ಇಸ್ಲಮಾಬಾದ್: ಕಳೆದ ವರ್ಷ ನವೆಂಬರ್ನಲ್ಲಿ ಪಾಕ್ ಸಾಗರ ಭದ್ರತಾ ಸಂಸ್ಥೆ ಬಂಧಿಸಿದ್ದ 20 ಭಾರತೀಯ ಮೀನುಗಾರರನ್ನು ಇಂದು ಪಾಕ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸಲಿದೆ.
ಪಾಕಿಸ್ತಾನಕ್ಕೆ ಒಳಪಡುವ ಸಮುದ್ರದ ಸರಹದ್ದಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆಯು ಆಂಧ್ರ ಪ್ರದೇಶ ಮೂಲದ 20 ಮೀನುಗಾರರನ್ನು ಬಂಧಿಸಿ ಲಾಹೋರ್ನ ಮರ್ಲಿರ್ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸಿತ್ತು.
ನಿನ್ನೆ ಸಂಜೆ 3 ಗಂಟೆಗೆ ಈ ಮೀನುಗಾರರನ್ನು ಬಿಡುಗಡೆಗೊಳಿಸಲಾಗಿದ್ದು, ಇಂದು ವಾಘಾ ಗಡಿಯಲ್ಲಿ ಸಂಜೆ 5 ಗಂಟೆಗೆ ಈ ಮೀನುಗಾರರನ್ನು ಪಾಕ್ ಭಾರತಕ್ಕೆ ಹಸ್ತಾಂತರಿಸಲಿದೆ.
ಆಂಧ್ರ ಪ್ರದೇಶದ ಗುಂಟೂರು ಶಾಸಕ ಮೋಪಿದೇವಿ ವೆಂಕಟರಮಣ ಈ ಮೀನುಗಾರರನ್ನು ಕರೆತರಲು ತೆರಳುತ್ತಿದ್ದಾರೆ.