ETV Bharat / international

ಸಾರ್ಕ್​ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ದ ಪಾಕ್ ಪ್ರತಿನಿಧಿ ವಿರುದ್ಧ ಮಾಸ್ಕ್​ ಕಳ್ಳಸಾಗಾಣಿಕೆ ಆರೋಪ - ಪಾಕ್ ಪ್ರತಿನಿಧಿ ವಿರುದ್ಧ ಮಾಸ್ಕ್​ ಕಳ್ಳಸಾಗಾಣಿಕೆ ಆರೋಪ

ಕೊರೊನಾ ಸೋಂಕಿನ ನಿಯಂತ್ರಣ ಕುರಿತು ಭಾನುವಾರ ನಡೆದ ಸಾರ್ಕ್ ದೇಶಗಳ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಪ್ರತಿನಿಧಿ ವಿರುದ್ಧ ಮಾಸ್ಕ್​ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾದ ಆರೊಪ ಕೇಳಿಬಂದಿದೆ.

Pak's representative at SAARC,ಪಾಕ್ ಪ್ರತಿನಿಧಿ ವಿರುದ್ಧ ಮಾಸ್ಕ್​ ಕಳ್ಳಸಾಗಾಣಿಕೆ ಆರೋಪ
ಪಾಕ್ ಪ್ರತಿನಿಧಿ ವಿರುದ್ಧ ಮಾಸ್ಕ್​ ಕಳ್ಳಸಾಗಾಣಿಕೆ ಆರೋಪ
author img

By

Published : Mar 16, 2020, 2:06 PM IST

ಲಾಹೋರ್(ಪಾಕಿಸ್ತಾನ): 20 ಮಿಲಿಯನ್ ಫೇಸ್ ಮಾಸ್ಕ್​ಗಳನ್ನು ವಿದೇಶಗಳಿಗೆ ಕಳ್ಳಸಾಗಣೆ ಮಾಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಕೊರೊನಾ ವೈರಸ್ ಕುರಿತು ಸಾರ್ಕ್ ವಿಡಿಯೋ ಕಾನ್ಫರೆನ್ಸ್‌ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆಯ್ಕೆ ಮಾಡಿದ್ದಾರೆ.

ಕೊರೊನಾ ವೈರಸ್ ಕುರಿತು ಭಾನುವಾರ ನಡೆದ ಸಾರ್ಕ್ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಪ್ರತಿನಿಧಿ ಜಾಫರ್ ಮಿರ್ಜಾ ವಿರುದ್ಧ ಮಾಸ್ಕ್​ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ ಆರೋಪದ ಮೇಲೆ ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ) ತನಿಖೆ ನಡೆಸುತ್ತಿದೆ.

ತನಿಖಾ ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ, ಆರೋಗ್ಯ ಕುರಿತು ಪ್ರಧಾನಿ ಇಮ್ರಾನ್ ಖಾನ್ ಅವರ ವಿಶೇಷ ಸಹಾಯಕರಾಗಿರುವ ಮಿರ್ಜಾ ವಿರುದ್ಧದ ಆರೋಪಗಳ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಇಸ್ಲಾಮಾಬಾದ್ ವಲಯದ ಎಫ್‌ಐಎ ನಿರ್ದೇಶಕರಿಗೆ ನಿರ್ದೇಶಿಸಲಾಗಿದೆ. ಈ ಕುರಿತು 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ತಿಳಿಸಿದೆ.

ಪಾಕಿಸ್ತಾನ ಯಂಗ್ ಫಾರ್ಮಸಿಸ್ಟ್ ಅಸೋಸಿಯೇಷನ್ (ಪಿವೈಪಿಎ) ಪ್ರತಿನಿಧಿ ಡಾ.ಫರ್ಖಾನ್ ಇಬ್ರಾಹಿಂ ಸಲ್ಲಿಸಿರುವ ದೂರಿನಲ್ಲಿ, ಮಿರ್ಜಾ ಮತ್ತು ಡ್ರಗ್ ರೆಗ್ಯುಲೇಟರಿ ಅಥಾರಿಟಿ ಆಫ್ ಪಾಕಿಸ್ತಾನ (ಡಿಆರ್‌ಪಿ) ಸಹಾಯದಿಂದ 20 ಮಿಲಿಯನ್ ಫೇಸ್ ಮಾಸ್ಕ್‌ಗಳನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.