ಇಸ್ಲಾಮಾಬಾದ್(ಪಾಕಿಸ್ತಾನ): ಭಾರತದ ಬಲಿಷ್ಠ ರಫೇಲ್ ಯುದ್ಧ ವಿಮಾನ ಎದುರಿಸಲು ಪಾಕ್ ಇದೀಗ ಚೀನಾ ತಯಾರಿಸಿರುವ J-10C ಫೈಟರ್ ಜೆಟ್ ಖರೀದಿ ಮಾಡಿದ್ದು, ಇಂದು ಅಧಿಕೃತವಾಗಿ ತನ್ನ ವಾಯುಪಡೆಗೆ ಸೇರ್ಪಡೆ ಮಾಡಿಕೊಂಡಿದೆ.
-
Prime Minister Imran Khan inspected the modern fighter aircraft #J10C after their formal induction into Pakistan Air Force at Kamra Base. pic.twitter.com/jXb5sTfCeS
— Prime Minister's Office, Pakistan (@PakPMO) March 11, 2022 " class="align-text-top noRightClick twitterSection" data="
">Prime Minister Imran Khan inspected the modern fighter aircraft #J10C after their formal induction into Pakistan Air Force at Kamra Base. pic.twitter.com/jXb5sTfCeS
— Prime Minister's Office, Pakistan (@PakPMO) March 11, 2022Prime Minister Imran Khan inspected the modern fighter aircraft #J10C after their formal induction into Pakistan Air Force at Kamra Base. pic.twitter.com/jXb5sTfCeS
— Prime Minister's Office, Pakistan (@PakPMO) March 11, 2022
ಕಳೆದ ಡಿಸೆಂಬರ್ ತಿಂಗಳಲ್ಲಿ ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಚೀನಾದ 25 J-10C ಫೈಟರ್ ಜೆಟ್ ಖರೀದಿಗೆ ಸಹಿ ಹಾಕಿದ್ದರು. ಇದೀಗ ಎಲ್ಲ ಪೈಟರ್ ಜೆಟ್ಗಳು ಪಾಕಿಸ್ತಾನದ ವಾಯುಪಡೆ ಸೇರಿಕೊಂಡಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಖುದ್ದಾಗಿ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಫೈಟರ್ ಜೆಟ್ಗಳನ್ನ ವಾಯುಸೇನೆಗೆ ವಿಲೀನಗೊಳಿಸಿದ ನಂತರ ಮಾತನಾಡಿದ ಇಮ್ರಾನ್ ಖಾನ್, ಈ ಪ್ರದೇಶದಲ್ಲಿ ಭೀತಿ ಹುಟ್ಟಿಸುವ ಕೆಲಸ ಮಾಡಲಾಗ್ತಿದ್ದು, ಅದಕ್ಕೆ ತಕ್ಕ ಉತ್ತರ ನೀಡಲು ಇದೀಗ ಈ ಫೈಟರ್ ಜೆಟ್ ಖರೀದಿ ಮಾಡಲಾಗಿದೆ. ಇದು ನಮ್ಮ ರಕ್ಷಣಾ ವ್ಯವಸ್ಥೆಗೆ ದೊಡ್ಡ ಬಲ ಎಂದಿದ್ದಾರೆ.
-
Pakistan’s Prime Minister Imran Khan to attend the induction ceremony of J-10C fighter jets into Pakistan Air Force today pic.twitter.com/EfyVyZtN80
— Sana Jamal (@Sana_Jamal) March 11, 2022 " class="align-text-top noRightClick twitterSection" data="
">Pakistan’s Prime Minister Imran Khan to attend the induction ceremony of J-10C fighter jets into Pakistan Air Force today pic.twitter.com/EfyVyZtN80
— Sana Jamal (@Sana_Jamal) March 11, 2022Pakistan’s Prime Minister Imran Khan to attend the induction ceremony of J-10C fighter jets into Pakistan Air Force today pic.twitter.com/EfyVyZtN80
— Sana Jamal (@Sana_Jamal) March 11, 2022
ಇದನ್ನೂ ಓದಿ: ರಷ್ಯಾದಿಂದ ಥರ್ಮೋಬ್ಯಾರಿಕ್ ಶಸ್ತ್ರಗಳ ಬಳಕೆ ದೃಢ: ಬ್ರಿಟನ್
ಆಧುನಿಕ ಜೆಟ್ ತಯಾರು ಮಾಡಲು ಹಲವು ವರ್ಷಗಳ ಕಾಲ ತೆಗೆದುಕೊಳ್ಳುವ ಈ ಸಮಯದಲ್ಲಿ ಚೀನಾ ಕೇವಲ 8 ತಿಂಗಳಲ್ಲಿ ನಮಗೆ ಈ ಫೈಟರ್ ಜೆಟ್ ಒದಗಿಸಿದ್ದು, ಅದಕ್ಕೆ ಧನ್ಯವಾದಗಳು ತಿಳಿಸಿದ್ದಾರೆ.ಇದೇ ವೇಳೆ ಭಾರತದ ಹೆಸರು ಉಲ್ಲೇಖ ಮಾಡದೇ ವಾಗ್ದಾಳಿ ನಡೆಸಿದ ಇಮ್ರಾನ್ ಖಾನ್, ಯಾವುದೇ ದೇಶ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುವ ಮೊದಲು ಎರಡು ಸಲ ಯೋಚನೆ ಮಾಡಬೇಕು. ನಮ್ಮ ಸಶಸ್ತ್ರ ಪಡೆಗಳು ಯಾವುದೇ ರೀತಿಯ ಬೆದರಿಕೆ ಎದುರಿಸಲು ಸುಸಜ್ಜಿತವಾಗಿದ್ದು, ಅದಕ್ಕಾಗಿ ತರಬೇತಿ ಪಡೆದುಕೊಂಡಿವೆ ಎಂದರು.