 45ಕ್ಕೂ ಹೆಚ್ಚಿನ ದೇಶಗಳು ಪೆಗಾಸಸ್​ ಬಳಕೆ ಮಾಡುತ್ತಿರುವಾಗ ಭಾರತವನ್ನು ಮಾತ್ರ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ. ಮೊಬೈಲ್​ ಫೋನ್ ಹ್ಯಾಕ್​ ಮಾಡಿರುವುದರಲ್ಲಿ ಆಡಳಿತ ಪಕ್ಷದ ಪಾತ್ರವಿದೆ ಎಂದು ಹೇಳುವುದಕ್ಕೆ ವಿರೋಧ ಪಕ್ಷದ ಬಳಿ ಒಂದೇ ಒಂದು ಚಿಕ್ಕ ಸಾಕ್ಷಿ ಕೂಡ ಇಲ್ಲ.

ಈ ಸುದ್ದಿ ಬ್ರೇಕ್ ಮಾಡಿರುವ 'ದಿ ವೈರ್'​ ಈ ಹಿಂದೆ ಕೂಡ ಅನೇಕ ತಪ್ಪು ಸುದ್ದಿ ಬಿತ್ತರಿಸಿರುವ ಉದಾಹರಣೆಗಳಿವೆ ಎಂದು ಮಾಜಿ ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದು, ಈ ಆರೋಪವನ್ನ ಕೇಂದ್ರ ಸಂಪೂರ್ಣ ತಳ್ಳಿಹಾಕಿದೆ.

ಓದಿ: ಪೆಗಾಸಸ್​... ಏನಿದು ವಿವಾದ, ಯಾರೆಲ್ಲ ಟಾರ್ಗೆಟ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.